ಶಿವಮೊಗ್ಗದ ಸುಹಾಸ್ ಯತಿರಾಜ್‍ಗೆ ಏಷ್ಯನ್ ಪ್ಯಾರಾ ಗೇಮ್‌ನಲ್ಲಿ ಚಿನ್ನದ ಪದಕ

0 207

ಶಿವಮೊಗ್ಗ: ಹಾಂಗ್‌ಝೌನಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಶಿವಮೊಗ್ಗದ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ನ ಎಸ್.ಎಲ್-4 ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.


ಮಲೇಷ್ಯಾದ ಮೊಹಮ್ಮದ್ ಅಮೀನ್ ಎದುರು 13-21, 21-18, 21-09ರಿಂದ ಗೆದ್ದಿದ್ದಾರೆ. 2018ರ ಆವೃತ್ತಿಯಲ್ಲಿ ಕಂಚು ಮತ್ತು 2021ರ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್ ಈ ಬಾರಿ ಸ್ವರ್ಣ ಪದಕ ಪಡೆದಿದ್ದಾರೆ.
ಶಿವಮೊಗ್ಗದ ವಿನೋಬನಗರದ ನಿವಾಸಿಯಾಗಿರುವ ಯತಿರಾಜ್-ಜಯಶ್ರೀಯವರ ಪುತ್ರನಾಗಿರುವ ಸುಹಾಸ್ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿ ಸೂರತ್ಕಲ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.


2007ರಲ್ಲಿ ಐಎಎಸ್ ಪಾಸಾಗಿ ಉತ್ತರ ಪ್ರದೇಶದಲ್ಲಿ 12 ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಸುಹಾಸ್ ಈಗ ಲಕ್ನೋದಲ್ಲಿ ಕ್ರೀಡಾ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ಸಹ ಐಎಎಸ್ ಅಧಿಕಾರಿಯಾಗಿದ್ದಾರೆ.

Leave A Reply

Your email address will not be published.

error: Content is protected !!