ಶಿವಮೊಗ್ಗ ; ನಿಗೂಢ ಬಾಕ್ಸ್‌ನಲ್ಲಿ ಸಿಕ್ಕಿದ್ದೇನು ?

0 726

ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಗಳ ಬೀಗವನ್ನು ಸ್ಫೋಟಗೊಳಿಸಿ ತೆರೆಯಲಾಗಿದೆ. ಮೇಡ್ ಇನ್ ಬಾಂಗ್ಲಾದೇಶ ಬರಹವುಳ್ಳ ಎರಡು ಬಾಕ್ಸ್ ಗಳು ಆತಂಕವನ್ನು ಸೃಷ್ಟಿ ಮಾಡಿದ್ದವು. ಇನ್ನು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶಿವಮೊಗ್ಗಕ್ಕೆ ತೆರಳಿತ್ತು.

ಆದರೆ ಮಳೆ ಜೋರಾಗಿ ಸುರಿಯುತ್ತಿರೊ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಇಂದು ಬೆಳಗಿನಜಾವ ಕ್ರಷರ್ ಕಲ್ಲು ಸ್ಪೋಟಕ ಮಾದರಿಯಲ್ಲಿ ಬೀಗ ಒಡೆಯಲಾಗಿದೆ. ತಡರಾತ್ರಿ 2:20ಕ್ಕೆ ಮೊದಲ ಪೆಟ್ಟಿಗೆ ಮತ್ತು ಬೆಳಗಿನಜಾವ 3:24ಕ್ಕೆ ಎರಡನೇ ಪೆಟ್ಟಿಗೆಯ ಬೀಗ ಒಡೆಯಲಾಗಿದೆ.

ಈ ಬಾಕ್ಸ್ ಗಳಲ್ಲಿ ಬಿಳಿ ಪೌಡರ್ ಮಾದರಿಯ ವಸ್ತು ಪತ್ತೆಯಾಗಿದೆ. ಸದ್ಯಕ್ಕೆ ಈ ಪೌಡರ್ ಯಾವುದು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಈ ಪೌಡರ್ ಮಾದರಿಯನ್ನು ಎಫ್ಎಸ್ಎಲ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ.

ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆಯಾಗಿರೋ ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಅಧಿಕಾರಿಗಳು ಬಾಕ್ಸ್​ ಓಪನ್ ಮಾಡಿದ್ದು, ಆತಂಕ ನಿವಾರಣೆಯಾಗಿದೆ.

ಪತ್ತೆಯಾಗಿರುವ ಎರಡು ಹೊಸ ಟ್ರಂಕ್ ಗಳು. ಒಂದೊಂದು ಟ್ರಂಕ್ ನಲ್ಲಿ ಎರಡು ಬ್ಯಾಗ್ ಇದೆ. ಗೊಬ್ಬರದ ಚೀಲದ ಮಾದರಿ ಬ್ಯಾಗ್ ಇವೆ. ವೈಟ್ ಪೌಡರ್, ಮುಖಕ್ಕೆ ಹಚ್ಚೋ ಪೌಡರ್ ಅಂತು ಅಲ್ಲ. ಎರಡು ಬಾಕ್ಸ್ ಗಳಲ್ಲಿ ಬಿಳಿ ಪೌಡರ್ ಇದೆ.
– ಚನ್ನಬಸಪ್ಪ, ಶಿವಮೊಗ್ಗ ಶಾಸಕ

Leave A Reply

Your email address will not be published.

error: Content is protected !!