ಶಿವಮೊಗ್ಗ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯವಾದಿ ಇನ್ನಿಲ್ಲ !

0 59

ಶಿವಮೊಗ್ಗ: ತಿಲಕ್ ನಗರದ ನಿವಾಸಿ, ಖ್ಯಾತ ನ್ಯಾಯವಾದಿ ಎನ್.ಮಂಜುಳಾದೇವಿ (69) ಅವರು ಭಾನುವಾರ ಅನಾರೋಗ್ಯದಿಂದ ನಿಧನರಾದರು.


ಕಳೆದ 46 ವರ್ಷಗಳಿಂದ ವಕೀಲಿ ವೃತ್ತಿ ಮಾಡಿದ್ದ ಅವರು ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ನಿಕಟವರ್ತಿ ಆಗಿದ್ದರು. ಶಿವಮೊಗ್ಗ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯವಾದಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳೂ ಆಗಿದ್ದರು.

ತುಂಗಭದ್ರಾ ಉಳಿಸಿ ಹೋರಾಟ, ಅಣ್ಣಾ ಹಜಾರೆ ಹೋರಾಟ ಸಮಿತಿ, ಮಹಿಳಾ ಜಾಗೃತಿ, ಶಾಲಾ ಗೇಣಿ ಜಮೀನು ಹೋರಾಟ ಸೇರಿದಂತೆ ಹಲವು ಜನಪರ ಸಂಘಟನೆಗಳಲ್ಲಿ ಪಾಲ್ಗೊಂಡಿದ್ದರು.
ಇಂದು ಬೆಳಗ್ಗೆ ತೀರ್ಥಹಳ್ಳಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಿತು.

Leave A Reply

Your email address will not be published.

error: Content is protected !!