ಶಿವಮೊಗ್ಗ ; ಮತಗಟ್ಟೆ ಬದಲಾವಣೆ

0 0

ಶಿವಮೊಗ್ಗ:‌111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಳ್ಳಂಗಿರಿಯಲ್ಲಿ ಇತ್ತು. ಹಾಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಈ ಕಟ್ಟಡವನ್ನು ತೆರವುಗೊಳಿಸಿರುವುದರಿಂದ ಅದೇ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪಿಳ್ಳಂಗೆರೆ ಶಾಲಾ ಕಟ್ಟಡದಲ್ಲಿ ಈ ಮತಗಟ್ಟೆಗಳನ್ನು ಬದಲಾವಣೆ ಮಾಡಿ ಭಾರತ ಚುನಾವಣಾ ಆಯೋಗವು ಅನುಮೋದಿಸಿರುತ್ತದೆ.


ಮತಗಟ್ಟೆ ಸಂಖ್ಯೆ 155 ಹಾಗೂ 156 ಸರ್ಕಾರಿ ಪ್ರೌಢ ಶಾಲೆ ಪಿಳ್ಳಂಗೆರೆಯಲ್ಲಿ ಮುಂದುವರೆಯುತ್ತದೆ ಎಂಬ ಅಂಶವನ್ನು ಮತದಾರರಿಗೆ ತಿಳಿಯಪಡಿಸಿದೆ ಎಂದು ಸಹಾಯಕ ಮತದಾರರ ನೊಂದಣಾಧಿಕಾರಿ 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!