ಶ್ರದ್ದಾಭಕ್ತಿಯೊಂದಿಗೆ ಗೌರಿ-ಗಣೇಶನನ್ನು ಸಂಭ್ರಮ ಸಡಗರದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡ ಭಕ್ತರು
ರಿಪ್ಪನ್‌ಪೇಟೆ: ಗೌರಿ-ಗಣೇಶನನ್ನು ಇಂದು ಇಲ್ಲಿನ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಮುತ್ತೈದೆಯರು ಗೌರಿಯನ್ನು ಶ್ರದ್ದಾಭಕ್ತಿಯಿಂದ ತರುವುದರೊಂದಿಗೆ ಪ್ರತಿಷ್ಠಾಪನಾ ಪೂಜೆಯೊಂದಿಗೆ ಸಂಭ್ರಮದೊಂದಿಗೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ ಮತ್ತು ಪದಾಧಿಕಾರಿಗಳಾದ ಎನ್.ಸತೀಶ್, ಆಶಾ ಸತೀಶ್, ಎಂ.ಡಿ.ಇಂದ್ರಮ್ಮ, ಸರಸ್ವತಿ, ವನಮಾಲ, ಜಯಲಕ್ಷ್ಮಿ, ಗಣೇಶ ಕಾಮತ್, ಅರವಿಂದ,
ಯಶೋಧೀಶ್ವರಪ್ಪಗೌಡ ಗವಟೂರು, ಇನ್ನಿತರ ಹಲವು ಪಾಲ್ಗೊಂಡು ಗೌರಿ ಪೂಜೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 56ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಸಮಿತಿಯವರು ಮೆರವಣಿಗೆ ಮೂಲಕ ಕರೆತರುವ ಮೂಲಕ ವಿನಾಯಕ ವೃತ್ತದಲ್ಲಿ ಹಿಂದೂ ಭಗಧ್ವಜವನ್ನು ಹಾರಿಸಿ ಗಣಪತಿ ದೇವಸ್ಥಾನದ ಹಿಂಭಾಗದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದ ತಿಲಕ ಮಂಟಪದಲ್ಲಿ ಪ್ರತಿಷ್ಟಾಪನಾ ಪೂಜೆ ನೆರವೇರಿಸಲಾಯಿತು.
ಹಿಂದೂ ಭಗವದ್ವಜವನ್ನು ನಿವೃತ್ತ ಸೇನಾನಿ ವೀರಭದ್ರಪ್ಪ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ ಪವಾರ್, ಎನ್.ಸತೀಶ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಆರ್.ರಾಘವೇಂದ್ರ, ಗ್ರಾ.ಪಂ.ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ರಾಘು, ಯೋಗೇಶ್, ಡಿ.ಈ.ನಾಗಭೂಷಣ, ವೀರಭದ್ರಪ್ಪಗೌಡ, ವೈ.ಜೆ.ಕೃಷ್ಣ, ಬೇಕರಿ ನಾರಾಯಣ, ತೀರ್ಥೇಶ, ವೈ.ಜೆ.ಭಾಸ್ಕರ್, ಕೃಷ್ಣೋಜಿರಾವ್, ಸುಹಾಸ್, ಶ್ರೀನಿವಾಸ್ ಆಚಾರ್, ಆರ್.ಎನ್.ಮಂಜುನಾಥ, ಗಾಡಿ ಶೇಖರ್, ಜಯಲಕ್ಷ್ಮಿ ಮೋಹನ್, ಹೆಚ್.ಎನ್.ಜಯದೇವ, ರತೇಶ್ವರಪ್ಪಗೌಡ, ಮಳಕೊಪ್ಪ ಈಶ್ವರಪ್ಪ, ಅಶೋಕ ಹಾಲುಗುಡ್ಡೆ ಇನ್ನಿತರರು ಇದ್ದರು.