ಶ್ರಮದ ದುಡಿಮೆಯಿಂದ ಯುವಜನಾಂಗ ವಿಮುಖರಾಗುತ್ತಿದ್ದಾರೆ ; ಆರಗ ಜ್ಞಾನೇಂದ್ರ ವಿಷಾದ

0 130

ರಿಪ್ಪನ್‌ಪೇಟೆ: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸುಲಭದಲ್ಲಿ ಹಣ ಮಾಡುವುದನ್ನೇ ಗುರಿಯನ್ನಾಗಿಸಿಕೊಂಡಿದ್ದು ಶ್ರಮವಹಿಸಿ ದುಡಿಮೆಯಿಂದ ವಿಮುಖರಾಗುತ್ತಿದ್ದಾರೆಂದು ಮಾಜಿ ಗೃಹ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ ವಿಷಾದದ ಸಂಗತಿಯಾಗಿದೆ ಎಂದರು.


ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿನ ಒಕ್ಕಲಿಗರ ಕುವೆಂಪು ಸಭಾಭವನದಲ್ಲಿ ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದವರು ಆಯೋಜಿಸಲಾದ 7 ದಿನಗಳ ಎನ್.ಎಸ್.ಎಸ್. ಕಾರ್ಯಕ್ರಮದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ, ಶಿಬಿರಾರ್ಥಿಗಳು ಶಿಬಿರದಲ್ಲಿ ಮಾಡುವ ಚಟುವಟಿಯನ್ನು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳುವ ಮೂಲಕ ತಾವು ಭಾವಿ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ ಮುಂದಿನ ಯುವಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗುವಂತೆ ಮಾಡಿದಾಗ ಮಾತ್ರ ಇಂತಹ ಶಿಬಿರಕ್ಕೆ ಅರ್ಥ ಬರುತ್ತದೆಂದರು.


ಶಿಬಿರಾರ್ಥಿಗಳು ತಮ್ಮ ವೃತ್ತಿ ಬದುಕಿನಲ್ಲಿ ಕೀಳರಿಮೆಯನ್ನು ಬಿಟ್ಟು ಸ್ವತಂತ್ರವಾಗಿ ಶಿಸ್ತು ಬದ್ದ ಬದುಕಿನೊಂದಿಗೆ ಪರಿವರ್ತನೆಯಾಗ ಬೇಕು. ಸ್ವಾರ್ಥಿಗಳಾಗದೆ ಸಹೋದ್ಯೋಗಿಗಳೊಂದಿಗೆ ಪೋಷಕರೊಂದಿಗೆ ಹೃದಯವಂತರಾಗಿ ಬೆಳೆದು ಬದುಕಿದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆಂದರು.
ಇದೇ ಸಂದರ್ಭದಲ್ಲಿ ಭಾರತದ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.


ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಟಿ.ಎಂ.ಪೂರ್ಣಿಮಾ ವಹಿಸಿದ್ದರು.
ಮುಖ್ಯಆತಿಥಿಗಳಾಗಿ ಕೆರೆಹಳ್ಳಿ-ಹುಂಚಾ ಹೋಬಳಿಯ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಒಕ್ಕಲಿಗರ ಸಮಾಜದ ಉಪಾಧ್ಯಕ್ಷ ಕಲ್ಲೂರು ತೇಜಮೂರ್ತಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾ.ಪಂ.ಸದಸ್ಯ ಸುಂದರೇಶ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹಸನಬ್ಬ, ಒಕ್ಕಲಿಗ ಸಮಾಜದ ಖಜಾಂಚಿ ಟಿ.ಎಂ.ಕೃಷ್ಣಮೂರ್ತಿ, ಶ್ರೀಧರ ಹಾಗೂ ಯೋಗೇಂದ್ರಗೌಡ, ತಾಲ್ಲೂಕು ರೈತ ಸಂಘದ ಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ ಮತ್ತು ಶಿಬಿರಾರ್ಥಿಗಳು ಹಾಗೂ ವಿದ್ಯಾಲಯದ ಸಿಬ್ಬಂದಿವರ್ಗ ಹಾಜರಿದ್ದರು.


ಪ್ರಾರ್ಥನಾ ಪ್ರಾರ್ಥಿಸಿದರು. ಸ್ವಾತಿ ವರದಿ ವಾಚನ ಮಾಡಿದರು, ಶಿಬಿರಾಧಿಕಾರಿ ಪ್ರಕಾಶ ಎನ್.ಜಿ.ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.

error: Content is protected !!