ಸಂವಿಧಾನದ ಅರಿವು ಮೂಡಿಸಲು ನ್ಯಾಯಾಧೀಶ ರವಿಕುಮಾರ್ ಕೆ ಸಲಹೆ

0 654

ಹೊಸನಗರ: ಯುವಪೀಳಿಗೆಗೆ ಸಂವಿಧಾನದ (Constitution) ಮಹತ್ವ ಹಾಗೂ ಶ್ರೇಷ್ಠತೆಯನ್ನು ತಿಳಿಸುವ ಕೆಲಸವಾಗಬೇಕು ಎಂದು ಹೊಸನಗರ (Hosanagara) ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆ. ಸಲಹೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸಂವಿಧಾನ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, 1949ನೇ ನವೆಂಬರ್ 26ರಂದು ಸಂವಿಧಾನವನ್ನು ಜಾರಿಗೆ ತರಲಾಗಿದ್ದು 1950ನೇ ಜನವರಿ26 ರಂದು ಅದನ್ನು ನಮ್ಮ ಭಾರತ ಸರ್ಕಾರ ಜಾರಿಗೆ ತಂದಿದ್ದು ಆದರೆ ಭಾರತ ದೇಶದ ಕೆಲವು ಜನರಿಗೆ ಸಂವಿಧಾನದ ಬಗ್ಗೆ ಪರಿಕಲ್ಪನೆ ಇರುವುದಿಲ್ಲ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಸಂವಿಧಾನದ ಅರಿವು ಬಗ್ಗೆ ಎಲ್ಲ ಪಠ್ಯಗಳಲ್ಲಿ ಅಳವಡಿಸಲಾಗಿದ್ದು 2010ನೇ ಇಸವಿಯ ನಂತರ ಎಲ್ಲ ಪದವಿ ಶಾಲೆಗಳ ಪಠ್ಯಗಳಲ್ಲಿ ಅಳವಡಿಸಲಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅಲ್ಪ-ಸ್ವಲ್ಪ ಓದಿ ತಿಳಿದುಕೊಂಡಿದ್ದರೂ ಸಂವಿಧಾನದ 15 ಮತ್ತು 16ನೇ ಆಕ್ಟ್ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುತ್ತಿರುವುದು ತಪ್ಪು ಸಂದೇಶ ಹೋಗುತ್ತಿದ್ದು ತಪ್ಪು ಸಂದೇಶ ತಪ್ಪು ಕಲ್ಪನೆ ಬಗ್ಗೆ ಜನರಲ್ಲಿ ಹೋಗಲಾಡಿಸಬೇಕಾದರೆ ಸಂವಿಧಾನದ ಪೂರ್ಣ ಕಾಯ್ದೆಯನ್ನು ಓದಿ ತಿಳಿದು ಜನರಿಗೆ ತಿಳಿಸಿದರೆ ಭಾರತ ದೇಶದ ಸಂವಿಧಾನದ ಅರಿವು ಜನರಲ್ಲಿ ಮೂಡುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ, ಇಡೀ ವಿಶ್ವದಲ್ಲಿಯೇ ನಮ್ಮ ಬಾರತ ದೇಶದ ಸಂವಿಧಾನ ಶ್ರೇಷ್ಠ ಹಾಗೂ ಲಿಖಿತವಾಗಿದ್ದು ಭಾರತ ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ಅರ್ಥಿಕ ಹಾಗೂ ನ್ಯಾಯ ಸಮ್ಮತವಾದ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ರಚಿಸಲಾಗಿದ್ದು ಸಂವಿದಾನದ ಪ್ರತಿಯೊಂದು ಕಾಯ್ದೆಗಳು ತಿಳಿದುಕೊಂಡಾಗ ಮಾತ್ರ ಭಾರತ ದೇಶದ ಸಂವಿದಾನದ ಅರಿವು ಜನರಲ್ಲಿ ಮೂಡುತ್ತದೆ ಎಂದರು.

ಹೊಸನಗರ ತಹಶೀಲ್ದಾರ್ ರಶ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಭಾರತ ದೇಶದಲ್ಲಿ ಹುಟ್ಟಿರುವುದಕ್ಕೆ ಕೃತಜ್ಞತೆ ಅರ್ಪಿಸಿ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನುಗಳು ಕಾಯ್ದೆಗಳಿಲ್ಲ ಭಾರತ ದೇಶದ ಎಲ್ಲ ನಾಗರೀಕರು ಒಂದೇ ಕಾಯ್ದೆಯಡಿ ಬದುಕುತ್ತಿದ್ದೇವೆ. ಆದರೆ ದಕ್ಷಿಣ ಕೋರಿಯದಲ್ಲಿ ನಾಗರೀಕರು ಅಲ್ಲಿನ ಪ್ರಜೆಗಳು ಬದುಕುತ್ತಿರುವ ರೀತಿ ನೋಡಿದರೇ ನಮ್ಮ ಭಾರತ ದೇಶದ ಪ್ರಜೆಗಳಾದ ನಾವು ಸುಖ – ಸಂತೋಷದಿಂದ ಬದುಕುತ್ತಿದ್ದೇವೆ. ಪ್ರತಿಯೊಬ್ಬರು ಕಾನೂನು ಕಾಯ್ದೆಗಳನ್ನು ಪಾಲಿಸಿ ನಮ್ಮ ಸಂವಿಧಾನಕ್ಕೆ ಗೌರವ ತರುವಂತೆ ಬದುಕಬೇಕೆಂದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಹಿರಿಯಪ್ಪ ಹಾಗೂ ಗುರುಕಿರಣ್‌ರವರು ಸಂವಿಧಾನದ ಕಾಯ್ದೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಹೊಸನಗರ ಠಾಣೆಯ ಪಿಎಸ್ಐ ಶಿವಾನಂದ್ ವೈ.ಕೆ, ವಕೀಲರಾದ ಚಂದ್ರಪ್ಪ, ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ, ಆಹಾರ ನಿರೀಕ್ಷಕ ಬಾಲಚಂದ್ರ, ನ್ಯಾಯಾಲಯದ ಸಿಬ್ಬಂದಿಗಳಾದ ರೇಖಾ ಹರೀಶ್, ಗುರುರಾಜ್ ಎಲ್ಲ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!