ಸಮಟಗಾರು ಶಾಲೆಯಲ್ಲಿ ಪ್ರತಿಭಾ ಕಾರಂಜಿ | ಮಕ್ಕಳು ಪಠ್ಯ ಪುಸ್ತಕ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು

0 147ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಪ್ರತಿಭಾ ಕಾರಂಜಿಯ ಮಕ್ಕಳ ಕಲೋತ್ಸವವನ್ನು ತಮ್ಮೂರಿನ ಜಾತ್ರೆ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಹುಂಚಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಂಗಲ ದೇವರಾಜ್ ಹೇಳಿದರು.

ಹುಂಚ ಗ್ರಾಪಂ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ನಡೆಸಲು ಎಲ್ಲರ ಸಹಕಾರ ಮುಖ್ಯ. ಮಕ್ಕಳು ಪಠ್ಯ ಪುಸ್ತಕ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಪ್ರತಿಭಾ ಕಾರಂಜಿ ನಡೆಸಲಾಗುತ್ತದೆ. ಜೀವನದಲ್ಲಿ ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.


ಮಕ್ಕಳ ಸುಪ್ತ ಪ್ರತಿಭೆಗೆ ರಂಗಮಂಚಿಕೆಯಾದ ಪರಿಸರ ಸ್ನೇಹಿ ಆ್ಯಂಪಿ ಥಿಯೇಟರ್‌ಯನ್ನು ವಿನಾಯಕ ಭಟ್ ಉದ್ಘಾಟಿಸಿದರು.
ಪ್ರತಿಭಾ ಕಾರ್ಯಕ್ರಮದ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಹುಂಚ ಗ್ರಾ.ಪಂ.ಉಪಾಧ್ಯಕ್ಷ ವೆಂಕಟೆಶ್,ಸದಸ್ಯರಾದ ರಾಘವೇಂದ್ರ,ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷ ಕೃಷ್ಣನಾಯ್ಕ್, ಆಶಾ, ಪದ್ಮನಾಭರಾವ್, ಶ್ರೀಧರಮೂರ್ತಿ, ಈಶ್ವರಪ್ಪಗೌಡ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ದೀಪ, ಮುಖ್ಯಶಿಕ್ಷಕರಾದ ರತ್ನಕುಮಾರಿ, ಸಹಶಿಕ್ಷಕಿ ಅಂಬಿಕಾ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!