ಸಾಗರ – ಮಣಿಪಾಲ ಬಸ್ ಸಂಚಾರ ಪುನರಾರಂಭಕ್ಕೆ ಹಸಿರು ನಿಶಾನೆ

0 1,443

ಹೊಸನಗರ : ಮಲೆನಾಡಿನ ಜನರ ಬಹುದಿನದ ಅಪೇಕ್ಷೆಯ ಸಾಗರ – ಹೊಸನಗರ – ಸಿದ್ದಾಪುರ – ಬಾರಕೂರು – ಬ್ರಹ್ಮಾವರ – ಉಡುಪಿ – ಮಣಿಪಾಲ ಹೋಗಿ ಅದೇ ಮಾರ್ಗದಲ್ಲಿ ವಾಪಸ್ ಸಾಗರ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಶಾಸಕರು, ಅರಣ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಗುರುವಾರ ಸಂಜೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಪ್ರತಿದಿನ ಬೆಳಿಗ್ಗೆ 6:00ಕ್ಕೆ ಸಾಗರ ಬಿಡುವ ಬಸ್ ಏಳು ಗಂಟೆಗೆ ಹೊಸನಗರ ಬಿಟ್ಟು ಮೇಲೆ ತಿಳಿಸಿದ ಮಾರ್ಗದಲ್ಲಿ ಉಡುಪಿ ಮೂಲಕ 10:15ಕ್ಕೆ ಮಣಿಪಾಲ ತಲುಪಲಿದೆ.
ಪುನಃ ಮಧ್ಯಾಹ್ನ 2:00ಕ್ಕೆ ಮಣಿಪಾಲ 2:45ಕ್ಕೆ ಉಡುಪಿ ಬಿಟ್ಟು ಸಂಜೆ 5:15ಕ್ಕೆ ಹೊಸನಗರ ಬಂದು ಸಾಗರ ತಲುಪಲಿದೆ.

ಶಾಸಕರ ಈ ಪ್ರಯತ್ನಕ್ಕೆ ಕ್ಷೇತ್ರದ ಜನತೆ ಸಾರ್ವಜನಿಕರು ಅಭಿನಂದಿಸಿದ್ದಾರೆ. ಇದು ಶಾಸಕರ ಹುಟ್ಟು ಹಬ್ಬದ ಕೊಡುಗೆಯಾಗಿದೆ ಎಂದು ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!