ಸಾಹಿತಿಗಳಿಗೆ ಪ್ರೋತ್ಸಾಹಬೇಕು ; ತಿರುಪತಿ ನಾಯ್ಕ್

0 74


ಹೊಸನಗರ: ಸಾಹಿತಿಗಳಿಗೆ ಪ್ರೋತ್ಸಾಹಬೇಕು. ಕೇವಲ ಬರವಣಿಗೆ ಸಾಹಿತ್ಯವಾಗುವುದಿಲ್ಲ. ಅಕ್ಷರ ಜ್ಞಾನ ವ್ಯಾಕರಣದ ಮೇಲೆ ಹಿಡಿತ ಸಾಧಿಸಿದರೆ ಮಾತ್ರ ಸಾಹಿತ್ಯ ಲೋಕಕ್ಕೆ ಹೋಗಬಹುದೆಂದು ಸಾಹಿತಿ ಹಾಗೂ ಶಿಕ್ಷಕ ತಿರುಪತಿ ನಾಯ್ಕ್ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ತನ್ನದೇ ಆದ ಕಾರ್ಯಕ್ಷೇತ್ರ ಹೊಂದಿದೆ‌. ತನ್ನದೇ ಚೌಕಟ್ಟಿನ ಮೇಲೆ ನಿಂತಿದೆ. ಈ ಸಾಹಿತ್ಯ ಕಲೆ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಾಹಿತ್ಯವನ್ನು ಹುಡುಕಿಕೊಂಡು ಬಂದವರನ್ನು ಕೈ ಬಿಡುವುದಿಲ್ಲ ಆದರೆ ಸಾಹಿತ್ಯ ಕ್ಷೇತ್ರಕ್ಕೆ ಬೆಂಬಲ ಹಾಗೂ ಪ್ರೋತ್ಸಾಹಬೇಕು. ಒಂದು ಗಿಡಕ್ಕೆ ಬೆಳೆಸಲು ಹೇಗೆ ನೀರು ಗೊಬ್ಬರವನ್ನು ಹಾಕಿ ಜಾಗೃತಿ ಮಾಡಿ ಬೆಳೆಸುತ್ತೇವೆಯೋ ಅದೇ ರೀತಿ ಸಾಹಿತ್ಯವನ್ನು ಬೆಳೆಸಬೇಕಾಗಿದೆ ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದರು.


ನಾಗರಕೊಡಿಗೆ ಗಣೇಶ್‌ಮೂರ್ತಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ರಚನೆ ಮಾಡುವ ಪ್ರೋತ್ಸಾಹ ಸಿಕ್ಕರೇ ಪ್ರತಿ ಮನೆಯಲ್ಲಿಯು ಒಬ್ಬೊಬ್ಬ ಸಾಹಿತಿ ಹುಟ್ಟಿಕೊಳ್ಳುತ್ತಾರೆ ಎಂದರು.
ಹೆಚ್.ಆರ್. ಪ್ರಕಾಶ್, ಕು|| ಅನನ್ಯ, ಕು|| ತನುಶ್ರೀ, ತೆಜಸ್ವಿನಿ ಇನ್ನೂ ಮುಂತಾದವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.


ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ ನರಸಿಂಹರವರು ವಹಿಸಿ ಸಾಹಿತ್ಯದ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಎಸ್.ಹೆಚ್. ನಿಂಗಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ಜಯನಗರ ರಾಘವೇಂದ್ರ, ಕೆ.ಇ.ಬಿ ಗುತ್ತಿಗೆದಾರ ಪ್ರಶಾಂತ್, ಚನ್ನಬಸಪ್ಪ ಗೌಡ, ಗೀತಾ, ಅಕ್ಷತಾ, ರಮೇಶ್ ಇಕ್ಬಾಲ್ ಹೆಚ್.ಆರ್. ಪ್ರಕಾಶ್, ಎಂ.ಕೆ ವೆಂಕಟೇಶ್‌ಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!