ಸ್ಕೇಟಿಂಗ್ ಛಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗ ಜಿಲ್ಲಾ ರೋಲರ್ ಸ್ಕೇಟಿಂಗ್ ಮಕ್ಕಳಿಗೆ ಹಲವು ಪ್ರಶಸ್ತಿ

0 0


ಶಿವಮೊಗ್ಗ : ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸ್ಕೇಟಿಂಗ್ ಛಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಮಕ್ಕಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.


17ರ ವಯೋಮಿತಿಯಲ್ಲಿ ತನುಶ್ರೀ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. 14ರಿಂದ 17ವರ್ಷ ವಯೋಮಿತಿಯಲ್ಲಿ ಧನುಷ್‌ಗೆ 2ಕಂಚು 1ಬೆಳ್ಳಿ ಪದಕ ಲಭಿಸಿದೆ. ಗೋ ರಾಮಕೃಷ್ಣಗೆ 2ಚಿನ್ನ, ಮೆಲ್ಟಿಸ್ ರಿಚರ್ಡ್ 1ಕಂಚು, ಮತ್ತು ಮೆರಿಯನ್ ಅಚಪ್ಪಗೆ 1ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.


ಜೊತೆಗೆ ಭದ್ರಾವತಿಯ ತುಂಗಭದ್ರಾ ರೋಲರ್ ಸ್ಕೇಟಿಂಗ್ ಸಂಸ್ಥೆಯ ಸನ್ನಿಧಿ 3ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಈ ಪ್ರತಿಭಾನ್ವಿತ ಮಕ್ಕಳಿಗೆ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!