ಹಾನಿಗೊಳಗಾದ ಚಾರ್ಜರ್‌ಗೆ ವಿಮೆ ಪರಿಹಾರ ನೀಡದ ಸಂಸ್ಥೆಗೆ ದಂಡ ವಿಧಿಸಿದ ಗ್ರಾಹಕ ಆಯೋಗ

0 330

ಶಿವಮೊಗ್ಗ: ಹಾನಿಗೊಳಗಾದ ಚಾರ್ಜರ್‌ಗೆ ವಿಮೆ ಪರಿಹಾರ ನೀಡದ ಸಂಸ್ಥೆಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ.

ಏನಿದು ಘಟನೆ ?

ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್‍ ಚಾಲಿತ ಟಾಟಾ ಕಾರಿನ ವಿಮೆಯನ್ನು 2022ರ ನ. 06 ರಿಂದ 2023ರ ಅ.05 ಅವಧಿಗೆ ಮೆಚೋಲಮಂಡಲಮ್ ಜನರಲ್ ಇನ್ಶುರೆನ್ಸ್ ಕಂಪನಿಯಿಂದ ಪಡೆದಿದ್ದು, 2022ರ ನ.29 ರಂದು ತಮ್ಮ ಮನೆಯ ಪೋರ್ಟಿಕೋದಲ್ಲಿ ನಿಲ್ಲಿಸಿದ್ದ ಕಾರಿಗೆ ವಿದ್ಯುತ್ ಚಾರ್ಜಿಂಗ್‍ಗಾಗಿ ಚಾರ್ಜರ್‍ ಅನ್ನು ಅಳವಡಿಸಿದ್ದು, ಆಕಸ್ಮಿಕದಿಂದ ವಿದ್ಯುತ್ ಚಾರ್ಜರ್‍ ಗೆ ಹಾನಿಯಾಗಿದೆ. ಈ ಬಗ್ಗೆ ವಿಮೆ ಪರಿಹಾರ ಕೋರಿ ಕಾರಿನ ಮಾಲೀಕರು ಇನ್ಶುರೆನ್ಸ್ ಕಂಪನಿಗೆ ಸಲ್ಲಿಸಿದ ಕ್ಲೈಂ ಅನ್ನು ಪುರಸ್ಕರಿಸದ ಕಾರಣ, ಇನ್ಶುರೆನ್ಸ್ ಸಂಸ್ಥೆಯ ವಿರುದ್ಧ ಸೇವಾ ನ್ಯೂನ್ಯತೆ ಆರೋಪಿಸಿ ಮತ್ತು ಪರಿಹಾರ ಕೋರಿ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ಎರಡೂ ಪಕ್ಷಗಾರರ ವಿಚಾರಣೆ ನಡೆಸಿದ ಆಯೋಗವು ಇನ್ಶುರೆನ್ಸ್ ಕಂಪನಿ ವಿಮೆ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟ ಕಾರಣ ಮೆಟೋಲಮಂಡಲಮ್, ಜನರಲ್ ಇನ್ಶುರೆನ್ಸ್ ಕಂಪನಿಯವರು ವಿದ್ಯುತ್ ಚಾರ್ಜರ್ ಬಾಬು ರೂ.34,840 ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 7% ರಂತೆ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ರೂ.10 ಸಾವಿರಗಳನ್ನು ದೂರುದಾರರಿಗೆ ಆದ ಮಾನಸಿಕ ಹಿಂಸೆಗಾಗಿ ಮತ್ತು ರೂ.10 ಸಾವಿರಗಳನ್ನು ವ್ಯಾಜ್ಯ ವೆಚ್ಚವಾಗಿ ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇ. 10% ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ, ಬಿ. ಪಟ್ಟಣಶೆಟ್ಟಿ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಇವರನ್ನು ಒಳಗೊಂಡ ಪೀಠವು ಆದೇಶಿಸಿದೆ.

Leave A Reply

Your email address will not be published.

error: Content is protected !!