ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ ನಿಧನ !    

0 395

ತೀರ್ಥಹಳ್ಳಿ : ತಾಲೂಕಿನ ನಿವಾಸಿ ಕೋಣಂದೂರಿನ ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ (68) ಇಂದು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಮೃತರು ಕೋಣಂದೂರು ಭಾಗದಲ್ಲಿ ಪತ್ರಿಕಾ ವಿತರಕರಾಗಿ, ವರದಿಗಾರರಾಗಿ ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ತಮ್ಮ ಸೌಮ್ಯ ಮತ್ತು ಮೃದು ಸ್ವಭಾವದಿಂದ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿ ಕರ್ತವ್ಯ ನಿರ್ವಹಿಸಿ ಕೋಣಂದೂರು ಭಾಗದಲ್ಲಿ ಜನಮನ್ನಣೆ ಪಡೆದಿದ್ದರು.

ಆ ಭಾಗದಲ್ಲಿ ಭಂಡಾರಿ ಸಮುದಾಯದ ಏಳಿಗೆಗಾಗಿ ಹೆಚ್ಚು ಶ್ರಮವಹಿಸಿದವರಲ್ಲಿ ಇವರು ಒಬ್ಬರು. ಇವರು ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಶೀನಪ್ಪ ಭಂಡಾರಿ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ.

Leave A Reply

Your email address will not be published.

error: Content is protected !!