ಹೊಸನಗರಕ್ಕೆ ನೂತನ ತಹಶೀಲ್ದಾರ್ ನೇಮಕ
ಹೊಸನಗರ : ಹೊಸನಗರ ನೂತನ ತಹಶೀಲ್ದಾರ್ ಆಗಿ ರಾಜಕುಮಾರ್ ಮರತೂರಕರ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

ಹೊಸನಗರದಲ್ಲಿ ಪ್ರಭಾರ ತಹಶೀಲ್ದಾರರಾಗಿ ಇದುವರೆಗೆ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ಕೆಲಸ ಮಾಡುತ್ತಿದ್ದರು. ಈಗ ರಾಜಕುಮಾರ್ ಮರತೂರಕರ ನೇಮಕದಿಂದಾಗಿ ತಾಲೂಕು ಆಡಳಿತಕ್ಕೆ ಚುರುಕು ಸಿಗಬಹುದೆಂಬ ನಿರೀಕ್ಷೆ ಮೂಡಿದೆ.
ಶಿವಮೊಗ್ಗದ ಮೂವರು ಸೇರಿ ರಾಜ್ಯದಲ್ಲಿ ಒಟ್ಟು 22 ತಹಶೀಲ್ದಾರ್’ಗಳ ಸ್ಥಳ ನಿಯೋಜನೆ ಮಾಡಲಾಗಿದೆ. ತೀರ್ಥಹಳ್ಳಿಗೆ ಜೆ.ಬಿ.ಜಕ್ಕನಗೌಡ, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಚುನಾವಣೆ ತಹಶೀಲ್ದಾರ್, ಆರ್.ವಿ. ಮಂಜುನಾಥ್ ರವನ್ನು ನೇಮಕ ಮಾಡಲಾಗಿದೆ.