ಹೊಸನಗರದಲ್ಲಿ ಕನಕದಾಸ ಜಯಂತಿ ಆಚರಣೆ

0 716

ಹೊಸನಗರ: ಸುಮಾರು 350 ದಾಸರುಗಳಲ್ಲಿ ಅಗ್ರಪಂಥಿಯಲ್ಲಿ ಕನಕದಾಸರು (Kanakadasa) ತಮ್ಮ ಕೀರ್ತನೆಗಳ ಮೂಲಕ ಪರಮಾತ್ಮ ಶ್ರೀಕೃಷ್ಣರನ್ನೇ ತಮ್ಮತ್ತ ತಿರುಗಿಕೊಂಡ ಮಹಾಪುರುಷ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ (Hosanagara BEO) ಹೆಚ್.ಆರ್. ಕೃಷ್ಣಮೂರ್ತಿಯವರು ಹೇಳಿದರು.

ತಾಲ್ಲೂಕು ಇಲಾಖೆಯ ವತಿಯಿಂದ ತಾಲ್ಲೂಕು ಕಛೇರಿಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ನಾಡಹಬ್ಬಗಳ ಸಮಿತಿಯ ಆಶ್ರಯದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಕೀರ್ತನೆಗಳು ಶ್ರೀಸಾಮಾನ್ಯರ ಬಾಯಿಯಲ್ಲಿ ಇಂದಿಗೂ ಇದೆ ಎಂದರೇ ಅದು ಯಾವ ರೀತಿ ಪರಿಣಾಮ ಬೀರಿರಬಹುದು ಎಂಬುದು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವರು ಸಮಾನತೆಗಾಗಿ ಹೋರಾಟ ಮಾಡಿದ ಮಹಾಪುರುಷ ಎಲ್ಲರೂ ಸಮಾನರಾಗಿ ಈ ಭೂಮಿಯ ಮೇಲೆ ಬದುಕಬೇಕು. ಮೇಲು ಕೀಳು ಎಂಬ ಭೇಧಭಾವ ಇರಬಾರದು ಎಂದು ಅಂದೇ ತಮ್ಮ ದಾಸಪದಗಳ ಮೂಲಕ ಹೋರಾಟ ನಡೆಸಿದವರು ಇವರ ತತ್ವಗಳನ್ನು ನಮ್ಮ ಜೀವನದಲ್ಲಿ ಮೈಕೊಡಿಸಿಕೊಂಡು ಜೀವನ ನಡೆಸುವುದು ನಮ್ಮ ಗುರಿಯಾಗಿರಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಹಶೀಲ್ದಾರ್ ರಶ್ಮಿಯವರು ವಹಿಸಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಾಡಹಬ್ಬಗಳ ಸಮಿತಿಯ ಸದಸ್ಯರುಗಳಾದ ಶ್ರೀನಿವಾಸ್ ಕಾಮತ್, ಎನ್ ಶ್ರೀಧರ ಉಡುಪ, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೆಟ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ಸಿ.ಆರ್.ಪಿ ಮಂಜಪ್ಪ ಆಹಾರ ನಿರೀಕ್ಷಕರಾದ ನಾಗರಾಜ್, ಚುನಾವಣೆ ಶಿರಾಸ್ಥೆದಾರ್ ಸತೀಶ್, ಆಪರೇಟರ್ ಸತೀಶ, ಶಿಕ್ಷಣ ಸಂಯೋಜಕರಾದ ಕರಿಬಸಪ್ಪ, ಗ್ರಾಮ ಸಹಾಯಕರಾದ ಗಣೇಶ, ಅಶೋಕ ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!