ಹೊಸನಗರದಲ್ಲಿ ವಿಶ್ವ ಏಡ್ಸ್ ದಿನಾಚರಣೆ | ಏಡ್ಸ್ ಸಮಸ್ಯೆ ಸಾಮಾಜಿಕ ಪಿಡುಗಲ್ಲ, ಸಾಮಾಜಿಕ ಜವಾಬ್ದಾರಿ ; ಡಾ|| ಉಮೇಶ್ ಕೆ

0 608

ಹೊಸನಗರ: ಏಡ್ಸ್ (AIDS) ಸಮಸ್ಯೆ ಸಾಮಾಜಿಕ ಪಿಡುಗಲ್ಲ ಅದು ಸಾಮಾಜಿಕ ಜವಾಬ್ದಾರಿ ಎಂದು ಹೊಸನಗರ (Hosanagara) ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಉಮೇಶ್ ಕೆ. ಹೇಳಿದರು.

ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ. ಎನ್.ಎಸ್.ಎಸ್1&2 ಘಟಕ ರೆಡ್ ರಿಬ್ಬನ್ ಕ್ಲಬ್ ಮಹಿಳಾ ಸಬಲೀಕರಣ ಘಟಕ ಮತ್ತು ಐ.ಕ್ಯೂ.ಎ.ಸಿ, ಹಾಗೂ ಸರ್ಕಾರಿ ಆಸ್ಪತ್ರೆ ಹೊಸನಗರ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಹೊಸನಗರ ಕೊಡಚಾದ್ರಿ ಕಾಲೇಜ್ ಆವರಣದಲ್ಲಿ ಏರ್ಪಡಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಸುಷ್ಮಾ ಹೆಬ್ಬಾರ್‌ರವರು ಅಂಕಿ ಅಂಶಗಳ ಸಹಿತ ಏಡ್ಸ್ ಪೀಡಿತರ ಸಮಸ್ಯೆ ಹಾಗೂ ಆವರಿಗೆ ಬೇಕಾಗಿರುವ ವೈದ್ಯಕೀಯ ಸಲಹೆ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ವೈದ್ಯಾಧಿಕಾರಿಗಳಾದ ಡಾ|| ಮರುಳಸಿದ್ದೇಶ ಜಿಯವರು ವಿದ್ಯಾರ್ಥಿಗಳಿಗೆ ಹೆಚ್,ಐ.ವಿ ವೈರಾಣುವಿನ ವಿವರ ನೀಡಿ ಹೆಚ್.ಐ.ವಿ ಪಾಸಿಟಿವ್ ಪೀಡಿತರು ಅನುಸರಿಸಬೇಕಾದ ಜೀವನ ಕ್ರಮದ ಕುರಿತು ಉಪಯುಕ್ತ ವಿಚಾರಗಳನ್ನು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಬಿ.ಎಸ್.ಸುರೇಶ್ ರಕ್ತದಾನದ ಬಗ್ಗೆ ಮಾಹಿತಿ ನೀಡಿ ವಿದ್ಯಾಥಿಗಳಿಗೆ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಿದರು.

ವಕೀಲರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ವಾಲೇಮನೆ ಶಿವಕುಮಾರ್‌ರವರು ಮಾತನಾಡಿ, ಎನ್‌ಎಸ್‌ಎಸ್ ಮತು ಸಂಘ ಸಂಸ್ಥೆಗಳ ಸಮುದಾಯದೊಂದಿಗೆ ಸೇರಿ ಸಮಾಜ ಸೇವೆ ಮಾಡಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಪ್ರದೀಪ್ ಕುಮಾರ್, ರೆಡ್ ರಿಬನ್ ಕ್ಲಬ್ ಸಂಚಾಲಕರಾದ ದೊಡ್ಡಯ್ಯ ಮಹಿಳ ಸಬಲೀಕರಣ ಘಟಕದ ಸಂಚಾಲಕರಾದ ಶಾಲಿನಿ, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ|| ಶ್ರೀಪತಿ ಹಳಗುಂದ, ಸಹ ಪ್ರಾಧ್ಯಾಪಕರಾದ ಪ್ರಭಾಕರ್‌ರಾವ್ ಗ್ರಂಥಾಪಾಲಕ ಡಾ|| ಲೋಕೇಶ್, ಐಶ್ಚರ್ಯ, ಆಕಾಂಕ್ಷ, ಅನ್ವಿತ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿ-ವಿದ್ಯಾಥಿನಿಯರು ಏಡ್ಸ್ ಜಾಗೃತಿ ಕುರಿತ ಮೆರವಣಿಗೆ ನಡೆಸಿದರು.

Leave A Reply

Your email address will not be published.

error: Content is protected !!