ಹೊಸನಗರ ಅಖಿಲ ಭಾರತ ಮಹಾಸಭಾ ಘಟಕದ 5ನೇ ವರ್ಷದ ಅದ್ದೂರಿ ಶ್ರೀ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ದತೆ

0 229


ಹೊಸನಗರ : ಸೋಮವಾರದಿಂದ ಗಾಂಧಿ ಜಯಂತಿವರೆಗೆ 5ನೇ ವರ್ಷದ ಶ್ರೀ ಗಣೆಶೋತ್ವವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದೆ ಎಂದು ಇಲ್ಲಿನ ಅಖಿಲ ಭಾರತ ಹಿಂದು ಮಹಾಸಭಾದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಎಂ.ಎನ್ ರಾಜು ತಿಳಿಸಿದರು.

ಪಟ್ಟಣದ ಅಂಚೆ ಕಛೇರಿ ಪಕ್ಕದ ಅಖಿಲ ಭಾರತ ಮಹಾಸಭಾ ನಿರ್ಮಿಸಿದ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿ ಸ್ವಾಮಿಗೆ ಒಂದೂವರೆ ಕೆಜಿ ತೂಕದ ನವರತ್ನ ಖಚಿತ ಬೆಳ್ಳಿ ಕಿರೀಟದ ಸೇವೆ ದಾನಿಗಳ ಸಹಕಾರದಿಂದ ನೆರವೇರಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಆಯ್ದ ತಂಡಗಳಿಂದ ವಿವಿಧ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಪ್ರತಿ ದಿನ ಬೆಳಗ್ಗೆ 11 ರಿಂದ ಸಾರ್ವಜನಿಕರು, ವಿದ್ಯಾರ್ಥಿವಲಯವು ಸೇರಿದಂತೆ ವಿವಿಧ ವರ್ಗಗಳಿಗಾಗಿ ಆರೋಗ್ಯ, ಕಾನೂನು, ಸಹಕಾರ, ಆಯುರ್ವೇದ, ಬ್ಯಾಂಕಿಂಗ್ ಸೇವೆ, ಸ್ವಚ್ಛತೆ, ಕುರಿತಂತೆ ಸೂಕ್ತ ಉಚಿತ ಮಾಹಿತಿ ಶಿಬಿರಗಳು ನಡೆಯಲಿದೆ. 29ರ ಶುಕ್ರವಾರ ಗಣಹೋಮ, ಶ್ರೀ ಸತ್ಯನಾರಾಯಣ ವ್ರತ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಅ.2ರ ಸೋಮವಾರ ಬೃಹತ್ ಶೋಭಾಯಾತ್ರೆ ಮೂಲಕ ಸ್ವಾಮಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.


ಈ ವೇಳೆ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಪೂಜಾರಿ, ಕಾರ್ಯದರ್ಶಿ ಶ್ರೀನಂದಿ ಸಂತೋಷ್, ಪ್ರಮುಖರಾದ ಗಣೇಶ್ ಮಧುಕರ್, ರಾಕೇಶ್ ಸೇರಿದಂತೆ ಇತರರು ಹಾಜರಿದ್ದರು.

Leave A Reply

Your email address will not be published.

error: Content is protected !!