ಹೊಸನಗರ ಅಭಿವೃದ್ಧಿಗೆ ಲಕ್ವ | ಕಳೆದೆರಡು ತಿಂಗಳಿಂದ ತಹಸಿಲ್ದಾರ್ ಹಾಗೂ ಪ.ಪಂ. ಮುಖ್ಯಾಧಿಕಾರಿ ಹುದ್ದೆ ಖಾಲಿ ಖಾಲಿ

0 594

ಹೊಸನಗರ : ರಾಜ್ಯದಲ್ಲಿ ಅತಿ ದೊಡ್ಡ ವಿಸ್ತೀರ್ಣ ಹೊಂದಿದ ಹಾಗೂ ಅತಿ ಹಿಂದುಳಿದ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಲೆನಾಡಿನ ನಡುಮನೆ ಹೊಸನಗರ, ತಾಲೂಕಿನ ಆಡಳಿತ ಹೊಂದಿದ ತಹಸಿಲ್ದಾರ್ ರವರು ವರ್ಗಾವಣೆ ಆಗಿ ಎರಡು ತಿಂಗಳು ಕಳೆದರೂ ಬದಲಿ ತಹಸಿಲ್ದಾರ್ ನೇಮಕ ಮಾಡುವಲ್ಲಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವರ್ಗಾವಣೆ ಹೊಂದಿದ್ದರು ಈ ಎರಡು ಸ್ಥಾನಗಳು ಖಾಲಿಯಾಗಿದ್ದರಿಂದ ಹೊಸನಗರ ತಾಲೂಕಿನ ಅಭಿವೃದ್ಧಿಗೆ ಲಕ್ವ ಹೊಡೆದಂತಾಗಿದೆ.

ಪಟ್ಟಣದ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಸಿಬ್ಬಂದಿಗಳು ಹೊಸನಗರ ಪಟ್ಟಣದಲ್ಲಿ ವಾಸ್ತವ್ಯವಿರುವುದಿಲ್ಲ. ಈ ಸಿಬ್ಬಂದಿಗಳು ತಾಲೂಕು ಕೇಂದ್ರದಲ್ಲಿ ಮನೆ ಮಾಡದೆ ಪ್ರತಿದಿನ ಸಾಗರ, ತೀರ್ಥಹಳ್ಳಿ, ಶಿವಮೊಗ್ಗಗಳಿಂದ ಓಡಾಟ ನಡೆಸುತ್ತಿದ್ದು ಈ ಅಧಿಕಾರಿಗಳು ಸಿಬ್ಬಂದಿಗಳು 11 ಗಂಟೆಯಾದರೂ ಕಚೇರಿಗೆ ಬಾರದೆ ಪುನಃ ನಾಲ್ಕು ಗಂಟೆಗೆ ಊರು ಬಿಡುವ ಪರಿಪಾಠ ಈ ಹಿಂದಿನಿಂದಲೂ ಅವ್ಯಾಹತವಾಗಿ ಸಾಗಿದೆ.

ಜಿಲ್ಲಾಡಳಿತ ತತ್ತಕ್ಷಣ ಈ ಹುದ್ದೆಗಳನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ನೆರವಾಗಬೇಕೆಂದು ನಾಗರಿಕರು ಆಗ್ರಹಪಡಿಸಿದ್ದಾರೆ.

Leave A Reply

Your email address will not be published.

error: Content is protected !!