ಹೊಸನಗರ ಪ.ಪಂ. ಆವರಣದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆ

0 51

ಹೊಸನಗರ: ಪಟ್ಟಣ ಪಂಚಾಯತಿ ಆವರಣದಲ್ಲಿ ದಸರಾ ಸಂಭ್ರಮವನ್ನು ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರ ನೇತೃತ್ವದಲ್ಲಿ ನಡೆದ ಈ ದಸರಾ ಹಬ್ಬ ಬಹಳ ಅದ್ದೂರಿಯಾಗಿ ನಡೆಸಿದ್ದು ಕಛೇರಿಯ ಒಳಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಪಟ್ಟಣ ಪಂಚಾಯತಿ ವಾಹನಗಳಿಗೆ, ನೀರಿನ ಟ್ಯಾಂಕ್‌ಗಳಿಗೆ, ಜಾಕ್‌ವೇಲ್‌ನಲ್ಲಿ ಪೂಜೆ ವಿಶೇಷವಾಗಿ ಕಸದ ರಾಶಿಗಳಿಗೆ ಪೂಜೆ ಸಲ್ಲಿಸಿ ಪಟ್ಟಣ ಪಂಚಾಯತಿಯ ಪ್ರತಿದಿನ ಜನರ ಸೇವೆ ಮಾಡುವ ವಾಹನಗಳನ್ನು ಶೃಂಗಾರ ಮಾಡಿ ಮೆರವಣಿಗೆ ಮಡೆಸಿದರು.


ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಪ್ರಶಾಂತ್‌ರವರು ಮಾತನಾಡಿ, ಹೊಸನಗರ ಪಟ್ಟಣ ಸ್ವಚ್ಛ ಪ್ರದೇಶವಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡುವುದು ಪಟ್ಟಣ ಪಂಚಾಯತಿಯ ಗುರಿಯಾಗಿದ್ದು ನಮ್ಮ ಪೌರ ಕಾರ್ಮಿಕರು ಹಗಲು ರಾತ್ರಿ ಎನ್ನದೇ ಸಾರ್ವಜನಿಕರ ಸೇವೆ ಮಾಡುತ್ತಿದ್ದು ಅವರಿಗೆ ದೇವರ ಆಶ್ರೀರ್ವಾದ ಅವರ ಮೇಲಿರಲೀ ಎಂದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಾರುತಿ, ಪಟ್ಟಣ ಪಂಚಾಯತಿಯ ಸಿಬ್ಬಂದಿಯಾದ ಬಸವರಾಜ್, ಗಿರೀಶ್ ಹಾಗೂ ನೌಕರ ವರ್ಗ, ಪೌರ ನೌಕರರು, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಸುರೇಂದ್ರ ಕೊಟ್ಯಾನ್, ಗುರುರಾಜ್ ಆರ್, ನಾಗಪ್ಪ, ಕೃಷ್ಣವೇಣಿ, ಗುಲಾಬಿ ಮರಿಯಪ್ಪ, ಗಾಯಿತ್ರಿ ನಾಗರಾಜ್, ಚಂದ್ರಕಲಾ ನಾಗರಾಜ್, ಚಂದ್ರಪ್ಪ ಯಶೋಧಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!