ಹೊಸನಗರ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಪುತ್ತಿಗೆ ಶ್ರೀ ಭೇಟಿ

0 679


ಹೊಸನಗರ: ಮನ್ಮಧ್ಯಾಚಾರ್ಯ ಮೂಲ ಮಹಾ ಸಂಸ್ತಾನ ಉಡುಪಿ (Udupi) ಶ್ರೀ ಪುತ್ತಿಗೆ ಮಠದ (Putthige Mutt) ಸ್ವಾಮೀಜಿಯವರು ತಮ್ಮ ಪರ್ಯಾಯ ಪೂರ್ವ ಸಂಚಾರ ದಕ್ಷಿಣ ಭಾರತದ ಪರಿಕ್ರಮ ಯಾತ್ರೆ ಮತ್ತು ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರಧಾನ ಸಮಾರಂಭದ ನಿಮಿತ್ತ ಹಳೇ ಸಾಗರ ರಸ್ತೆಯಲ್ಲಿರುವ ಹೊಸನಗರದ (Hosanagara) ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ (Sri Raghavendra Swamy Mutt) ಭೇಟಿ ನೀಡಿ ಆತ್ಮಪೂರ್ವವಾದ ತೊಟ್ಟಿಲು ಪೂಜೆಯನ್ನು ನೆರವೇರಿಸಿ ಮಾತನಾಡಿ, ಪರಂಪರೆಯ ಪುತ್ತಿಗೆಮಠದ ಪರ್ಯಾಯ ಅವಧಿಯು 2024 ರಿಂದ26 ರವರೆಗೆ ನಡೆಯಲಿದ್ದು ಉಡುಪಿಯ ಕೃಷ್ಣ ಹಾಗೂ ಮುಖ್ಯಪ್ರಾಣರ ಪ್ರೇರಣೆಯಂತೆ ನಮ್ಮ ಚತುರ್ಥ ಪರ್ಯಾಯವನ್ನು ಶ್ರೀ ಸುಶ್ರೀದ್ರತೀರ್ಥ ಶ್ರೀಪಾದರೊಂದಿಗೆ 2024ನೇ ಜನವರಿ 18ರಂದು ಸರ್ವಜ್ಞಸಿಂಹಾಸನವನ್ನು ಏರುವ ಮೂಲಕ ನಡೆಸಲು ತೀಮಾನಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಹೊಸನಗರ ತಾಲ್ಲೂಕಿನ ಎಲ್ಲ ಸರ್ವರು ಆಗಮಿಸಬೇಕೆಂದು ಕೇಳಿಕೊಂಡರು.


ಹೊಸನಗರ ಕೋರ್ಟ್ ಸರ್ಕಲ್‌ನಿಂದ ಕಾಲ್ನಡಿಗೆಯಲ್ಲಿ ಪೂರ್ಣ ಕುಂಭ ಸ್ವಾಗತ ಹಾಗೂ ಹೊಸನಗರ ವಿವಿಧ ಮಹಿಳೆಯರ ಸಂಘದ ವತಿಯಿಂದ ಭಜನೆದೊಂದಿಗೆ ರಾಘವೇಂದ್ರ ಸ್ವಾಮಿ ಮಠದ ವರೆವಿಗೆ ಮೆರವಣಿಗೆ ನಡೆಸಿ ನಂತರ ಪ್ರಜ್ಯರಿಗೆ ಪಾದಪ್ರಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಮಠದ ಗೌರವಾಧ್ಯಕ್ಷರಾದ ಉಮೇಶ್ ಕಂಚುಗಾರ್, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಎನ್. ಶ್ರೀಧರ ಉಡುಪ.ಶ್ರೀನಿವಾಸ್ ಕಾಮತ್, ರಾಜಮೂರ್ತಿ, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೆಟ್, ಕಾರ್ಯದರ್ಶಿ ಹೆಚ್.ಕೆ ಹರೀಶ್, ಶ್ರೀಪತಿರಾವ್, ಶ್ರೀರಾಘವೇಂದ್ರ ಸ್ವಾಮಿ ಮಠದ ಅರ್ಚಕರಾದ ಪ್ರಸನ್ನ ಭಟ್, ಸಾಗರದ ನಂಜುಂಡಸ್ವಾಮಿ, ಕೋಟಿ ಲೋಕ ಯಜ್ಞ ಪ್ರಚಾರಕರಾದ ರಮಣಚಾರ್, ವಾದಿರಾಜ್‌ಭಟ್, ಸುದೇಶ್ ಕಾಮತ್, ಸದಾಶೀವ ಶ್ರೇಷ್ಠಿ, ಚಂದ್ರಶೇಖರ್ ಶೇಟ್ ವಾಸುದೇವ, ರಾಧಕೃಷ್ಣ, ಪ್ರವೀಣ್, ಮಂಡಾನಿ ಶ್ರೀಧರ, ಧನಂಜಯ, ನಿತ್ಯಾನಂದ ನಾಯ್ಕ್ ಗಣೇಶ್ ಶೇಟ್, ಎನ್.ಆರ್ ದೇವಾನಂದ್, ಪಿಗ್ಮಿ ಭೂಜರಾವ್, ಪ್ರವೀಣ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!