ಹೊಸನಗರ ಸುಮೇದ ಅಡಿಕೆ ಮಂಡಿ ಗೋದಾಮಿನಿಂದ ₹ 1.33 ಲಕ್ಷ ಬೆಲೆ ಬಾಳುವ ಅಡಿಕೆ ಕಳವು ; ಮೂವರು ಸ್ಥಳೀಯ ಯುವಕರು ಪೊಲೀಸರ ವಶಕ್ಕೆ !

0 1,105

ಹೊಸನಗರ : ಪಟ್ಟಣದ ಶಿವಪ್ಪನಾಯಕ ರಸ್ತೆಯಲ್ಲಿರುವ ಸುಮೇದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದವರು ರೈತರಿಂದ ಪಡೆದ ಅಡಿಕೆಯನ್ನು ಪ್ರವಾಸಿ ಮಂದಿರ ರಸ್ತೆಯ ಶ್ರೀ ವಿದ್ಯಾಸಂಘ ರಂಗಮಂದಿರದ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ರೈತರಿಂದ ಪಡೆದ ಅಡಿಕೆ ಚೀಲಗಳನ್ನು ದಾಸ್ತಾನು ಮಾಡಿದ್ದು ಅಲ್ಲಿಗೆ ಸುಬ್ರಮಣ್ಯ ಎಂಬ ಸೆಕ್ಯೂರಿಟಿ ಗಾರ್ಡನ್ ಸಹ ಸಹಕಾರಿ ಸಂಘದವರು ನೇಮಿಸಿದ್ದರು.

ಸೆಪ್ಟೆಂಬರ್ 23 ರಂದು ಗುರುವಾರ ಸಂಜೆ ದಾಸ್ತಾನು ಪರಿಶೀಲಿಸಿದಾಗ 798 ಕ್ವಿಂಟಲ್ 82 ಕೆಜಿ ಅಡಿಕೆಯನ್ನು ಒಟ್ಟು 1168 ಚೀಲ ಗಳಲ್ಲಿ ಸಂಗ್ರಹಿಸಿದ್ದು 22ರ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದು ನಂತರ ಎಪಿಎಂಸಿಯಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದು ಸಂಜೆ ನಾಲ್ಕು ಗಂಟೆಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ವಾಪಾಸ್ ಬಂದಿದ್ದು ಆಗ ಗೋದಾಮಿನಲ್ಲಿ 10 ಚೀಲಗಳಲ್ಲಿ ಇದ್ದ 2 ಕ್ವಿಂಟಲ್ 72 ಕೆಜಿ 500 ಗ್ರಾಂ ಅಡಿಕೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಕಚೇರಿ ಸಿಬ್ಬಂದಿ ಪ್ರಕಾಶ್ ರವರಿಂದ ಲಭ್ಯವಾಗಿರುವುದಾಗಿ ಹಾಗೂ ಅದರ ಮೊತ್ತ 1.33 ಲಕ್ಷ ಮೌಲ್ಯಗಳೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಸಹಕಾರ ಸಂಘದ ಸಿಇಒ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಿಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳೀಯರೆನ್ನಲಾದ ಮೂವರನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.

error: Content is protected !!