ಅಪ್ಪನಿಗೆ ಅವಮಾನಿಸಿದರು ವಿರೋಧಿಸದ ಮಕ್ಕಳು ಬೇಕಾ ? ; ಆಯನೂರು ಮಂಜುನಾಥ್

ರಿಪ್ಪನ್‌ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಮಾತು ಮಾತಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿ ಟೀಕಿಸುತ್ತಿದ್ದರೂ ಕೂಡಾ ಅದನ್ನು ಖಂಡಿಸದೇ ಇರುವ ಮಕ್ಕಳು ಬೇಕಾ ? ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಪ್ರಶ್ನೆ ಮಾಡಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ತಂದೆಯವರಿಗೆ ಹೀಗೆ ಯಾರಾದರೂ ಹೇಳಿದರೆ ಸುಮ್ಮನಿರುತ್ತೀರಾ ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಅಂತಹ ಜಾಯಮಾನ ನಮ್ಮದಲ್ಲ ಎಂದು ಹೇಳುತ್ತಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಸದ ಬಿ.ವೈ.ರಾಘವೇಂದ್ರರಿಗೆ ಅಪ್ಪನಿಗಿಂತ ಅಧಿಕಾರವೇ ಮುಖ್ಯ ಎನ್ನುವುದಕ್ಕೆ ಸಾಕ್ಷಿ ಬೇಕಾ ಎಂದು ಹೇಳುವುದರೊಂದಿಗೆ, ನಿತ್ಯ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಜನ್ಮ ಜಾಲಾಡುತ್ತಿದ್ದರೂ ಕೂಡಾ ಮಕ್ಕಳಾದ ಈ ಇಬ್ಬರು ತುಟಿ ಬಿಚ್ಚದೇ ಇರುವುದು ಮತ್ತು ಪಕ್ಷದ ಯಾವೊಬ್ಬ ಕಾರ್ಯಕರ್ತರು ಮಾತಾಡದೇ ಮೌನ ವಹಿಸಿರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಅವರು, ಟೀಕಿಸುವುದೇ ಗುರಿಯನ್ನಾಗಿಸಿಕೊಂಡಿರುವ ಈಶ್ವರಪ್ಪನವರಿಗೆ ಎಚ್ಚರಿಕೆಯನ್ನಾದರೂ ನೀಡಲು ಬಿಜೆಪಿ ಪಕ್ಷದ ಯಾವೊಬ್ಬ ನಾಯಕರು ಸಿದ್ದರಿಲ್ಲವೇ ಎಂದು ಕುಟುಕಿದರು.

ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಮಹಿಳೆಯರ ಮತಗಳು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚು ಬರುತ್ತವೆ. ಯಾವುದೇ ಸಂಶಯವಿಲ್ಲ ಆದರೆ ಕೆಲವು ಕಡೆಯಲ್ಲಿ ಪುರುಷ ಮತದಾರರು ಮತ್ತು ಯುವ ಜನಾಂಗದವರ ಓಟುಗಳು ಮಾತ್ರ ಪಕ್ಷಕ್ಕೆ ಬರುತ್ತವೆಂಬುದರ ಬಗ್ಗೆ ಹೇಳುವುದು ಕಷ್ಟವಾಗಿದೆ. ಆದರೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಒಂದು ಕುಟುಂಬಕ್ಕೆ ವರ್ಷಕ್ಕೆ 45 ರಿಂದ 50 ಸಾವಿರ ರೂ. ಹಣ ಫಲಾನುಭವಿಗಳ ಕೈ ಸೇರುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವೈ.ಹೆಚ್.ನಾಗರಾಜ್, ಚಾಮರಾಜ್, ರತೇಶ್ವರಪ್ಪಗೌಡ, ಬೃಂದಾವನ ಹೋಟೆಲ್ ಮಾಲೀಕ ಸ್ವಾಮಿರಾವ್, ರಾಜು ಟೈಲರ್, ಕರಿಬಸಪ್ಪ ಬೆಳಂದೂರು, ಸಿದ್ದು ಭಂಡಾರಿ ಇನ್ನಿತರರು ಹಾಜರಿದ್ದರು.

Malnad Times

Recent Posts

ನೈರುತ್ಯ ಶಿಕ್ಷಕರ, ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಜೂ. 03 ರಂದು ಚುನಾವಣೆ | ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮೇ 6 ಕಡೆಯ ದಿನ

ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…

2 hours ago

ಆನೆ ದಾಳಿಯಿಂದ ಮೃತನಾದ ರೈತನ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ನೀಡದಿದ್ದಲ್ಲಿ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಾಲಪ್ಪ

ರಿಪ್ಪನ್‌ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…

3 hours ago

Arecanut Today Price | ಮೇ 03ರ ಅಡಿಕೆ ರೇಟ್

ಹೊಸನಗರ : ಮೇ 03 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

4 hours ago

ಶ್ರದ್ದಾಭಕ್ತಿಯ ನಾಮಸ್ಮರಣೆಗೆ ದೇವರ ಒಲುಮೆಯಿದೆ ; ಶ್ರೀಗಳು

ರಿಪ್ಪನ್‌ಪೇಟೆ: ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ. ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು…

5 hours ago

ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ನಾಳೆ ಕರೆಂಟ್ ಇರಲ್ಲ !

ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ನಿಮಿತ್ತ ಮೇ…

7 hours ago

ಮೊಬೈಲ್ ಟವರ್ ನಿರ್ಮಾಣದ ಭರವಸೆ, ಚುನಾವಣೆ ಬಹಿಷ್ಕಾರ ಕೈಬಿಟ್ಟ ವಾರಂಬಳ್ಳಿ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…

9 hours ago