Categories: Shivamogga

ಇಂಜಿನಿಯರ್‌ಗಳ ದಿನಾಚರಣೆ | ಸಕಲಗುಣ ಸಂಪನ್ನರಾದ ಸರ್.ಎಂ.ವಿ ಇಂಜಿನಿಯರ್‌ಗಳಿಗೆ ಮಾದರಿ ; ಬಿ.ಟಿ.ಕಾಂತರಾಜ್


ಶಿವಮೊಗ್ಗ : ಶಿಸ್ತು, ಬದ್ದತೆ, ಪ್ರಾಮಾಣಿಕತೆ, ಕೌಶಲ್ಯ, ಬುದ್ದಿಮತ್ತೆ, ದೂರದೃಷ್ಟಿ ಹೀಗೆ ಸಕಲಗುಣ ಸಂಪನ್ನರಾದ ಸರ್.ಎಂ.ವಿಶ್ವೇಶ್ವರಾಯರು ಎಲ್ಲ ಇಂಜಿನಿಯರ್‍ಗಳಿಗೆ ಮಾದರಿಯಾಗಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜ್ ಅಭಿಪ್ರಾಯಪಟ್ಟರು.


ಶಿವಮೊಗ್ಗ ನಗರದ ಸಮಸ್ತ ಇಂಜಿನಿಯರಿಂಗ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಂದು ಕರ್ನಾಟಕ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಾಯ ರವರ 163 ನೇ ಜನ್ಮದಿನೋತ್ಸವ ಹಾಗೂ ಇಂಜಿನಿಯರುಗಳ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.


ಸರ್.ಎಂ.ವಿಶ್ವೇಶ್ವರಾಯರಲ್ಲಿ ಪರಿಶ್ರಮ, ನೇರನುಡಿ, ದಿಟ್ಟತನ, ವಿಧೇಯತೆ, ಸಮಯ ನಿರ್ವಹಣೆ ಹೀಗೆ ಪರಿಪೂರ್ಣ ವ್ಯಕ್ತಿತ್ವಕ್ಕೆ ಇರಬೇಕಾದ ಎಲ್ಲ ಗುಣಗಳು ಅಂತರ್ಗತವಾಗಿದ್ದವು. ಅವರಲ್ಲಿನ ದೂರದೃಷ್ಟಿ ಗುಣ ಅತ್ಯಂತ ವಿಶೇಷವಾಗಿದ್ದು ಅವರು ನಿರ್ಮಿಸಿರುವ ಕನ್ನಂಬಾಡಿಕಟ್ಟೆ ಇವತ್ತಿಗೂ ಚೆನ್ನಾಗಿದೆ. ಅವರು ನಿರ್ಮಿಸಿದ ಹಲವಾರು ಕಾರ್ಖಾನೆಗಳು, ಇತರೆ ಯೋಜನೆಗಳು ಇಂದಿಗೂ ಪ್ರಸ್ತುತ ಮತ್ತು ಮಾದರಿಯಾಗಿವೆ. ಬೆಂಗಳೂರಿನ ಪ್ರಸಿದ್ದ ಜಯನಗರ ಲೇಔಟ್ ವಿನ್ಯಾಸವನ್ನು ಅವರೇ ಮಾಡಿದ್ದು. ಬೇರೆ ರಾಜ್ಯಗಳಲ್ಲೂ ಅನೇಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇಂತಹ ಪ್ರತಿಭೆ ವ್ಯಕ್ತಿಗತವಾಗಿ ಹಾಗೂ ವೃತ್ತಿಪರವಾಗಿ ಅನುಕರಣೀಯ ಎಂದ ಅವರು ಎಲ್ಲ ಮಕ್ಕಳಲ್ಲಿ ಒಂದೊಂದು ವಿಶೇಷ ಪ್ರತಿಭೆ ಇರುತ್ತದೆ. ಪೋಷಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಶ್ರೇಷ್ಟ ವ್ಯಕ್ತಿಗಳನ್ನು ಸೃಷ್ಟಿಸಬಹುದು ಎಂದರು.


ದೇಶದ ಅಭಿವೃದ್ದಿಯಲ್ಲಿ ಇಂಜಿನಿಯರಿಂಗ್ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆಗಳು, ಬಿಲ್ಡಿಂಗ್‍ಗಳು, ವಿವಿಧ ವಿನ್ಯಾಸಗಳನ್ನು ನಾವು ಪ್ರತಿದಿನ ನಿರ್ಮಿಸುತ್ತೇವೆ. ಹೀಗೆ ನಾವು ಪ್ರತಿ ಕೆಲಸವನ್ನು ಶ್ರದ್ದೆಯಿಂದ ಗುಣಮಟ್ಟದೊಂದಿಗೆ ಮಾಡೋಣ ಎಂದು ಎಲ್ಲ ಇಂಜಿನಿಯರ್‍ಗಳಿಗೆ ಕರೆ ನೀಡಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಒಂದು ಸ್ಪರ್ಧಾತ್ಮಕ ಕೆಲಸವಾಗಿತ್ತು, ಒಂದು ಸಾವಿರಕ್ಕು ಅಧಿಕ ಕೆಲಸಗಾರರು ತಮ್ಮ ಕೊಡುಗೆಯನ್ನಿತ್ತಾರೆ. ಕೌಶಲ್ಯ ಮತ್ತು ಜ್ಞಾನದಿಂದಾಗಿ ಶಿವಮೊಗ್ಗದಲ್ಲಿ ಉತ್ತಮ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.


ಕಳೆದ 25 ವರ್ಷಗಳಿಂದ ದೇಶದಲ್ಲಿ ಅಭಿವೃದ್ದಿ ಕೆಲಸಗಳು ವೇಗ ಪಡೆದಿವೆ. ಜಾಗತಿಕ ಅರ್ಥವ್ಯವಸ್ಥೆಯಲ್ಲಿ 5 ನೇ ಸ್ಥಾನದಲ್ಲಿರುವ ನಮ್ಮ ದೇಶ 3ನೇ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತಿದೆ. ಬೇರೆ ದೇಶಗಳಿಗಿಂತ ಹೆಚ್ಚಿನ ಅಂದರೆ ವರ್ಷಕ್ಕೆ ಸುಮಾರು 15 ಲಕ್ಷದಷ್ಟು ಇಂಜಿನಿಯರ್‍ಗಳನ್ನು ನಮ್ಮ ದೇಶ ಸೃಷ್ಟಿಸುತ್ತಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲ ಉತ್ತಮ ಕೆಲಸಗಾರರಾಗಿ ಹೊರಹೊಮ್ಮೋಣ ಎಂದರು.


ಅಧ್ಯಕ್ಷತೆ ವಹಿಸಿದ್ದ ಲೋಕೋಪಯೋಗಿ ಇಲಾಖೆ ಸಂ ಮತ್ತು ಕ ಕೇಂದ್ರ ವಲಯದ ಮುಖ್ಯ ಇಂಜಿನಿಯರ್ ಬಿ.ವಿ.ಜಗದೀಶ್ ಮಾತನಾಡಿ, ಒಂದೇ ವ್ಯಕ್ತಿಯಲ್ಲಿ ಎಲ್ಲ ರೀತಿಯ ಸದ್ಗುಣಗಳನ್ನು ನೋಡಬಹುದೆಂದರೆ ಅದು ಸರ್.ಎಂ.ವಿಶ್ವೇಶ್ವರಾಯ. ಒಂದೊಂದು ವ್ಯಕ್ತಿಯಲ್ಲಿ ಒಂದೊಂದು ಒಳ್ಳೆ ಗುಣ ಅಥವಾ ಕೌಶಲ್ಯವನ್ನು ಕಾಣಬಹುದು. ಆದರೆ ವಿಶ್ವೇಶರಾಯರಲ್ಲಿ ಎಲ್ಲ ಸದ್ಗುಣ, ಬುದ್ದಿವಂತಿಕೆ, ಕೌಶಲ್ಯವನ್ನು ಕಾಣಬಹುದು. ಆದ್ದರಿಂದ ಅವರನ್ನು ನೂರಾರು ವರ್ಷಗಳಾದರೂ ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅವರ ಸಾಧನೆಗಳನ್ನು ಒಂದೊಂದಾಗಿ ವಿಶ್ಲೇಷಣೆ ಮಾಡುತ್ತಾ ಹೋದ ಹಾಗೆ ನಾವು ಕಲಿಯುತ್ತಾ ಹೋಗುತ್ತೇವೆ. ಇಂತಹ ವ್ಯಕ್ತಿತ್ವವನ್ನು ನಾವು ಅನುಕರಿಸಿದಲ್ಲಿ ನಮ್ಮ ವೃತ್ತಿಗೆ ನಾವು ನ್ಯಾಯ ಒದಗಿಸಿದಂತೆ ಆಗುತ್ತದೆ.


ಪ್ರಸ್ತುತ ಎಲ್ಲ ವೃತ್ತಿಯಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಒಬ್ಬ ಮಾರ್ಗದರ್ಶಕ ಅಥವಾ ಪ್ರೇರೇಪಕರ, ಪ್ರೇರೇಪಣೆಯ ಅವಶ್ಯಕತೆ ಇದೆ. ಅವರ ಸಹಾಯ ಪಡೆದು ನಾವು ಮುನ್ನುಗ್ಗಬೇಕು. ಇಂಜಿನಿಯರುಗಳು ಪ್ರತಿ ದಿನ ಓದುವ ಅಭ್ಯಾಸ ಇಟ್ಟುಕೊಳ್ಳಬೇಕು. ಪ್ರದಿನ ದಿನ ಅಪ್‍ಡೇಟ್ ಆಗುತ್ತಾ ಹೋಗಬೇಕು. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲು ಇಂದು ಅನೇಕ ಮಾಧ್ಯಮಗಳಿದ್ದು ನಾವು ಇನ್ನೂ ಹೆಚ್ಚು ಜಾಗೃತರಾಗಿ ನಮ್ಮ ಕೆಲಸಗಳನ್ನು ಮಾಡಬೇಕು. ಉತ್ತಮ ಕೆಲಸಗಾರರಾಗಲು ಒಳಗಿನಿಂದ ಒಂದು ಶಕ್ತಿ, ಪ್ರೇರಣೆಯನ್ನು ನಾವೇ ಹೊಂದಬೇಕು. ಒತ್ತಡ ನಿರ್ವಹಣೆ ಮತ್ತು ಉತ್ತಮ ಆರೋಗ್ಯ, ಆಹಾರ ಅಭ್ಯಾಸ ಕ್ರಮಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕೆಂದರು.


ಇದೇ ವೇಳೆ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಪಾಲ್ಗೊಂಡ ಇಂಜಿನಿಯರ್‍ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ದಿ ಅಧಿಕಾರಿ ಹೆಚ್.ಎಸ್.ನವೀನ್ ಕುಮಾರ್ ಇವರು ವಿಶ್ವೇಶ್ವರಾಯರ ನುಡಿನಮನ ಮತ್ತು ವ್ಯಕ್ತಿತ್ವ ವಿಕಸನದ ಕುರಿತು, ದಾವಣಗೆರೆ ದೊಡ್ಡಬಾತಿಯ ತಪೋವನ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ.ಶಿವರಾಜ ವಿ ಪಾಟೀಲ್ ಯೋಗ ಮತ್ತು ಆರೋಗ್ಯ ಹಾಗೂ ನಂಜಪ್ಪ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ.ನಮ್ರತ ಉಡುಪ ಕ್ಯಾನ್ಸರ್ ಜಾಗೃತಿ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಧೀಕ್ಷಕ ಇಂಜಿನಿಯರ್‍ಗಳಾದ ಎಸ್ ಗಣೇಶ್, ಕವಿತ, ಕಾರ್ಯಪಾಲಕ ಇಂಜಿನಿರ್‍ಗಳಾದ ಸಂಪತ್ ಕುಮಾರ್ ಪಿಂಗಳೆ, ನಾಗೇಶ್, ಇಂಜಿನಿಯರ್‍ಗಳಾದ ಚಂದ್ರಶೇಖರ್, ದಿವಾಕರ್, ಸುರೇಶ್, ರಾಜೇಂದ್ರಪ್ರಸಾದ್ ಇತರರು ಹಾಜರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

1 day ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

1 day ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago