Categories: Shivamogga

ಇವಿಎಂ-ಮೊಬೈಲ್ ಪ್ರಾತ್ಯಕ್ಷಿಕೆ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಶಿವಮೊಗ್ಗ: ಮತದಾರರ ಜಾಗೃತಿ ಮತ್ತು ಇವಿಎಂ ಮಷಿನ್‍ಗಳ (EVM Machine’s) ಪ್ರಾತ್ಯಕ್ಷಿಕೆಗಾಗಿ ತಯಾರಿಸಲಾದ ಎಂಡಿವಿ ಮೊಬೈಲ್ ಡೆಮಾನ್ಟ್ರೇಷನ್ ವಾಹನಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ
ಡಾ. ಸೆಲ್ವಮಣಿ ಆರ್ ಇವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರಿಗೆ ಈ ಸಂಚಾರಿ ವಾಹನ ತಲುಪಲಿದ್ದು, ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ 113 ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಲಿದೆ.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ (SVEEP) ನೋಡಲ್ ಅಧಿಕಾರಿಗಳಾದ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆಯ ಆಫೀಸ್ ಅಡ್ಮಿನ್ ತುಷಾರ್, ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮ್ಮದ್ ಫರ್ವೀಜ್, ಎ ಡಿ ಆದ ಸುಪ್ರಿಯ ಮತ್ತು ಅಧಿಕಾರಿಗಳು ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Malnad Times

Recent Posts

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 hours ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

3 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

5 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

15 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ | ಶೇ. 78.24 ಮತದಾನ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…

16 hours ago

Accident | ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

17 hours ago