ಕಲೆ ಸಾಹಿತ್ಯ ಸಂಸ್ಕೃತಿ ಶಕ್ತಿಯಾಗಿ ಪರಿವರ್ತನೆಗೊಳ್ಳಲಿ ; ನಟಿ ಆಶಾ ಭಟ್

0 34

ಶಿವಮೊಗ್ಗ : ವಿದ್ಯಾರ್ಥಿ ಜೀವನದಲ್ಲಿ ನಮಗೆ ಸಿಗುವ ವೇದಿಕೆಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಿ. ಕಲೆ ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ನಮ್ಮ ಶಕ್ತಿಯಾಗಿ ಪರಿವರ್ತನೆಗೊಳ್ಳಲಿ ಎಂದು ಖ್ಯಾತ ಚಲನಚಿತ್ರ ನಟಿ ಆಶಾಭಟ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಜಾನ್ವಿ-2023’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಸೀಮಿತತೆಗೆ ಒಳಗಾಗದೆಯೆ ಓದುವುದರ ಹೊರತಾಗಿ ಆಸಕ್ತಿಯಿರುವ ಕ್ಷೇತ್ರಗಳ ಮೇಲೆ ಹೆಚ್ಚು ಪ್ರಾಮುಖ್ಯತೆ ನೀಡಿ, ಇಂಜಿನಿಯರಿಂಗ್ ಓದಿದ ಮಾತ್ರಕ್ಕೆ ಅಷ್ಕಕ್ಕೆ ಸೀಮಿತವಾಗಬೇಕು ಎಂದೆನಿಲ್ಲ. ಹೊಸತನದ ಕನಸು ಕಾಣಲು ಪ್ರಯತ್ನಿಸಿ. ಕೌಶಲ್ಯತೆಗಳ ಮೂಲಕ ನಮ್ಮ ಊರು ರಾಜ್ಯವನ್ನು ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡೋಣ. ಕಷ್ಟ ಬಂದಾಗ ನಾವು ಎದುರಿಸುವ ರೀತಿಯ ಆಧಾರದಲ್ಲಿ ಬದುಕಿನ ಯಶಸ್ಸಿನ ಸಾಮರ್ಥ್ಯ ನಿರ್ಧಾರವಾಗುತ್ತೆ. ಇದರ ಜೊತೆಯಲ್ಲಿ ಸಮಾಜಮುಖಿ ಚಿಂತನೆಗಳು ಜನರೊಂದಿಗಿನ ಒಡನಾಟ ಮತ್ತು ಕೌಶಲ್ಯತೆಗಳು ಅತಿ ಮುಖ್ಯ ಪಾತ್ರ ವಹಿಸುತ್ತೆ.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಮಧುಸೂದನ್ ಗೊಲ್ಲಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಚೇತನ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಇಂಜಿನಿಯರಿಂಗ್, ಎಂಬಿಎ, ಎಂಸಿಎ ವಿಭಾಗಗಳ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Leave A Reply

Your email address will not be published.

error: Content is protected !!