ಕಾಡಾನೆ ದಾಳಿಗೆ ಬೆಳೆ ನಾಶ ; ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು ಖೈರದವರ ಮನೆ ಶಿವಾನಂದ ಎಂಬುವರ ಅಡಿಕೆ ತೋಟಕ್ಕೆ ಭಾನುವಾರ ರಾತ್ರಿ ದಾಳಿ ಇಟ್ಟ ತಾಯಿ ಮತ್ತು ಮರಿ ಕಾಡಾನೆ ಅಡಿಕೆ, ಬಾಳೆ ಬೆಳೆಯನ್ನು ಸಂಪೂರ್ಣ ನೆಲಸಮ ಮಾಡಿವೆ.

ಸೋಮವಾರ ಬೆಳಗ್ಗೆ ರೈತ ಶಿವಾನಂದಪ್ಪ ಎಂದಿನಂತೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ರೈತ ನೀಡಿದ ದೂರಿನನ್ವಯ ಕಂದಾಯ ಇಲಾಖೆಯ ಅಧಿಕಾರಿಗಳು, ಅರಸಾಳು ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೆ ಸ್ಥಳಾಂತರಗೊಳಿಸಲು ಹೆಜ್ಜೆ ಜಾಡು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಇತ್ತ ರೈತರು ಮಳೆ ಇಲ್ಲದೆ ಪರಿತಪಿಸುತ್ತಿದ್ದು ಇದೀಗ ಆನೆ ದಾಳಿಯೂ ಅವರ ನಿದ್ದೆಗೆಡಿಸಿದೆ.

ಸ್ಥಳಕ್ಕೆ ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಭೇದುಲ್ಲಾ ಷರೀಫ್, ಸದಸ್ಯ ಮಹಮ್ಮದ್‌ ಷರೀಫ್, ರೈತ ಮುಖಂಡ ಸುಗಂಧರಾಜ್ ಇನ್ನಿತರ ಗ್ರಾಮಸ್ಥರುಗಳು ಭೇಟಿ ನೀಡಿ ಹಾನಿಗೀಡಾಗಿರುವ ಅಡಿಕೆ ಮತ್ತು ಬಾಳೆ ಬೆಳೆಯನ್ನು ವೀಕ್ಷಿಸಿ ತಕ್ಷಣ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Malnad Times

Recent Posts

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

2 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

10 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

20 hours ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

21 hours ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

21 hours ago

ಹಸೆಮಣೆ ಏರುವ‌ ಮುನ್ನ ಹಕ್ಕು ಚಲಾಯಿಸಿದ ವಧು

ಶೃಂಗೇರಿ : ಇಂದು ನಡೆದ ಮತದಾನದಲ್ಲಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಲು ಅಲಂಕಾರಗೊಂಡೆ ಮತಗಟ್ಟೆಗೆ…

22 hours ago