ಕಾದ ಕಾವಲಿಯಂತಾದ ಮಲೆನಾಡ ಹೆಬ್ಬಾಗಿಲು !

0 150

ಶಿವಮೊಗ್ಗ : ತಂಪಾಗಿರಬೇಕಿದ್ದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಈಗ ಕಾದ ಕಾವಲಿಯಂತಾಗಿದ್ದು ಬಿರು ಬಿಸಿಲಿನಿಂದ ಬೇಯುತ್ತಿದೆ.
ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದ್ದು ಬಿಸಿಲಿನಿಂದ ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಬಿಸಿಲಿನ ತಾಪಮಾನ ಏರಿಕೆ ಆಗಿದ್ದು ಸದ್ಯ 39° ಬಿಸಿಲಿನಿಂದ ಬೇಯುತ್ತಿದೆ ಮಲೆನಾಡು.


ವ್ಯಾಪಾರ ವಹಿವಾಟಿನ ಮೇಲೂ ಬಿಸಿಲಿನ ಪ್ರಭಾವ ಬೀರಿದ್ದು ಕಂಗೆಟ್ಟ ಶಿವಮೊಗ್ಗ ಜನತೆ ಮತ್ತಷ್ಟು ಕಂಗೆಟ್ಟಿದ್ದಾರೆ. ಹವಾಮಾನ ವೈಪರೀತ್ಯಕ್ಕೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಆರೋಗ್ಯದ ಮೇಲೆ ಬೀಳುವ ಪ್ರಭಾವಕ್ಕೆ ಎಚ್ಚರಿಕೆ ವಯಿಸುವಂತೆ ಮನವಿ ಮಾಡಿದೆ.


ಮಕ್ಕಳಲ್ಲಿ ಅತಿಸಾರ ಬೇಧಿ, ವೃದ್ದರಲ್ಲಿ ಸನ್‍ಸ್ಟ್ರೋಕ್, ಮಧ್ಯ ವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುವ ಸಾಧ್ಯತೆ ಇದ್ದು
ಈ ಸಮಯದಲ್ಲಿ ಸಾಧ್ಯವಾದಷ್ಟು ಬೆಳಿಗ್ಗೆ ಹಾಗೂ ಸಾಯಂಕಾಲ ಕೆಲಸ ಮಾಡುವ ಪದ್ದತಿ ರೂಢಿಸಿಕೊಳ್ಳಿ ಎಂದು ಮನವಿ ಮಾಡಿದೆ.


ಇನ್ನೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವನ್ನು ಎದುರಿಸುತ್ತಿಸುತ್ತಿದ್ದು ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.

Leave A Reply

Your email address will not be published.

error: Content is protected !!