Categories: Shivamogga

ಕುಮಾರಸ್ವಾಮಿ ಹತಾಶರಾಗಿದ್ದಾರೆ ; ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ಕುಮಾರಸ್ವಾಮಿ ಈಗ ರಾಜ್ಯಾದ್ಯಂತ ಸುತ್ತಾಡಿಕೊಂಡು ಬಂದಿದ್ದಾರೆ. ಇದರಿಂದ ಕುಮಾರಸ್ವಾಮಿಯವರ ಸ್ಥಾನ ಏನು ಎನ್ನುವುದು ಗೊತ್ತಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಹರಿಹಾಯ್ದರು.


ಶಿವಮೊಗ್ಗದ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಜಾತಿ ಧರ್ಮಗಳ ನಡುವೆ ತಂದಿಡುವ ಕೆಲಸ ಮಾಡ್ತಾ ಇದಾರೆ. ಇದರಿಂದ ಓಟ್ ಬರಬಹುದೇನೋ, ನಾನು ನಡುವೆ ಎಲ್ಲಾದರೂ ತೂರಬಹುದೇನೋ ಅಂತ ಪ್ಲಾನ್ ಮಾಡ್ತಾ ಇದ್ದಾರೆ.
ಇದೇ ರೀತಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನವರು ಮಾಡಿದ್ರು. ಲಿಂಗಾಯತ- ವೀರಶೈವರ ನಡುವೆ ತಂದಿಡುವ ಕೆಲಸ ಮಾಡಿದ್ರು. ಎಲ್ಲರನ್ನೂ ಉಯಿಲು ಎಬ್ಬಿಸುವ ಕೆಲಸ ಮಾಡಿದ್ರು. ಇವರೆಲ್ಲ ಕೈಲಾಗದಿದ್ದವರು, ಸರಿಯಾದ ಆಡಳಿತ ಮಾಡದವರು ಆಡಳಿತ ಇದ್ದಾಗ ಸರಿಯಾಗಿ ಕೆಲಸ ಮಾಡಿಲ್ಲ.
ಸಂಘಟನೆಯನ್ನು ಕಟ್ಟಲಿಕ್ಕೂ ಅಗ್ಲಿಲ್ಲ. ಇವರ ಕೈಯಲ್ಲಿ
ಹತಾಶರಾಗಿ ಈ ರೀತಿ ಮಾತಾಡ್ತಾ ಇದ್ದಾರೆ.

ಹಿಂದುತ್ವ ವಿರೋಧದ ಹಿನ್ನೆಲೆ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಆರಗ ಜ್ಞಾನೇಂದ್ರ, ಇದರಲ್ಲಿ ಅರ್ಥವೇ ಇಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಜೊಲ್ಲು ಕೈಯೊಡ್ಡುವ ಕೆಲಸ ಮಾಡ್ತಾ ಇದಾರೆ. ಈ ರೀತಿ ಮಾತನಾಡಿದ್ರೆ ಅಲ್ಪಸಂಖ್ಯಾತರ ಓಟ್ ಸಿಗುತ್ತೆ ಅಂದ್ಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಕಳೆದುಕೊಳ್ಳುವುದೇ ಜಾಸ್ತಿ‌ ಟಿಪ್ಪು ಜಯಂತಿ ಮಾಡಿ ಚುನಾವಣೆಯಲ್ಲಿ ಏನೇನೋ ಮಾಡೋಕೆ ಹೋಗಿದ್ರು ಎಂದರು.


ಬಿಜೆಪಿಯವರು ಇಡಿ ದುರುಪಯೋಗ ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದ ಅನೇಕ ಜನರ ಮೇಲೆ ದಾಳಿ ನಡೆಯುತ್ತಿದೆ. ಡಿಕೆಶಿ‌ ಸರಿ ಇದ್ರೆ ಸರಿಯಾದ ದಾಖಲೆ ಕೊಟ್ಟಿದ್ರೆ ಯಾಕ್ ಭಯ ಪಡಬೇಕು. ಇವರು ಅಧಿಕಾರದಲ್ಲಿ ಇದ್ದಾಗ ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿದ್ರು. ಎಸಿಬಿಯನ್ನು ದುರುಪಯೋಗ ಪಡೆಸಿಕೊಂಡ್ರು. ಲೋಕಾಯುಕ್ತವನ್ನು ಕುತ್ತಿಗೆ ಹಿಸುಕುವ ಕೆಲಸ ಮಾಡಿದ್ರು. ಸೂಕ್ತ ಸಮಜಾಯಸಿ ನೀಡಲಿ, ಅದು ಬಿಟ್ಟು ಯಾಕೆ ಭಯಪಡಬೇಕು‌ ಇವರು ಉತ್ತರ ಕೊಡದಿದ್ದರೆ ಕೇಸ್ ಮುಗಿಯುತ್ತಾ ? ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ವಿಚಾರವಾಗಿ ಮಾತನಾಡಿ, ಕೇಂದ್ರ ಗೃಹ ಸಚಿವರಿಗೆ ದೂರು ಹಿನ್ನಲೆ ನಾನು ಗೃಹ ಇಲಾಖೆಯಿಂದ ನಿರೀಕ್ಷೆ ಮಾಡ್ತಾ ಇದೀವಿ ಏನಾದ್ರು ಬಂದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Malnad Times

Recent Posts

ಗೀತಾ ಶಿವರಾಜ್‌ಕುಮಾರ್ ರವರಿಗೆ ಒಂದು ಅವಕಾಶ ಕೊಡಿ ; ಸಾ.ರಾ. ಗೋವಿಂದು

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಅವರಿಗೆ ಒಂದು ಅವಕಾಶವನ್ನು ನೀಡಬೇಕು ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ…

36 mins ago

ಗೀತಾ ಗ್ರಾ.ಪಂ. ಚುನಾವಣೆ ಕೂಡ ಗೆಲ್ಲಲ್ಲ ; ಕುಮಾರ್ ಬಂಗಾರಪ್ಪ

ಶಿವಮೊಗ್ಗ : ಬಿ.ವೈ.ರಾಘವೇಂದ್ರ ಅವರು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ…

2 hours ago

ಮೇ 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ

ಶಿವಮೊಗ್ಗ : ಭಾರತ ಚುನಾವಣಾ ಆಯೋಗವು ಕರ್ನಾಟಕದಲ್ಲಿ 02 ಹಂತಗಳಲ್ಲಿ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲಾದ್ಯಂತ ಮೇ 07…

4 hours ago

ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು: ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸುಜೇಂದ್ರ, ಉಪಾಧ್ಯಕ್ಷರಾಗಿ ಶರತ್‌ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್,…

4 hours ago

Chikkamagaluru | ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ (ಸಂತೆ ಮೈದಾನ) ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ ಮೇ 1 ರಿಂದ 5ರವರೆಗೆ ಕರಗ ಮಹೋತ್ಸವ…

4 hours ago

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

8 hours ago