Categories: Shivamogga

ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ | ಯಾವ ಪಕ್ಷ ಎಂಬುದು ಇನ್ನೆರಡು ದಿನದಲ್ಲಿ ನಿರ್ಧಾರ ; ಆಯನೂರು ಮಂಜುನಾಥ್

ಶಿವಮೊಗ್ಗ : ಕಾದು ನೋಡುವ ತಂತ್ರಗಾರಿಕೆಯನ್ನು ಆಯನೂರು ಮಂಜುನಾಥ್ ಮತ್ತೆರಡು ದಿನಗಳ ಕಾಲ ಮುಂದೂಡಿದ್ದಾರೆ. ಇಂದು ಅವರು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ರ್ಸ್ಪಧಿಸುವ ತಮ್ಮ ನಿರ್ಧಾರವನ್ನು ಇನ್ನು ಎರಡು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಆದರೆ ಯಾವ ಪಕ್ಷ ಎಂಬುದು ಇನ್ನು ಎರಡು ದಿನಗಳಲ್ಲಿ ನಿರ್ಧಾರ ಆಗಲಿದೆ. ಒಂದೇ ದಿನದಲ್ಲಿ ಶಿವಮೊಗ್ಗದ ರಾಜಕೀಯ ಮಗ್ಗಲು ಬದಲಾವಣೆ ಕಂಡಿದೆ. ಹಾಗಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದರು.

ಈಶ್ವರಪ್ಪ ಪರ ಅಭಿಮಾನಿಗಳು ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆಯನೂರು, ಈಶ್ವರಪ್ಪ ನಿರ್ಗಮನ ತಮಗೆ ಆಘಾತಕಾರಿಯಾಗಿದೆ. ಅವರ ಅಭಿಮಾನಿಗಳು ಪ್ರತಿಭಟನೆ ಮಾಡುವುದು ಸಹಜವೇ ಆಗಿದೆ. 30 ವರ್ಷಗಳ ರಾಜಕಾರಣ ಮಾಡಿದಾಗ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಈಶ್ವರಪ್ಪ ಅವರು ಎಲ್ಲರೊಂದಿಗೆ ಸಂತೋಷದಿಂದ ಇದ್ದವರು. ಅವರಿಗೆ ಯಾರೇ ಶತ್ರುಗಳಿಲ್ಲ. ಅವರೇ ಮುಂದುವರೆಯಬೇಕು ಎಂದು ಕಾರ್ಯಕರ್ತರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದರು.

ಈಶ್ವರಪ್ಪ ಅವರಿಗೆ ತಮ್ಮಲ್ಲೇ ಇಬ್ಬರು ಶತ್ರುಗಳಿದ್ದರು. ಒಂದು ಅವರ ಮಾತುಗಳ ಮೇಲೆ ಅವರಿಗೇ ನಿಯಂತ್ರಣ ಇರಲಿಲ್ಲ. ಮತ್ತೊಂದು ಪುತ್ರ ವ್ಯಾಮೋಹ. ಇದನ್ನು ಹೊರತುಪಡಿಸಿ ಬೇರೆ ಯಾರೂ ಶತ್ರುಗಳು ಅವರಿಗೆ ಇರಲಿಲ್ಲ. ಇವೆರಡನ್ನೂ ನಿಯಂತ್ರಣ ಮಾಡಿದ್ದರೆ ಗುತ್ತಿಗೆದಾರನ ಸಾವು ಆಗುತ್ತಿರಲಿಲ್ಲ. ಜೊತೆಗೆ ರಾಜಕೀಯ ನಿವೃತ್ತಿಯೂ ಆಗುತ್ತಿರಲಿಲ್ಲ ಎಂದರು.

ಈಶ್ವರಪ್ಪ ಅವರು ನನ್ನ ಟಾರ್ಗೆಟ್ ಅಲ್ಲ. ಈಶ್ವರಪ್ಪ ಅವರು ಎದುರಾಳಿಯೂ ಅಲ್ಲ. ಕಾರ್ಮಿಕರ ಪರವಾಗಿ ವಿಧಾನ ಪರಿಷತ್‌ನಲ್ಲಿ ಪರಿಣಾಮಕಾರಿಯಾಗಿ ಮಂಡಿಸಲು ಆಗಲಿಲ್ಲ. ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ಇನ್ನು ಅತಿಥಿ ಶಿಕ್ಷಕರು, ಎನ್‌ಪಿಎಸ್-ಒಪಿಎಸ್ ಚರ್ಚೆ ನಡೆದರೂ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ಹಾಗಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿ, ಇದಕ್ಕೆಲ್ಲಾ ಪರಿಹಾರ ಕೊಡಿಸುವ ಕನಸು ಹೊಂದಿದ್ದೇನೆ. ಅವಕಾಶ ದೊರೆತಲ್ಲಿ ವಿಧಾನಸಭೆ ಪ್ರವೇಶ ಮಾಡಲು ನಿರ್ಧರಿಸಿದ್ದೇನೆ ಎಂದರು.

Malnad Times

Recent Posts

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

2 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

10 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

21 hours ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

21 hours ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

21 hours ago

ಹಸೆಮಣೆ ಏರುವ‌ ಮುನ್ನ ಹಕ್ಕು ಚಲಾಯಿಸಿದ ವಧು

ಶೃಂಗೇರಿ : ಇಂದು ನಡೆದ ಮತದಾನದಲ್ಲಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಲು ಅಲಂಕಾರಗೊಂಡೆ ಮತಗಟ್ಟೆಗೆ…

22 hours ago