ಚುನಾವಣೆ ಹೊತ್ತಲ್ಲಿ ಇದು ಬೇಕಿತ್ತಾ ?

0 94

ಶಿವಮೊಗ್ಗ : ಚುನಾವಣೆಯ ಈ ಹೊತ್ತಿನಲ್ಲಿ ತಮಿಳು ಸಮಾಜದ ಜನರ ಮನವೊಲಿಸಲು ಬಿಜೆಪಿ ಪ್ರಮುಖರು ಆಡಿದ ಆಟಕ್ಕೆ ಮಾಜಿ ಉಪಮುಖ್ಯಮಂತ್ರಿ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ಇಂದಿಲ್ಲಿ ನಡೆದಿದೆ.

ನಗರ ಬಿಜೆಪಿಯವರು ಇಲ್ಲಿನ ಎನ್ ಇ ಎಸ್ ಮೈದಾನದಲ್ಲಿ‌ ಏರ್ಪಡಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ಕನ್ನಡ ನಾಡಗೀತೆ ಬದಲು ತಮಿಳು ನಾಡಗೀತೆ ಹಾಕಿ ಎಡವಟ್ಟು ಮಾಡಿದ ಘಟನೆ ಸಂಭವಿಸಿದೆ.

ಈ ಗೀತೆ ಕೇಳಿದಾಕ್ಷಣ ಆಕ್ರೋಶಗೊಂಡ ಶಾಸಕ ಈಶ್ವರಪ್ಪ ಆಸನದಿಂದ ಎದ್ದು ಬಂದು ಅದನ್ನು ನಿಲ್ಲಿಸುವಂತೆ ಸೂಚಿಸಿದರಲ್ಲದೆ, ಸಂಘಟಕರನ್ನು ಸಿಟ್ಟಿನಿಂದ ಕಣ್ಣಿನಿಂದಲೇ ಬೆದರಿಸಿದರು.


ಕನ್ನಡ ನಾಡಗೀತೆ ಇಲ್ವಾ ? ಎಂದು ಪ್ರಶ್ನಿಸಿದರು. ಚುನಾವಣೆ ಹೊತ್ತಿನಲ್ಲಿ ಇದು ಬೇಕಿತ್ತಾ ? ಎಂದು ಮೆಲ್ಲಗೆ ಹೇಳುತ್ತಾ ನಂತರ ಮೈಕ್ ಹಿಡಿದು ಕನ್ನಡ ನಾಡಗೀತೆ ಹಾಡಲು ಮಹಿಳೆಯರಿಗೆ ಕೇಳಿದರು. ಯಾರಾದರೂ ಹಾಡುವವರಿದ್ದರೆ ಬನ್ನಿ ಎಂದು ಆಹ್ವಾನಿಸಿದರು.

ಕೆಲವು ಮಹಿಳೆಯರು ಮುಂದೆ ಬಂದರಾದರೂ ಕನ್ನಡ ನಾಡಗೀತೆಯನ್ನು ಸಂಘಟನೆಯವರು ಹಾಕಿದರು. ನಂತರ ಕನ್ನಡ ನಾಡಗೀತೆ ಹಾಡಲಾಯಿತು. ಇದೆಲ್ಲಾ ಬೇಕಿತ್ತಾ ? ತಮಿಳು ಸಮಾಜದವರು ಆ ಹಾಡು ಕೇಳಿದ್ದರಾ ?

Leave A Reply

Your email address will not be published.

error: Content is protected !!