Categories: Shivamogga

ದಾಖಲೆಗಳಿಲ್ಲದ ನಾಲ್ಕೂವರೆ ಕೋಟಿ ಬೆಲೆ ಬಾಳುವ ಸೀರೆಗಳು ಮತ್ತು ಕಂತೆ ಕಂತೆ ಹಣ ಪತ್ತೆ !

ಶಿವಮೊಗ್ಗ : ಲಕ್ಷದ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ವಸ್ತುಗಳು
ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಧಿಕಾರಿಗಳ
ಹೈ ಅಲರ್ಟ್ ನಿಂದಾಗಿ ಅದರ ಪ್ರಮಾಣ ಕೋಟಿಗೆ ಜಂಪ್ ಆಗಿವೆ.


ಈಸ್ಟ್ ವೆಸ್ಟ್ ಬಸ್ ಗಳಲ್ಲಿ ಹಣ, ಮತ್ತು ಇತರೆ ವಸ್ತುಗಳು ಬಾಂಬೆಯಿಂದ ಬಂದಿವೆ ಎಂದು ದಾಳಿ ನಡೆಸಿದಾಗ ಲಕ್ಷದ
ಪ್ರಮಾಣದಲ್ಲಿ ಬಟ್ಟೆಗಳು ಪತ್ತೆಯಾಗಿ ವಾಣಿಜ್ಯ ತೆರಿಗೆ ಇಲಾಖೆಗೆ
ಹಸ್ತಾಂತರಗೊಂಡಿದ್ದವು. ಆದರೆ ಇದೀಗ ದೊಡ್ಡ ಪ್ರಮಾಣದ
ಸೀರೆಗಳು ಪತ್ತೆಯಾಗಿವೆ. ಇದರ ಮೌಲ್ಯ 4 ಕೋಟಿ 50 ಲಕ್ಷ ರೂ.
ಎಂದು ಅಂದಾಜಿಸಲಾಗಿದೆ.


ನಗರದ ಕೆ.ಆರ್ ಪುರಂ ರಸ್ತೆಯಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್
ಗೋದಾಮಿನಲ್ಲಿ ಕಳೆದ ಎರಡು ತಿಂಗಳಿಂದ ಬಂದ ಸೀರೆಗಳನ್ನ
ಯಾರೂ ತೆಗೆದುಕೊಂಡು ಹೋಗದ ಕಾರಣ ಅಲ್ಲೇ ಉಳಿದಿತ್ತು.
ನಿನ್ನೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದಾಗ ಈ ವಸ್ತು
ಪತ್ತೆಯಾಗಿದೆ.


ದಾಳಿಯ ವೇಳೆ ನಾಲ್ಕು ಕೋಟಿ 50 ಲಕ್ಷದ ಸೀರೆಗಳಿಗೆ ಯಾವುದೇ ದಾಖಲಾತಿ ಇಲ್ಲದ ಕಾರಣ ಇಷ್ಟು ಮೌಲ್ಯದ ಸೀರೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಗರ ಗ್ರಾಮಾಂತರದಲ್ಲಿ 20 ಲಕ್ಷ ರೂ ಪತ್ತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 20 ಲಕ್ಷ ರೂ ಹಣ ಕಾರಿನಲ್ಲಿ ಸಾಗಿಸುವಾಗ ಸೂಕ್ತ ದಾಖಲಾತಿ ನೀಡದ ಹಿನ್ನಲೆಯಲ್ಲಿ ಹಣ ಮತ್ತು ಕಾರನ್ನ ವಶಪಡಿಸಿಕೊಳ್ಳಲಾಗಿದೆ.


ಸಾಗರದ ಚೂರಿಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಟಾಟಾ ಇಂಡಿಗೋ
ಕಾರಿನಲ್ಲಿ ಸಾಗಿಸುವಾಗ ಪತ್ತೆಯಾಗಿದೆ. ಅದರಂತೆ ನಿನ್ನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಂಕ್‌ನ ಎಟಿಎಂಗೆ ಹಣ ಹಾಕುವ ವಾಹನದಲ್ಲಿ 1 ಕೋಟಿ 40 ಲಕ್ಷ ರೂ.
ಪತ್ತೆಯಾಗಿವೆ.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

6 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

8 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

9 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

14 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

15 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago