Categories: Shivamogga

MAMCOS ಸಂಘದ ಮೇಲೆ ದಿನೇಶ್ ಕಡ್ತೂರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ; ಹೆಚ್.ಎಸ್.ಮಹೇಶ್

ಶಿವಮೊಗ್ಗ : ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (ಮಾಮ್‌ಕೋಸ್)ದ ಸದಸ್ಯ ದಿನೇಶ್ ಕಡ್ತೂರು ಅವರು ಸಂಘದ ಮೇಲೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ದಾಖಲೆಗಳನ್ನು ಸಾಬೀತುಪಡಿಸಿದರೆ ಸಂಘ ಗಂಭೀರವಾಗಿ ಚಿಂತನೆ ಮಾಡಲಿದೆ ಎಂದು ಸಂಘದ ಉಪಾಧ್ಯಕ್ಷ ಹೆಚ್.ಎಸ್.ಮಹೇಶ್ ಸ್ಪಷ್ಟನೆ ನೀಡಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿನೇಶ್ ಕಡ್ತೂರು ಅವರು ಸಂಘದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಇದು ಷೇರದಾರರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಅದನ್ನು ದಾಖಲೆ ಮೂಲಕ ಸಲ್ಲಿಸಲಿ. ಹೀಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಅವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಸಂಘ ಯೋಚಿಸುತ್ತದೆ ಎಂದರು.

ದಿನೇಶ್ ಕಡ್ತೂರು ಅವರು ಇದುವರೆಗೂ ಸಂಘದಲ್ಲಿ 3.60 ಕೋಟಿ ರೂ. ಖರ್ಚಾಗಿದೆ. ಗಂಭೀರ ಆರೋಪ ಮಾಡಿದ್ದಾರೆ. ಅದರೆ, 2006ರಿಂದ ಇಲ್ಲಿಯವರೆಗೆ ಖರ್ಚಾಗಿರುವುದು. 80 ಲಕ್ಷ ಮಾತ್ರ. ಈ ರೀತಿ ಸುದ್ದಿ ಹಬ್ಬಿಸುವುದು ಸರಿಯಲ್ಲ. ಪ್ರತಿವರ್ಷ ಅಯವ್ಯಯದಲ್ಲಿ ಮಂಡಿಸುವ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಇದು ಅನುಮೋಧನೆ ಪಡೆದಿರುತ್ತದೆ ಎಂದರು.

ಮಾಮ್‌ಕೋಸ್ ನ ಆಡಳಿತ ಮಂಡಳಿಯವರು ಪಕ್ಷವೊಂದರ ಪರ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸುತ್ತಾರೆ. ಲೋಕಸಭಾ ಚುನಾವಣೆ ಇದಕ್ಕೆ ಕಾರಣ ಎನ್ನುತ್ತಾರೆ. ಆದರೆ ಅವರು ಈ ಆರೋಪವನ್ನು ಮತ್ತು ಪತ್ರಿಕಾಗೋಷ್ಠಿಯಲ್ಲಿ ನಿರ್ದಿಷ್ಟ ಪಕ್ಷದ ಕಚೇರಿಯೊಂದರಲ್ಲಿಯೇ ಮಾಡಿದ್ದಾರೆ. ಹೀಗಾಗಿ ಅವರು ಯಾವ ಪಕ್ಷದವರು ಎಂದು ಗೊತ್ತಾಗುತ್ತದೆ. ಆದರೆ ಮ್ಯಾಮ್‌ಕೋಸ್ ನ ಸಂಸ್ಥೆಯು ಇದುವರೆಗೂ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಯಾವುದೇ ರಾಜಕೀಯ ವ್ಯಕ್ತಿಗಳು ಇಲ್ಲ. ನಾವು ರಾಜಕಾರಣವನ್ನು ಮಾಡುವುದು ಇಲ್ಲ ಎಂದರು.

ದಿನೇಶ್ ಕಡ್ತೂರು ಅವರು ಸಂಘದ ಬೈಲವನ್ನು ಸರ್ಕಾರ ತಿರಸ್ಕರಿಸಿದೆ ಎಂಬ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿರುವುದು ಕಂಡು ಬಂದಿದೆ. ಆದರೆ ಬೈಲಾ ತಿದ್ದುಪಡಿಯನ್ನು ತಿರಸ್ಕರಿಸಿರುವ ಬಗ್ಗೆ ಹಾಗೂ ಯಾವುದೇ ಮಾಹಿತಿ ನಮ್ಮ ಸಂಸ್ಥೆಗೆ ಬಂದಿಲ್ಲ. ಈ ಬಗ್ಗೆ ಯಾವ ಮಾತುಕತೆಗಳು ನಡೆದಿಲ್ಲ. ಈಗಿರುವಾಗ ಈ ತಿದ್ದುಪಡಿ ಬೈಲಾ ಕಡ್ತೂರು ಕೈಗೆ ಹೇಗೆ ಸಿಕ್ಕಿತು ಎಂಬುಂದೇ ಯಕ್ಷಪ್ರಶ್ನೆಯಾಗಿದೆ ಹಾಗೂ ಷೇರುದಾರರ ಆತಂಕಕ್ಕೆ ಕಾರಣವಾಗಿದೆ ಎಂದರು.

ಮಾಮ್‌ಕೋಸ್ ನಲ್ಲಿ 4 ಸಾವಿರ ಕೋಟಿ ವಹಿವಾಟು ನಡೆದರೂ 4 ಕೋಟಿ ಲಾಭ ಕಡ್ತೂರು ಹೇಳುತ್ತಾರೆ. ಆದರೆ 2022-23 ರಲ್ಲಿ 1227 ಕೋಟಿ ರೂ. ವ್ಯವಹಾರವಾಗಿದೆ. ಈ ಆರೋಪ ಕೂಡ ಸುಳ್ಳು. ಹೀಗೆ ಕಡ್ತೂರು ಮತ್ತು ಮಾಜಿ ಉಪಾಧ್ಯಕ್ಷರಾಗಿರುವ ಯು.ಎಸ್.ಶಿವಪ್ಪ ಅವರು ಸರ್ವ ಸದಸ್ಯರ ಸಭೆಗೂ ಮುಂಚಿತವಾಗಿ ಷೇರುದಾರರು ಸಮಾಲೋಚನಾ ಸಭೆಯನ್ನು ನಡೆಸುವಂತೆ ಕೋರಿದ್ದಾರೆ. ಮ್ಯಾಮ್‌ಕೋರ್ಸ್ ತಾವು ಗಳಿಸಿದ ಲಾಭದಲ್ಲಿ ಸದಸ್ಯರಿಗೆ ನಿಯಮದಂತೆ ಶೇ.10 ರಷ್ಟು ಡಿವಿಡೆಂಡ್ ನೀಡಿದೆ ಎಂದರು.

ಮ್ಯಾಮ್‌ಕೋರ್ಸ್ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬದ್ದವಾಗಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಗಮನಹರಿಸಿದೆ. ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಿವ್ವಳ ಲಾಭವು ಹೆಚ್ಚಿದೆ. 178 ಕೋಟಿ ವಹಿವಾಟು ಇಂದು 1277 ಕೋಟಿ ರೂ. ತಲುಪಿದೆ. ಹಾಜರಾತಿ ಸಂಖ್ಯೆ ಹೆಚ್ಚಿದೆ. ಅಡಿಕೆ ಬೆಳೆಗಾರರ ಜೀವನಾಡಿಯಾಗಿದೆ. ಕಡ್ತೂರು ಅಂತವರ ಆರೋಪಗಳನ್ನು ಯಾವ ಷೇರುದಾರರು ಒಪ್ಪಬಾರದು. ದೃತಿಗೆಡುವ ಅಗತ್ಯವಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಈಶ್ವರಪ್ಪ ಸಿ.ಬಿ., ಬಿ.ಸಿ.ನರೇಂದ್ರ, ಕೀರ್ತಿರಾಜ್ ಕೆ., ಕೃಷ್ಣಮೂರ್ತಿ ಕೆ.ವಿ., ಕೆ.ರತ್ನಾಕರ, ಸುಬ್ರಹ್ಮಣ್ಯ ವೈ.ಎಸ್., ಜಿ.ಈ.ವಿರೂಪಾಕ್ಷಪ್ಪ, ಸುರೇಶ್ ಚಂದ್ರ, ಕೆ.ಕೆ.ಜಯಶ್ರೀ, ವಿಜಯಲಕ್ಷ್ಮೀ, ಬಡಿಹಣ್ಣ ಮುಂತಾದವರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

8 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

8 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

11 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

11 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

18 hours ago