ನಗರ ಸುತ್ತಮುತ್ತ ನಿಧಿ ಕಳ್ಳತನ ಮಾಡಿದ್ದಾರೆ ಇದರಲ್ಲಿ ಜಿ.ಪಂ. ಮಾಜಿ ಸದಸ್ಯನ ಕೈವಾಡವಿದೆ ; ಕಾಂಗ್ರೆಸ್ ಮುಖಂಡರ ಗಂಭೀರ ಆರೋಪ

ಹೊಸನಗರ : ತಾಲೂಕಿನ ಬಿದನೂರು ನಗರದ ಹಲವು ಪ್ರದೇಶದಲ್ಲಿ ಅಕ್ರಮವಾಗಿ ನಿಧಿಶೋಧ ಪ್ರಕರಣದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಕೈವಾಡವಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ನಡೆಸುತ್ತಿರುವ ಗುಂಡಾಗಿರಿ ದೌರ್ಜನ್ಯವನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ನಡೆದ ನಡೆದ ಗಲಾಟೆಯ ಬಗ್ಗೆ ಸ್ಥಳೀಯವಾಗಿ ವಿಚಾರಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು.ಅದನ್ನು ಹೊರತುಪಡಿಸಿ ಏಕಾಏಕಿ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರತಿಭಟನೆ ಮಾಡುವುದು ಸರಿಯಲ್ಲ. ಮಾಜಿ ಶಾಸಕರು, ಹಿರಿಯರು ಆದ ಸ್ವಾಮಿರಾವ್ ಹೆಸರಿಗೆ ಗೌರವ ತರುವ ಕೆಲಸ ಸುರೇಶ್ ಸ್ವಾಮಿರಾವ್ ಮಾಡಬೇಕು. ನಗರ ಸುತ್ತ ಮುತ್ತಲು ಹಲವಾರು ಪ್ರದೇಶದಲ್ಲಿ ನಿಧಿ ಶೋಧನೆ ಮಾಡಲಾಗಿದೆ. ಇದರಲ್ಲಿ ಸುರೇಶ್ ಸ್ವಾಮಿರಾವ್ ನೇರ ಕೈವಾಡವಿದೆ ಈ ಬಗ್ಗೆ ತನಿಖೆ ನಡೆಯಲಿ, ಕಳೆದ ಬಾರಿ ಸೂಡೂರು ರೇಲ್ವೆ ಗೇಟೆ ಬಳಿ ಕುಡಿದು ದಾಂಧಲೆ ಮಾಡಿ ಜಿಪಂ ಸದಸ್ಯ ಸ್ಥಾನಕ್ಕೆ ಅಗೌರವ ತಂದಿರುವುದನ್ನು ಜನತೆ ನೋಡಿದ್ದಾರೆ. ಇಂತವರಿಂದ ಪಾಠ ಕೇಳುವ ಪರಿಸ್ಥಿತಿ ನಗರ ಹೋಬಳಿ ಜನತೆಗೆ ಬಂದಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಕರುಣಾಕರ್ ಶೆಟ್ಟಿ ಮಾತನಾಡಿ, ನಗರ ಗ್ರಾಮ ಪಂಚಾಯಿತಿ ಬಸವಣಬ್ಯಾನದ ವಾಸಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿತಿನ್ ನಡೆಸುತ್ತಿರುವ ಗುಂಡಾಗಿರಿ, ದೌರ್ಜನ್ಯವನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹಿಂದುತ್ವ ಹೆಸರಿನಲ್ಲಿ, ಗೋ ರಕ್ಷಣೆ ಹೆಸರಿನಲ್ಲಿ ರಾತ್ರಿ ವೇಳೆ ಸಾರ್ವಜನಿಕರ ವಾಹನ ತಡೆದು ತಪಾಸಣೆ ನಡೆಸಲು ಹಕ್ಕು ಕೊಟ್ಟವರು ಯಾರು ? ಕೃಷಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರು ಯಾರು ? ತಮ್ಮ ವಾಹನಕ್ಕೆ ಸೆಡ್ ನೀಡಿಲ್ಲ ಎಂದು ಕೆ.ಎಸ್.ಆರ್.ಟಿ ಬಸ್ ಚಾಲಕರನ್ನು ಚಿಕ್ಕಪೇಟೆ ಸರ್ಕಲ್ ನಲ್ಲಿ ಹಲ್ಲೆ ನಡೆಸಿದ ನಿತಿನ್ ಮತ್ತು ಅವನ ತಮ್ಮ ನವೀನ್ ಕುರಿತು ಸ್ಥಳೀಯವಾಗಿ ವಿಚಾರಿಸಬೇಕು. ಸತ್ಯಾಸತ್ಯತೆ ತಿಳಿದು ಮಾತನಾಡುವ ನೈತಿಕತೆ ಬಿಜೆಪಿ ನಾಯಕರು ಅರಿತುಕೊಳ್ಳಬೇಕೆಂದರು.

ಕರಿಮನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಡಿಸೆಂಬರ್ ರಾತ್ರಿ ಒಂದೂವರೆ ಎರಡು ಗಂಟೆ ಸಮಯದಲ್ಲಿ ಜಗಳವಾಡಿಕೊಂಡ ಯುವಕರನ್ನು ಬುದ್ದಿ ಹೇಳಿ ಸರಿಪಡಿಸುವುದನ್ನು ಬಿಟ್ಟು ರಾಜಕೀಯ ಬಣ್ಣ ಕಟ್ಟಬಾರದು ಇದು. ಬಿಜೆಪಿ ನಾಯಕರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಎರಡು ಕಡೆಯ ವ್ಯಕ್ತಿ ಮೇಲೆ ಕೇಸ್ ದಾಖಲಿಸಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಬೇರೆ ಊರಿನಿಂದ ಬಂದು ಕುಡಿದು ಬೋಗಳಿದರೆ ಇಲ್ಲಿಯ ಜನ ಸಹಿಸುವುದಿಲ್ಲ. ಮಾಜಿ ಶಾಸಕರು, ಹಿರಿಯರು ಆದ ಬಿ. ಸ್ವಾಮಿರಾವ್ ಹೆಸರಿಗೆ ಗೌರವ ತರುವ ಕೆಲಸ ಸುರೇಶ್ ಸ್ವಾಮಿರಾವ್ ಮಾಡಲಿ. ನಗರ ಸುತ್ತಮುತ್ತಲು ಹಲವಾರು ಪ್ರದೇಶದಲ್ಲಿ ನಿಧಿ ಶೋಧನೆ ಮಾಡಲಾಗಿದೆ. ಇದಕೆ ಪ್ರಮುಖ ಕಾರಣ ಸುರೇಶ್ ಸ್ವಾಮಿರಾವ್. ಕಳೆದ ಬಾರಿ ಸೂಡೂರು ರೇಲ್ವೆ ಗೇಟ್ ಬಳಿ ಕುಡಿದು ದಾಂಧಲೆ ಮಾಡಿ ನಂತರ ಓಡಿ ಹೋಗಿ ಗೋವಾದಲ್ಲಿ ಅವಿತುಕೊಂಡ ಸುರೇಶ್ ಸ್ವಾಮಿರಾವ್ ಇವರನ್ನು ಆಗಿನ ಸಿಪಿಐ ಮಂಜುನಾಥ್ ಕುತ್ತಿಗೆಗೆ ಕೈ ಹಾಕಿ ಏಳೆದು ಕರೆತಂದಿದ್ದನ್ನು ಕ್ಷೇತ್ರದ ಎಲ್ಲ ಜನತೆ ನೋಡಿದ್ದಾರೆ. ಇಂತಹ ಕುಡುಕನಿಂದ ಪಾಠ ಕೇಳುವ ಪರಿಸ್ಥಿತಿ ನಗರ ಹೋಬಳಿ ಜನತೆಗೆ ಬಂದಿಲ್ಲ ಎಂದರು.

ಯುವ ಮುಖಂಡ ಗೋಪಾಲಶೆಟ್ಟಿ ಮಾತನಾಡಿ, ಚಿಕ್ಕಪೇಟೆ ಗಣಪತಿ ವಿಸರ್ಜನೆಯ ವೇಳೆ ದೊಣ್ಣೆಗಳೊಂದಿಗೆ ಮೆರವಣಿಗೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದು ಗೂಂಡಾಗಿರಿಯಲ್ಲವೇ? ಶಿವಮೊಗ್ಗ ರಸ್ತೆಯ ಸುಮಾರು ರೈಲ್ವೆ ಗೇಟ್ ಬಳಿ ಕುಡಿದು ರೈಲ್ವೆ ಸಿಬ್ಬಂದಿಗಳಿಗೆ ಥಳಿಸಿದ್ದು ಗೂಂಡಾಗಿರಿನಲ್ಲವೇ? ನಿಧಿ ಚೋರರನ್ನು ಜೊತೆಯಲ್ಲಿರಿಸಿಕೊಂಡು ಪ್ರತಿಭಟನೆ ನಡೆಸುವುದು ಯಾವ ಪುರುಷಾರ್ಥ? ಕುಡಿದ ಮತ್ತಿನಲ್ಲಿ ಕೊಡಚಾದ್ರಿ ಗಿರಿಯಲ್ಲಿ ದಾಂಧಲೆ ಗೂಂಡಾಗಿರಿಯಲ್ಲವೆ? ರೇಪ್ ಪ್ರಕರಣದಲ್ಲಿ ಭಾಗಿಯಾದವರನ್ನು ಜೊತೆಯಲ್ಲಿರಿಸಿಕೊಂಡು ಪ್ರತಿಭಟನೆ ಮಾಡುವುದು ಯಾವ ಪುರುಷಾರ್ಥ ? ಬಸವನಬ್ಯಾಣದ ವಾಸು ಅವರ ಕುಟುಂಬದ ಮೇಲೆ ದೌರ್ಜನ್ಯ ಮಾಡಿದ್ದು ಗೂಂಡಾಗಿರಿಯಲ್ಲವೆ ? ಕೆ ಎಸ್ ಆರ್ ಟಿ ಸಿ ಬಾಲಕರ ಹಾಗು ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು ಗೂಂಡಾಗಿರಿಯಲ್ಲಿವೆ ? ಸರ್ಕಾರಿ ಆಸ್ಪತ್ರೆ ವೈಧ್ಯರನ್ನು ಉದ್ದೇಶ ಪೂರ್ವಕವಾಗಿ ವರ್ಗಾವಣೆ ಮಾಡಿಸಿ ನಗರ ಭಾಗದ ಜನತೆ ವೈದ್ಯರ ಸೇವೆ ವಂಚಿತರನ್ನಾಗಿ ಮಾಡಿದ್ದು ಬಿಜೆಪಿಯ ನಾಯಕರ ಸಾಧನೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಗ್ರಾಮ ಪಂಚಾಯತಿ ಸದಸ್ಯ ಪವನ, ಹಿಲ್ಕುಂಜಿ ಕುಮಾರ್, ಆರ್ಯ ಈಡಿಗ ಸಮಾಜ ಮುಖಂಡ ಗಣಪತಿ, ಚಂದ್ರಪ್ಪ, ಸುಬಾಷ್, ಕಟ್ಟಿನಹೋಳೆ ಗೋಪಾಲ, ಕಿಶೋರ್ ವಿಠೋಬ, ರಮೇಶ್, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Malnad Times

Recent Posts

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

3 hours ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

3 hours ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

4 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

4 hours ago

ಬಟಾಣಿಜಡ್ಡು ಗ್ರಾಮದಲ್ಲಿ ಭತ್ತದ ಬೆಳೆ ನಾಶಗೊಳಿಸಿದ ಕಾಡಾನೆಗಳು, ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…

6 hours ago

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

10 hours ago