Categories: Shivamogga

ಪಠ್ಯಪುಸ್ತಕ ಬದಲಾಣೆ ಮಾಡಿರುವುದು ರಾಜ್ಯ ಸರ್ಕಾರದ ದ್ವೇಷದ ರಾಜಕಾರಣ ; ಡಿ.ಎಸ್ ಅರುಣ್

ಶಿವಮೊಗ್ಗ: ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಿರುವುದು ದ್ವೇಷದ ರಾಜಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ದೂರಿದರು.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಕಲಾಪದಲ್ಲಿ ನಾನು ಹಲವು ಪ್ರಶ್ನೆಗಳನ್ನು ಕೇಳಿದ್ದೆ.ಕೆಲವು ಪ್ರಶ್ನೆಗಳಿಗೆ ಸ್ಟಾರ್ ಸಿಕ್ಕಿತ್ತು. ಶೂನ್ಯ ವೇಳೆಯಲ್ಲಿ ಕೂಡ ಪ್ರಶ್ನೆಗಳನ್ನು ಕೇಳಿರುವೆ. ಪಠ್ಯ ಪುಸ್ತಕ ಬದಲಾವಣೆ ಸೇರಿದಂತೆ ಜಿಎಸ್ಟಿ, ಎಪಿಎಂಸಿ ಕಾಯಿದೆ, ಟ್ರೇಡ್ ಲೈಸೆನ್ಸ್ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ ಎಂದರು.

ಮುಖ್ಯವಾಗಿ ಸರ್ಕಾರಕ್ಕೆ ನನ್ನ ಪ್ರಶ್ನೆ ಇದ್ದದ್ದು ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡಿದ್ದು ಏಕೆ‌ ? ಯಾವ ಯಾವ ತರಗತಿಗಳಿಗೆ ಯಾವ ಯಾವ ಪಾಠವನ್ನು ಕೈಬಿಟ್ಟಿದ್ದೀರಿ, ಮತ್ತು ಹೊಸದಾಗಿ ಯಾವ ಪಠ್ಯವನ್ನು ಸೇರಿಸಿದ್ದೀರಿ. ಯಾವ ಕಾರಣಕ್ಕೆ ಸೇರಿಸಿದ್ದೀರಿ ಎಂದು ಕೇಳಿದ್ದೆ. ಸರ್ಕಾರ ಲಿಖಿತ ಉತ್ತರ ನನಗೆ ನೀಡಿದೆ ಎಂದರು.

ಈ ಲಿಖಿತ ಉತ್ತರವನ್ನು ಮನನವಿಟ್ಟು ಓದಿದಾಗ ಇದು ಸಂಪೂರ್ಣ ರಾಜಕೀಯಪ್ರೇರಿತವಾಗಿದೆ ಮತ್ತು ದ್ವೇಷದ ರಾಜಕಾರಣ ಇದರಲ್ಲಿ ಅಡಗಿದೆ ಎಂದು ಸ್ಪಷ್ಟವಾಗಿ ಅನಿಸಿದೆ. 6ರಿಂದ 10ನೇ ತರಗತಿಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ 9 ಪಠ್ಯಗಳನ್ನು, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 9 ಪಠ್ಯಗಳನ್ನು ತಿದ್ದುಪಡಿ ಮಾಡಲಾಗಿದೆ. ಮುಖ್ಯವಾಗಿ ಚಕ್ರವರ್ತಿ ಸೂಲಿಬೆಲೆ, ಶತಾವಧಾನಿ ಗಣೇಶ್, ಡಾ. ಕೆ.ಬಿ. ಹೆಡ್ಗೆವಾರ್ ಅವರ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದರು.

ಚಕ್ರವರ್ತಿ ಸೂಲಿಬೆಲೆ ಅವರು ರಾಷ್ಟ್ರಪ್ರೇಮ ಕುರಿತಂತೆ ಬರೆದಿದ್ದರು. ಹೆಡ್ಗೆವಾರ್ ಅವರು ಅಮರಪುತ್ರರು ಎಂಬ ಪಠ್ಯವನ್ನು ಬರೆದಿದ್ದರು. ಶತಾವಧಾನಿ ಗಣೇಶ್ ಅವರು ಕೂಡ ದೇಶಪ್ರೇಮ ಕುರಿತು ಮಕ್ಕಳ ಮನಸ್ಸಿನ ಭಾವನೆಗಳನ್ನು ಕುರಿತು ಬರೆದಿದ್ದಾರೆ. ಆದರೆ ಸರ್ಕಾರ ಈ ಮೂವರ ಪಠ್ಯಗಳನ್ನು ಕೂಡ ಬದಲಾವಣೆ ಮಾಡಿ ಉರುಸಿನಲ್ಲಿ ಭಾವೈಕ್ಯತೆ, ನೆಹರು ಮಗಳಿಗೆ ಬರೆದ ಪತ್ರ, ಯುದ್ಧ ಮುಂತಾದ ಪಠ್ಯಗಳನ್ನು ಸೇರಿಸಿದ್ದಾರೆ. ಈ ಎಲ್ಲಾ ಪಠ್ಯಗಳು ತುಷ್ಟೀಕರಣದ ಪಾಠಗಳಾಗಿವೆ.

ಇವುಗಳನ್ನು ಬದಲಾವಣೆ ಮಾಡುವ ಮೂಲಕ ರಾಗ, ದ್ವೇಷ ಮೂಡಿಸಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಪಠ್ಯ ಬದಲಾವಣೆ ಮಾಡುವುದು ಕ್ಯಾಬಿನೆಟ್‌ನಲ್ಲಿ ಅಲ್ಲ. ಅದು ಬದಲಾವಣೆ ಆಗಬೇಕು ಎಂದರೆ ಶಿಕ್ಷಣ ತಜ್ಞರ ಸಮಿತಿ ರಚನೆಯಾಗಬೇಕು. ಆ ಸಮಿತಿಯಲ್ಲಿ ಯಾವ ಪಠ್ಯ ಬೇಕು, ಯಾವುದ ಬೇಡ ಎಂಬ ತೀರ್ಮಾನ ಆಗಬೇಕು. ನಂತರ ಪಠ್ಯ ಪುಸ್ತಕಗಳ ಬದಲಾವಣೆ ಆಗಬೇಕು. ಆದರೆ ಇದ್ಯಾವುದನ್ನೂ ಮಾಡದ ರಾಜ್ಯ ಸರ್ಕಾರ ಬದಲಾವಣೆ ಮಾಡುವ ಮೂಲಕ ಅಸಹಿಷ್ಣುತೆ ಮೂಡಿಸಿದೆ. ಕೂಡಲೇ ಮೊದಲಿದ್ದ ಪಠ್ಯವನ್ನೇ ಮಕ್ಕಳಿಗೆ ಬೋಧಿಸಬೇಕು ಎಂದು ಒತ್ತಾಯಿಸಿದರು.


ಮುಖ್ಯಮಂತ್ರಿಗಳ ಹತ್ತಿರ ಒಂದು ತಂಡವಿದೆ. ಅದು ಎಡಪಂಥೀಯ ತಂಡ. ಈ ತಂಡದ ಮಾತನ್ನು ಮುಖ್ಯಮಂತ್ರಿ ಕೇಳುತ್ತಾರೆ. ಸಾಹಿತಿಗಳ ಈ ಎಡಪಂಥೀಯ ತಂಡ ಶಿಕ್ಷಣ ತಜ್ಞರಲ್ಲ. ಅವರಿಗೆ ಶಿಕ್ಷಣದ ಬಗ್ಗೆ ಅರಿವೂ ಇಲ್ಲ. ಆದರೆ ಮುಖ್ಯಮಂತ್ರಿಗಳಿಗೆ ಸಲಹೆ ಕೊಡುವುದರಲ್ಲಿ, ಎಡಪಂಥೀಯ ಚಿಂತನೆಗಳನ್ನು ಮಕ್ಕಳಿಗೆ ಮೂಡಿಸುವಲ್ಲಿ ಕೆಲಸ ಮಾಡುತ್ತಾರೆ. ಇವರ ಮಾತನ್ನು ಕೇಳಿದ ಮುಖ್ಯಮಂತ್ರಿ ಮತ್ತು ಶಿಕ್ಷಣ ಮಂತ್ರಿ ಇಂತಹ ಅನಾರೋಗ್ಯದ ನಿರ್ಧಾರ ತೆಗೆದುಕೊಂಡು ಮಕ್ಕಳಿಗೆ ಅನ್ಯಾಯ ಮಾಡುತ್ತಾರೆ ಎಂದು ದೂರಿದರು.

ಹಾಗೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ತೆಗೆದುಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲಕ್ಷಾಂತರ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಖಾಸಗಿ ಶಾಲೆಗಳಷ್ಟೇ ಸರ್ಕಾರಿ ಶಾಲೆಗಳು ಕೂಡ ಬೆಳೆಯಬೇಕು ಎಂಬ ಹಲವು ಸದುದ್ದೇಶದಿಂದ ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ. ಆದರೆ ಸರ್ಕಾರ ಇದನ್ನು ತೆಗೆದು ಹಾಕುವತ್ತ ಕೆಲಸ ಮಾಡುತ್ತಿದೆ. ಈ ಬಗ್ಗೆ ನಾವು ಸುಮ್ಮನಿರುವುದಿಲ್ಲ ಜನಜಾಗೃತಿ ಮೂಡಿಸುತ್ತೇವೆ. ಜನರೇ ಇಂತಹ ವಿಷಯಗಳಿಗೆ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago