ಪೋಕ್ಸೋ ಕಾಯ್ದೆಯಡಿ ಒಮ್ಮೆ ಪ್ರಕರಣ ದಾಖಲಾದರೆ ಆರೋಪಿ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಹೊಂದಿದ್ದ ಎಂದೇ ಪರಿಗಣಿಸಲಾಗುತ್ತದೆ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

ಹೊಸನಗರ: ಪೋಕ್ಸೋ ಕಾಯ್ದೆಯಡಿ (Pocso Act) ಒಮ್ಮೆ ಪ್ರಕರಣ ದಾಖಲಾದರೆ ಆರೋಪಿ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಹೊಂದಿದ್ದ ಎಂದೇ ಪರಿಗಣಿಸಲಾಗುತ್ತದೆ ಎಂದು ಹೊಸನಗರ (Hosanagara) ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರು ಹೇಳಿದರು.

ಇಲ್ಲಿನ ಮಲೆನಾಡು ಪ್ರೌಢ ಶಾಲೆಯ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳುವಳಿಕೆಗಾಗಿ ಪೋಕ್ಸೋ ಮತ್ತು 112 ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಶಿಬಿರಾವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಮಾತನಾಡಿದರು.
ಪೋಕ್ಸೋ ಕಾಯ್ದೆ ಮಕ್ಕಳ ಸ್ನೇಹಿ ಪ್ರಕ್ರಿಯೆಗಳನ್ನು ಖಾತರಿಗೊಳಿಸುತ್ತೇವೆ ಮನೆಯಲ್ಲೇ ಮಕ್ಕಳು ದೌರ್ಜನ್ಯ ನಡೆದಿದ್ದರೇ ಸಂತ್ರಸ್ತ ಬಾಲಕ, ಬಾಲಕಿ ಸ್ಥಳಾಂತರಿಸಿ ಮಕ್ಕಳ ರಕ್ಷಣೆಯನ್ನು ಮಾಡಲಾಗುತ್ತದೆ. ಪೋಕ್ಸೋ ಕಾಯ್ದೆ 23ರ ಪ್ರಕಾರ ಸಂತ್ರಸ್ಥರ ಗುರುತನ್ನು ಬಿಟ್ಟುಕೊಡಬಾರದು. ಈ ಕಾಯ್ದೆ ಅನುಸಾರ ಸ್ಥಾಪಿತವಾದ ವಿಶೇಷ ಕೊರ್ಟ್ ಅನುಮತಿ ಇಲ್ಲದ ಹೊರತು ಸಂತ್ರಸ್ಥರ ಮಾಹಿತಿಯನ್ನು ಬಹಿರಂಗಿಸುವಂತಿಲ್ಲ. ಒಂದೊಮ್ಮೆ ಈ ಸೆಕ್ಷನ್ ಉಲ್ಲಂಘನೆಯಾದರೆ ಶಿಕ್ಷಾರ್ಹ ಅಪರಾಧ ವೆನಿಸುತ್ತದೆ. ಒಳ್ಳೆಯ ಕಾರಣಕ್ಕಾದರೂ ಮಾಹಿತಿ ಮಾಡಿದರೂ ಶಿಕ್ಷೆ ತಪ್ಪುವುದಿಲ್ಲ. ಮಾಧ್ಯಮಗಳು ಮಾತ್ರವಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ ಸೋರಿಕೆಯಾಗುವಂತಿಲ್ಲ ಎಂದರು.

ಪೋಕ್ಸೋ ಕಾಯ್ದೆ ಮಕ್ಕಳ ವಿಚಾರಣಾ ಪ್ರಕ್ರಿಯೆಗಳನ್ನು ಖಚಿತಪಡಿಸುತ್ತದೆ. ಸಂತ್ರಸ್ಥ ಮಕ್ಕಳನ್ನು ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಸಂಪರ್ಕಕ್ಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಮಗುವನ್ನು ರಾತ್ರಿ ವೇಳೆಯಲ್ಲಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಮಗು ಯಾರನ್ನೂ ನಂಬುತ್ತದೆಯೋ ಅಂತವರ ಸಮ್ಮುಖದಲ್ಲೇ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಮಗುವನ್ನು ಪದೇ-ಪದೇ ಪೊಲೀಸ್ ಠಾಣೆಗೆ ಕರೆಯಿಸಿಕೊಳ್ಳದೇ ಇರವುದು ಕಾನೂನಿನ ಅಡಿಯಲ್ಲಿ ಇರುತ್ತದೆ. ಮಗುವಿಗೆ ಪದೇ-ಪದೇ ಪ್ರಶ್ನೆ ಕೇಳದೇ ತನಿಖೆ ಕಾರ್ಯ ಆರಂಭಿಸುತ್ತೇವೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 35ರ ಅಡಿಯಲ್ಲಿ ಪ್ರಕರಣದ ವಿಚಾರಣೆಯನ್ನು ನಿರ್ದಿಷ್ಟ ಅವಧಿ ನಿಗದಿಪಡಿಸಲಾಗಿದ್ದು ಅಷ್ಟರ ಒಳಗೆ ತನಿಖೆ ಕಾರ್ಯ ಮುಗಿಸುತ್ತೇವೆ. ಅಷ್ಟೆ ಅಲ್ಲದೇ ಸುಮಾರು ಒಂದು ವರ್ಷದ ಒಳಗೆ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ಸತ್ಯವಾಗಿದ್ದರೇ ಶಿಕ್ಷಗೆ ಅರ್ಹರಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಸಹಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
112ರ ಬಗ್ಗೆ ಮಾಹಿತಿ ನೀಡಿ, ಎಲ್ಲಿಯಾದರೂ ಅಪರಾಧ ನಡೆಯುತ್ತಿದ್ದರೆ ಆಕಸ್ಮಾತಾಗಿ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದರೆ, ಅವಘಡ ಸಂಭವಿಸಿದರೆ ತಕ್ಷಣ 112ಗೆ ಕರೆ ಮಾಡಿ. ಈ ಕರೆಯು ಉಚಿತವಾಗಿದ್ದು 112 ಅಧಿಕಾರಿಗಳು ತಕ್ಷಣ ನಿಮ್ಮ ಕರೆಗೆ ಸ್ಪಂದಿಸಿ ನೀವು ತಿಳಿಸಿದ ಸ್ಥಳಕ್ಕೆ ಆಗಮಿಸುತ್ತಾರೆ. ಈ 112 ಕರೆ ಮಾಡುವುದರಿಂದ ದೊಡ್ಡ ಪ್ರಮಾಣದ ಅನಾಹುತ ತಡೆಯಲು ಈ 112 ಸಹಕಾರಿಯಾಗಿದೆ ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.

Malnad Times

Recent Posts

ಕಾದ ಕಾವಲಿಯಂತಾದ ಮಲೆನಾಡು, ಬಿಸಿಲಿನ ಜಳಕ್ಕೆ ಜನ ಸುಸ್ತೋ ಸುಸ್ತು

ಶಿವಮೊಗ್ಗ : ಮಲೆನಾಡೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕರ್ನಾಟಕ ಮಾತ್ರವಲ್ಲ ಅದರಿಂದಾಚೆಗೂ ಮಲೆನಾಡನ್ನು ಪ್ರೀತಿಸುವವರು, ಇರಲು ಇಚ್ಛಿಸುವವರು ಇದ್ದಾರೆ.…

2 hours ago

ಅಭಿವೃದ್ಧಿ ಮಾಡದೇ ಮತದಾರರಿಗೆ ಮುಖ ತೋರಿಸಲು ಆಗದೇ ಮೋದಿ ಹೆಸರಿನಲ್ಲಿ ಮತ ಕೇಳಲು ನಾಚಿಕೆಯಾಗಬೇಕು ; ಬಿ.ವೈ.ಆರ್. ವಿರುದ್ಧ ಹರಿಹಾಯ್ದ ಬೇಳೂರು

ರಿಪ್ಪನ್‌ಪೇಟೆ: ಕಳೆದ 10 ವರ್ಷಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದಿಂದ ಯಾವುದೇ ಅನುದಾನವನ್ನು ತರದೇ ಅಭಿವೃದ್ದಿಯನ್ನು ಮಾಡದೇ ನಿರ್ಲಕ್ಷ್ಯ ವಹಿಸಿರುವ…

5 hours ago

Arecanut Price | ಏಪ್ರಿಲ್ 29ರ ಶಿವಮೊಗ್ಗ ಮಾರುಕಟ್ಟೆಯ ಅಡಿಕೆ ರೇಟ್

ಶಿವಮೊಗ್ಗ : ಏ. 29 ಸೋಮವಾರ ನಡೆದ ಶಿವಮೊಗ್ಗ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ :ರಾಶಿ…

8 hours ago

ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು !

ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಕೃಷಿ ಹೊಂಡದಲ್ಲಿ ಮುಳುಗಿ ಸಾವು ! ಮೂಡಿಗೆರೆ : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ…

9 hours ago

ಸಿ.ಟಿ.ರವಿ ವಿರುದ್ಧ ಸುಳ್ಳು ಎಫ್‌ಐಆರ್ | ಸರ್ಕಾರದಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಯತ್ನ, ಖಂಡನೆ

ಚಿಕ್ಕಮಗಳೂರು: ಮಾಜಿ ಸಚಿವ ಡಾ.ಸಿ.ಟಿ.ರವಿ ವಿರುದ್ಧ ಸುಳ್ಳು ಮತ್ತು ಅಸಂಬದ್ಧವಾಗಿ ಎಫ್‌ಐಆರ್ ದಾಖಲಿಸುವ ಮೂಲಕ ವಿರೋಧ ಪಕ್ಷಗಳ ಮಾತನಾಡು ಹಕ್ಕು…

20 hours ago

ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಮಾಜಿ ಸಚಿವ ಸಿ.ಟಿ.ರವಿ ಸಂತಾಪ

ಚಿಕ್ಕಮಗಳೂರು: ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (77) ಅವರ ನಿಧನಕ್ಕೆ ಮಾಜಿ ಸಚಿವ ಡಾ.ಸಿ.ಟಿ.ರವಿ ಸೇರಿದಂತೆ ಜಿಲ್ಲಾ ಬಿಜೆಪಿ ಕಂಬನಿ…

20 hours ago