Categories: HosanagaraShivamogga

ಬಿ.ಸಿ ಟ್ರಸ್ಟ್ ಸಾವಿರಾರು ಕತ್ತಲೆ ತುಂಬಿದ ಕುಟುಂಬಗಳಿಗೆ ಬೆಳಕು ನೀಡಿದ ಸಂಸ್ಥೆ ; ಚಂದ್ರಶೇಖರ ಜೆ

ಹೊಸನಗರ: ಶಿವಮೊಗ್ಗ ಜಿಲ್ಲೆಗೆ 2007ರಲ್ಲಿ ಪಾದಾರ್ಪಣೆಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಲ್ಲಿಯವರೆಗೆ 2298 ಪ್ರಗತಿಬಂಧು ಹಾಗೂ 976 ಸ್ವ-ಸಹಾಯ ಸೇರಿದಂತೆ ಒಟ್ಟು 3285 ಸಂಘಗಳಿದ್ದು 21047 ಸದಸ್ಯರು ಸೇವೆ ಮಾಡುತ್ತಿದ್ದು ಸಾವಿರಾರು ಕತ್ತಲೆ ತುಂಬಿದ ಕುಟುಂಬಗಳಿಗೆ ಬೆಳಕನ್ನು ನೀಡಿದ ಸಂಸ್ಥೆಯಾಗಿದೆ ಎಂದು ಜಿಲ್ಲಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಿರಿಯ ನಿರ್ದೇಶಕ ಚಂದ್ರಶೇಖರ ಜೆ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ಮರುಪ್ರತಿಷ್ಠಾಪನೆ ಮಾಡುತ್ತಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದ 3 ಲಕ್ಷ ಮೊತ್ತದ ಡಿ.ಡಿಯನ್ನು ವಿತರಿಸಿ ಮಾತನಾಡಿ, ಧರ್ಮಸ್ಥಳ ಯೋಜನೆಯ ಪಾಲುದಾರ ಕುಟುಂಬಗಳಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಅವರಲ್ಲಿ ಉಳಿತಾಯ ಹಾಗೂ ಆರ್ಥಿಕ ವ್ಯವಹಾರದ ಶಿಸ್ತುನ್ನು ಮೂಡಿಸಲು ಯೋಜನೆಯು ತನ್ನ ಪ್ರಗತಿನಿಧಿ ಕಾರ್ಯಕ್ರಮದ ಸಹಾಯ ಹಸ್ತ ನೀಡುತ್ತದೆ. ವಲಯದ 3274 ಸಂಘಗಳು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸಂಘದ ಖಾತೆ ಹೊಂದಿರುತ್ತದೆ ಇದುವರೆಗೂ 14.42 ಕೋಟಿ ರೂ. ಮೊತ್ತ ಉಳಿತಾಯ ಮಾಡಿರುತ್ತೇವೆ.

ನಮ್ಮ ಸಂಘದ ಸದಸ್ಯರಲ್ಲಿ ಉಳಿತಾಯ ಮನೋಭಾವ ಮೂಡಿದ್ದು ಸದಸ್ಯರು ಆರ್ಥಿಕವಾಗಿ ಸದೃಢಗೊಳ್ಳಲು ಕರ್ನಾಟಕ ಬ್ಯಾಂಕ್ ಮೂಲಕ ಮೂಲ ಸೌಕರ್ಯಗಳಿಗೆ ಕೃಷಿ, ಸ್ವ-ಉದ್ಯೋಗ, ಶಿಕ್ಷಣ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಒತ್ತು ನೀಡಿ ವರದಿ ವರ್ಷದಲ್ಲಿ 59.07ಪರಿಶೋಧನೆಯಲ್ಲಿ 3,250 ಸಂಘಗಳು ಎಸ್, ಎ+,ಎ ಹಾಗೂ ಬಿ ಶ್ರೇಣಿ ಪಡೆದಿರುತ್ತದೆ ಎಂದರು.

ಪ್ರಗತಿ ರಕ್ಷಾ ಕವಚ:
ಈ ಯೋಜನೆಯಲ್ಲಿ ಸಾಲ ಪಡೆದ ಪ್ರತಿ ಸದಸ್ಯರು ಹಾಗೂ ವಿನಿಯೋಗದಾರರಿಗೆ ಪಡೆದ ಸಾಲಕ್ಕೆ ವಿಮಾ ವ್ಯವಸ್ಥೆ ಮಾಡಿಸಿದ್ದು 2022-23ನೇ ಸಾಲಿನಲ್ಲಿ 150 ಸದಸ್ಯರು ಮರಣ ಹೊಂದಿದ್ದು 1ಕೋಟಿ 73ಸಾವಿರ ಮೊತ್ತ ಕ್ಲೈಂ ನೀಡಿ ವಿನಿಯೋಗದಾರರಿಗೆ ಆರ್ಥಿಕ ಹೊರೆಯಾಗದಂತೆ ಸಂಪೂರ್ಣ ಸಾಲ ಚುಕ್ತಗೊಳಿಸಲಾಗಿದೆ.

ಮಾಸಾಶನ ಕಾರ್ಯಕ್ರಮ:
ಈ ಯೋಜನೆಯಿಂದ ಪ್ರತಿ ತಿಂಗಳು ಅಸಹಾಯಕರು ಹಾಗೂ ನಿರ್ಗತಿಕರು ಆಗಿರುವ ಕುಟುಂಬಗಳಿಗೆ ತಿಂಗಳಿಗೆ 750 ರೂಪಾಯಿಯಿಂದ 1ಸಾವಿರ ರೂಪಾಯಿವರೆಗೆ ಮಾಸಾಶನ ನೀಡುತ್ತಿದ್ದು ನಮ್ಮ ತಾಲ್ಲೂಕಿನಲ್ಲಿ 96 ಕುಟುಂಬಗಳಿಗೆ ಒಟ್ಟು ಈ ವರ್ಷ 78,500 ರೂ. ಮೊತ್ತದ ನಿರ್ಗತಿಕರ ಮಾಸಾಶನ ನೀಡುತ್ತಿದೆ.

ಜನಜಾಗೃತಿ ಕಾರ್ಯಕ್ರಮ:
ದುಶ್ಚಟ ಮುಕ್ತ ಸಮಾಜವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಪೂಜ್ಯರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿಯು ಒಂದಾಗಿದ್ದು ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ನಿಟ್ಟೂರು ಶ್ರೀ ರಾಮೇಶ್ವರ ಸಭಾಭವನದಲ್ಲಿ 1672ನೇ ಮದ್ಯವರ್ಜನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಒಟ್ಟು 64 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ ತಂಬಾಕು ಮುಕ್ತ ಸಮಾಜ ನಿರ್ಮಾಣ ಹಾಗೂ ಸ್ವಾಸ್ಥ್ಯ ಸಂಕಲ್ಪದಡಿಯಲ್ಲಿ 9 ಶಾಲಾ ಕಾಲೇಜ್‌ಗಳಲ್ಲಿ ಒಟ್ಟು 1085 ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಇದುವರೆಗೆ ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 10 ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಸಮುದಾಯ ಅಭಿವೃದ್ಧಿ ಯೋಜನೆ:
ಈ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 2021ರಿಂದ 2023ರವರೆಗೆ 27 ದೇವಸ್ಥಾನಗಳ ಜೀಣೋದ್ದಾರ ಕಾರ್ಯಕ್ಕೆ 40.90 ಲಕ್ಷ ಮೊತ್ತದ ಡಿ.ಡಿಯನ್ನು ವಿತರಣೆ ಮಾಡಿ ಒಂದು ದಾಖಲೆಯನ್ನು ನಮ್ಮ ಸಂಸ್ಥೆ ನಿರ್ಮಿಸಿದೆ ಹೊಸನಗರ ತಾಲ್ಲೂಕಿನಲ್ಲಿ 16 ಶಾಲೆಗಳಿಗೆ 100 ಬೆಂಚು ಡೆಸ್ಕ್ ವಿತರಿಸಲಾಗಿದೆ ತಾಲ್ಲೂಕಿನ ಪ್ರಗತಿಬಂಧು ಮತ್ತು ಸ್ವ-ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ 85 ವಿದ್ಯಾರ್ಥಿಗಳಿಗೆ ಒಟ್ಟು 20 ಲಕ್ಷದ 50ಸಾವಿರ ಮೊತ್ತದ ಸುಜ್ಞಾನ ನಿಧಿ ಶಿಷ್ಯವೇತನ ನೀಡಲಾಗಿದೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ 47 ಮಂದಿಗೆ ಆಶಕ್ತರಿಗೆ ವೀಲ್ ಚೇರ್ ವಾಟರ್ ಬೆಡ್ ಹಾಗೂ ಇತರೆ ಸಲಕರಣೆಗಳನ್ನು ವಿತರಿಸಲಾಗಿದೆ‌.

ಕೆರೆ ಅಭಿವೃದ್ಧಿ ಕಾಮಗಾರಿ:
ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಸಾರ್ವಜನಿಕರು ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವಂತೆ ಹೊಸನಗರ ವ್ಯಾಪ್ತಿಯಲ್ಲಿ ಒಟ್ಟು 4 ಕೆರೆಗಳ ಹೂಳು ತೆಗೆದು ಕೆರೆ ಹಸ್ತಾಂತರ ಮಾಡಲಾಗಿದೆ.

ಹಸಿರು ಇಂಧನ ಕಾರ್ಯಕ್ರಮ:
ಸೆಲ್ಕೋ ಸೋಲಾರ್ 182 ಕುಟುಂಬಗಳಿಗೆ ಹಾಗೂ ಗ್ರಿನ್ ವೇ 140 ಕುಟುಂಬಗಳಿಗೆ ನೀಡಲಾಗಿದೆ.

ಕೃಷಿ ಕಾರ್ಯಕ್ರಮ:
ರೈತರ ಕೃಷಿ ಚಟುವಟಿಕೆ ಹಾಗೂ ಸ್ವ- ಉದ್ಯೋಗಗಳಿಗೆ ಕೃಷಿ ಅಧ್ಯಯನ ಪ್ರವಾಸ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಧ್ಯಯನ ಪ್ರವಾಸಗಳಿಗೆ ಹಾಗೂ ಪ್ರಸ್ತುತ ವರ್ಷ 88 ಕುಟುಂಬಗಳಿಗೆ 1,93,500 ಮೊತ್ತ ನೀಡಲಾಗಿದೆ.

ಶ್ರದ್ಧಾ ಕೇಂದ್ರ ಕಾರ್ಯಕ್ರಮ:
ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಪ್ರತಿ ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ವರ್ಷ ತಾಲ್ಲೂಕಿನಲ್ಲಿ ಒಟ್ಟು 82 ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗಿದೆ.

ಸಿ.ಎಸ್.ಸಿ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 700 ಸರ್ಕಾರಿ ಸೇವೆಗಳ ಪೈಕಿ ಸುಮಾರು 30 ಸೇವೆಗಳನ್ನು ಸಿಎಸ್‌ಸಿ ಕೇಂದ್ರದಲ್ಲಿ ಅನುಷ್ಠಾನಿಸಿದ್ದು ಈಗಾಗಲೇ ತಾಲ್ಲೂಕಿನಲ್ಲಿ 45 ಸಿಎಸ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು 6314 ಆಯುಷ್ಮಾನ್ ಕಾರ್ಡ್ 3461 ಪಾನ್ ಕಾರ್ಡ್ 3188 ಇ-ಶ್ರಮ್ ಕಾರ್ಡ್ ಹಾಗೂ ಇತರೆ ಒಟ್ಟು 18,256 ಸೇವೆಗಳನ್ನು ನೀಡಲಾಗಿದೆ ಪ್ರಧಾನಮಂತ್ರಿ ಡಿಜಿಟಲ್ ಸಾಕ್ಷರತಾ ಯೋಜನೆಯಲ್ಲಿ ಒಟ್ಟು 9874 ಜನ ನೊಂದಾಯಿಸಿದ್ದು 5243 ಜನ ಉತ್ತೀರ್ಣರಾಗಿದ್ದಾರೆ ನಾವು ಸುಮಾರು 17 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿ ನಿರಂತರ ಸೇವ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಯೋಜನಾಧಿಕಾರಿ ಬೇಬಿ ಕೆ, ಜಿಲ್ಲಾ ಜನಜಾಗೃತಿ ಸಂಘದ ಸಂಚಾಲಕ ಎನ್ ಆರ್ ದೇವಾನಂದ್, ತಾಲ್ಲೂಕು ಪ್ರತಿನಿಧಿ ಸುಹಾಸ್, ಶಶಿಕಲಾ, ವೀರಾಂಜನೇಯ ದೇವಸ್ತಾನ ಕಮಿಟಿಯ ಅಧ್ಯಕ್ಷ ಮಹೇಶ್, ಶ್ರೀನಂದಿ ಸಂತೋಷ, ವಿನಾಯಕ, ರಾಘವೇಂದ್ರ, ವಿನಯ್ ಕುಮಾರ್, ಗೌತಮ್, ಯಶೋಧಮ್ಮ, ಕುಸುಮಾ ಇನ್ನೂ ಮುಂತಾದವರು ಚೆಕ್ ವಿತರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

3 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

3 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

3 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

4 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

4 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago