ಮಂಗನ ಕಾಯಿಲೆಗೆ ಯುವತಿ ಬಲಿ ! ರಾಜ್ಯದಲ್ಲೇ ಈ ವರ್ಷದ ಮೊದಲ ಪ್ರಕರಣ

ಹೊಸನಗರ : ಮಂಗನ ಕಾಯಿಲೆ (ಕೆಎಫ್‌ಡಿ) ಯುವತಿಯನ್ನು ಬಲಿ ಪಡೆದಿದ್ದು ರಾಜ್ಯದಲ್ಲೇ ಈ ವರ್ಷದ ಮೊದಲ ಪ್ರಕರಣ ಇದಾಗಿದೆ. ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬಪ್ಪನಮನೆ ಗ್ರಾಮದ ಅನನ್ಯ (18) ಕೆಎಫ್‌ಡಿಗೆ ಬಲಿಯಾದ ಯುವತಿ. ಈಕೆ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ನಗರ, ಹೊಸನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣಗೊಂಡಿದ್ದರಿಂದ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಮೂರು ದಿನಗಳ ಕಾಲ ಮೆಗ್ಗಾನ್ … Continue reading ಮಂಗನ ಕಾಯಿಲೆಗೆ ಯುವತಿ ಬಲಿ ! ರಾಜ್ಯದಲ್ಲೇ ಈ ವರ್ಷದ ಮೊದಲ ಪ್ರಕರಣ