Categories: Shivamogga

ಮಹಿಳಾ ಮೀಸಲಾತಿ ಮಸೂದೆ | ಇದು ಐತಿಹಾಸಿಕ ತೀರ್ಮಾನ ; ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಪ್ರಧಾನಿ ಮೋದಿಯವರ ವಿಶೇಷ ಕಾಳಜಿಯಿಂದಾಗಿ ಮಹಿಳಾ ಮೀಸಲಾತಿ ಯೋಜನೆ ಮಸೂದೆ ಲೋಕಸಭೆಯಲ್ಲಿ ಮಂಡಿಸಿ ಅದರಲ್ಲಿ ಜಯ ಸಾಧಿಸಿದ್ದಾರೆ. ಇದು ಐತಿಹಾಸಿಕ ತೀರ್ಮಾನ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.


ಅವರು ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಹಲವು ಬಾರಿ ಮಂಡಿಸಲಾಗಿತ್ತು. ಆದರೆ ಆಗಿರಲಿಲ್ಲ. ಪ್ರಧಾನಿ ಮೋದಿಯವರ ಮೊದಲ ಪ್ರಯತ್ನದಲ್ಲಿಯೇ ಇದು ಯಶಸ್ವಿಯಾಗಿದೆ. ಮಹಿಳೆಯರಿಗೆ ಆಡಳಿತ ಸ್ಥಾನ ಕೊಟ್ಟ ಮೋದಿಯವರು ವಿಶ್ವದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.


ಇದರಿಂದಾಗಿ ಲೋಕಸಭೆಯಲ್ಲಿ 78 ಮಹಿಳೆಯರ ಬದಲಾಗಿ ಈಗ 188 ಮಹಿಳೆಯರು ಬರುತ್ತಾರೆ. ಈ ಮಸೂದೆ ಜಾರಿಯಾಗಲು ವಿರೋಧ ಪಕ್ಷಗಳು ಕೂಡ ಪಕ್ಷಭೇದ ಮರೆತು ಬೆಂಬಲ ನೀಡಿವೆ. ಇದು ಕೂಡ ಸ್ವಾಗತ. ದೇಶದಲ್ಲಿ ಒಂದು ಸಂಭ್ರಮ ಇದೆ. ಇದೊಂದು ಇತಿಹಾಸವೇ ಆಗಿದೆ. ಕಳೆದ ಒಂಭತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಚಂದ್ರಯಾನ, 370 ಕಾಯ್ದೆ ಜಾರಿ, ರಾಮಮಂದಿರ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.


ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಆಡಳಿತ ಪಕ್ಷ ಅದನ್ನು ಮರೆತು ಮಲಗಿದೆ.ಕೇಂದ್ರ ಸರ್ಕಾರಕ್ಕೆ ನೆರವು ಕೇಳಲು ಕೆಲವು ಅಗತ್ಯ ದಾಖಲೆಗಳು ಬೇಕಾಗುತ್ತದೆ. ಅದರ ಪ್ರಕಾರ ಸರ್ವೆಯಾಗಬೇಕು.  ರಾಜ್ಯ ಸರ್ಕಾರದಲ್ಲಿ ಯಾವುದೇ ಮಾಹಿತಿ ಇಲ್ಲ. ಜಿಲ್ಲಾ ಮಂತ್ರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ರೈತರ ಕಷ್ಟ ಕೇಳುತ್ತಿಲ್ಲ. ಆಂತರಿಕ ಗೊಂದಲಗಳಲ್ಲಿ ಸರ್ಕಾರವಿದೆ ಎಂದು ಟೀಕಿಸಿದರು.


ಒಂದು ತಿಂಗಳೊಳಗೆ ಇಡೀ ರಾಜ್ಯದ ವಿವರಗಳನ್ನು ಪಡೆಯಬೇಕು. ಮಳೆ ಇಲ್ಲದೆ ಬೆಳೆ ಎಷ್ಟು ನಷ್ಟವಾಗಿದೆ. ರೈತರ ಆತ್ಮಹತ್ಯೆಗಳೆಷ್ಟು, ಪರಿಹಾರವೇನು ಮುಂತಾದ ವಿವರಗಳೊಂದಿಗೆ ಸರ್ವ ಪಕ್ಷ ನಿಯೋಗಗಳ ಜೊತೆ ಪ್ರಧಾನಿಗಳ ಬಳಿ ಹೋಗೋಣ ನೆರವು ಕೇಳೋಣ. ನಾವೂ ಜೊತೆಗಿರುತ್ತೇವೆ. ಅದನ್ನು ಬಿಟ್ಟು ರೈತರ ಕಷ್ಟಗಳಿಗೆ ಸ್ಪಂದಿಸದೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ತರವಲ್ಲ ಎಂದರು.
ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿ.ಕೆ. ಶಿವಕುಮಾರ್ ಒಬ್ಬ ನೀರು ಕಳ್ಳ. ರಾಜ್ಯದ ಜನತೆಗೆ ಗೊತ್ತಿಲ್ಲದಂತೆ ತಮಿಳುನಾಡಿಗೆ ನೀರುಹರಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ನಾಡಿನ ಜೊತೆ ರಾಜಿಯಾಗಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ. ಡಿಸಿಎಂ ಆಗಲು ಅವರು ಅಯೋಗ್ಯ ಎಂದು ಛೇಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಸಿದ್ದರಾಮಯ್ಯ ಇಬ್ಬರೂ ಭ್ರಷ್ಟಾಚಾರಿಗಳಾಗಿದ್ದಾರೆ. ಚುನಾವಣೆ ಸಮಯದಲ್ಲಿ ವರುಣ ಕ್ಷೇತ್ರದಲ್ಲಿ ಕುಕ್ಕರ್ ಇಸ್ತ್ರಿ ಪೆಟ್ಟಿಗೆ ಹಂಚಿದ್ದು ರಹಸ್ಯವಾಗಿ ಉಳಿದಿಲ್ಲ. ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಿ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕಾಗಿದೆ ಎಂದರು.


ಶೇ.40 ಕಮಿಷನ್ ವಿಷಯಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು ಸಿದ್ದರಾಮಯ್ಯ ಮತ್ತು ಅವರ ಸಚಿವರು, ಅವರ ಪುತ್ರ ಇದರಲ್ಲಿ ಭಾಗಿಯಾಗಿಲ್ಲವೇ. ವರ್ಗಾವಣೆ ದಂಧೆಯಲ್ಲಿ ಪಾಲುದಾರರಲ್ಲವೇ. ನನ್ನ ಮೇಲೆ ಆರೋಪ ಬಂದಾಗಿ ನಾನೇ ಖುದ್ದಾಗಿ ರಾಜೀನಾಮೆ ಕೊಟ್ಟು ಹೊರಬಂದಿದ್ದೆ. ಹೈಕೋರ್ಟ್ ನನಗೆ ಕ್ಲೀನ್ ಚಿಟ್ ನೀಡಿದೆ. ಹಾಗೆಯೇ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ ಮತ್ತು ಶೇ.40ರ ಕಮಿಷನ್ ಆರೋಪದಡಿಯಲ್ಲಿ ಒಬ್ಬ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರನ್ನು ನೇಮಕ ಮಾಡಲಿ. ತನಿಖೆಯಾಗಲಿ, ತನಿಖಾಧಿಕಾರಿಗಳ ಮುಂದೆ ಹಣ ಕೊಟ್ಟ ಐಎಎಸ್ ಅಧಿಕಾರಿಗಳನ್ನು ನಾನೇ ಹಾಜರುಪಡಿಸುತ್ತೇನೆ ಎಂದು ಸವಾಲೆಸೆದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಜ್ಯೋತಿ ಪ್ರಕಾಶ್, ಶಿವರಾಜ್, ಜಗದೀಶ್, ಸುನೀತಾ ಅಣ್ಣಪ್ಪ ಮತ್ತಿತರರು ಇದ್ದರು.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

7 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

10 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

11 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

16 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

17 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago