ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಶಿವಮೊಗ್ಗಕ್ಕೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ರೈಲು ವ್ಯವಸ್ಥೆ

0 37

ಶಿವಮೊಗ್ಗ : ಶಿವಮೊಗ್ಗಕ್ಕೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಎಂಜಿನ್ ರೈಲಿನ ವ್ಯವಸ್ಥೆ ಕಲ್ಪಿಸಿ ರೈಲ್ವೆ ಇಲಾಖೆಯಿಂದ ಆದೇಶ ಹೊರಡಿಸಿದ್ದು ಶಿವಮೊಗ್ಗ ಜನಶತಾಬ್ದಿ ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ಜನಶತಾಬ್ದಿ ಸೇರಿದಂತೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎರಡು ರೈಲುಗಳ ಎಂಜಿನ್ ಪರಿವರ್ತನೆಗೊಂಡಿದ್ದು ಈವರೆಗೂ ಇವೆರಡೂ ರೈಲುಗಳಿಗೆ ಡಿಸೇಲ್ ಎಂಜಿನ್ ಬಳಕೆಯಾಗುತ್ತಿತ್ತು. ಜೂ. 17ರಿಂದ ಈ ರೈಲುಗಳು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಚಲಿಸಲಿವೆ.

ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ ರೈಲಿಗೆ ಈತನಕ ಡಿಸೇಲ್ ಎಂಜಿನ್ ಇತ್ತು. ಇನ್ಮುಂದೆ ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತನೆಯಾಗಲಿದೆ. ಜೂ.17ರಂದು ಬೆಂಗಳೂರಿನಿಂದ ಹೊರಡುವ ರೈಲು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಶಿವಮೊಗ್ಗಕ್ಕೆ ಬರಲಿದೆ. ಜೂ.18ರಂದು ಶಿವಮೊಗ್ಗದಿಂದ ಹೊರಡುವಾಗ ಎಲೆಕ್ಟಿಕ್ ಎಂಜಿನ್ ಹೊಂದಿರಲಿದೆ.

ಇನ್ನು ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಕೂಡ ಪರಿವರ್ತಿಸಲಾಗುತ್ತಿದೆ. ಜೂ.17ರಂದು ಯಶವಂತಪುರದಿಂದ ಹೊರಡುವ ರೈಲಿಗೆ ಎಲೆಕ್ಟ್ರಿಕ್ ಎಂಜಿನ್ ಅಳವಡಿಸಲಾಗುತ್ತದೆ. ಮಧ್ಯಾಹ್ನ ಶಿವಮೊಗ್ಗಕ್ಕೆ ಬರುವ ರೈಲು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಶಿವಮೊಗ್ಗದಿಂದ ತೆರಳಲಿದೆ. ಎಲೆಕ್ಟ್ರಿಕ್ ಎಂಜಿನ್‌ಗಳು ಕಡಿಮೆ ಶಬ್ದ ಮಾಲಿನ್ಯ ರಹಿತವಾಗಿರುತ್ತವೆ. ಇವುಗಳ ವೇಗವು ಹೆಚ್ಚಿರುತ್ತದೆ. ಮುಂದೆ ಇವೆರಡು ರೈಲುಗಳ ವೇಗ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಶಿವಮೊಗ್ಗ – ಬೆಂಗಳೂರು ನಡುವಿನ ಸಮಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

Leave A Reply

Your email address will not be published.

error: Content is protected !!