ವಿಕಲಚೇತನತೆ ಶಾಪವಲ್ಲ ; ಬಿಇಒ ಕೃಷ್ಣಮೂರ್ತಿ

ಹೊಸನಗರ: ವಿಕಲಚೇತನ ಮಕ್ಕಳಿಗೆ ದೇವರ ಕೊಡುಗೆ ಅಪಾರವಾಗಿದೆ. ನಮಗಿಂತ ಹತ್ತು ಪಟ್ಟು ಬುದ್ಧಿಶಕ್ತಿ ಅವರಲ್ಲಿದೆ. ವಿಕಲಚೇತನ ಮಕ್ಕಳ ಪೋಷಕರಿಗೆ ತಾಳ್ಮೆ ಜೊತೆಗೆ ದೇವರ ಕರುಣೆ ಇದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ (Hosanagara BEO) ಹೆಚ್.ಆರ್. ಕೃಷ್ಣಮೂರ್ತಿಯವರು ಹೇಳಿದರು.

ಹೊಸನಗರದ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಯ ಆವರಣದಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ವಿ.ಐ ಎಸ್.ಎಲ್ ಸಂಸ್ಥೆ ಭದ್ರಾವತಿ ಇವರ ವತಿಯಿಂದ ವಿಕಲಚೇತನ ಮಕ್ಕಳಿಗೆ ವಿಶೇಷ ಸಾಧನ-ಸಲಕರಣೆಗಳ 22 ವಿಕಲಚೇತನ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದರು.

ದೇವರು ಕೊಡುಗೆಯ ರೂಪದಲ್ಲಿ ವಿಕಲಚೇತನರನ್ನು ನಿಮಗೆ ಮಕ್ಕಳಾಗಿ ಧಾರೆ ಎರೆದಿದ್ದಾರೆ. ಇದು ಶಾಪ ಎಂದು ತಿಳಿದುಕೊಳ್ಳುವುದು ತಪ್ಪು. ಇಡೀ ವಿಶ್ವದಲ್ಲಿ ವಿಕಲಚೇತನ ಮಕ್ಕಳಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ವಿಕಲಚೇತನ ಮಗು ಹುಟ್ಟಿದೆ ಎಂದು ಯಾವ ಪೋಷಕರು ಇಂದಿನ ಯುಗದಲ್ಲಿ ಚಿಂತಿಸುವ ಹಾಗಿಲ್ಲ. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಹಸ್ತ ನೀಡುತ್ತಿದೆ ಆದರೆ ಪೋಷಕರ ತಾಳ್ಮೆಗೆ ಇಡೀ ಜಗತ್ತೆ ಮೆಚ್ಚಬೇಕಾಗಿದೆ ಇವರು ನೀಡಿರುವ ಕಿಟ್ ಪಡೆದು ವಿಕಲ ಚೇತನರಿಗೆ ಉಪಯೋಗವಾಗುವಂತಹ ಕಿಟ್ ಆಗಿದ್ದು ಇದನ್ನು ಎಲ್ಲ ವಿಕಲಚೇತನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.

ಭದ್ರಾವತಿ ಕಬ್ಬಿಣ ಕಾಖಾನೆಯ ಜನರಲ್ ಮ್ಯಾನೆಂಜರ್ ಪ್ರವೀಣ್‌ಕುಮಾರ್‌ರವರು ಈ ಸಂದರ್ಭದಲ್ಲಿ ಮಾತನಾಡಿ, ಈ ಮಕ್ಕಳಿಗೆ ವಿಕಲಚೇತನ ಮಕ್ಕಳು ಎಂದು ಕರೆಯುವುದು ತಪ್ಪು. ಇವರನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯೋಣ ಏಕೆಂದರೆ ನಮಗಿಂತ ಹತ್ತು ಪಟ್ಟು ಜ್ಞಾನವುಳ್ಳವರಾಗಿದ್ದು ಅವರು ಯಾವುದದಾರೂ ಒಂದು ವಿಷಯದಲ್ಲಿ ಈ ಜಗತ್ತಿಗೆ ಸಾಧನೆ ಮಾಡುವವರು‌ ಇವರನ್ನು ನಾವೇ ವಿಕಲಚೇತನ ಮಕ್ಕಳು ಎಂದು ಕರೆದರೆ ಇವರ ಜ್ಞಾನ ಶಕ್ತಿ ಕುಂಠಿತಗೊಳಿಸಿದಂತೆ ಆದ್ದರಿಂದ ವಿಶೇಷ ಚೇತನ ಮಕ್ಕಳು ಎಂದು ಕರೆಯಬೇಕು ಹಾಗೂ ಈ ವಿಶೇಷ ಚೇತನ ಮಕ್ಕಳ ಜೊತೆಗಿರುವ ಪೋಷಕರಿಗೆ ನನ್ನ ಅನಂತ ವಂದನೆಗಳು, ನಾವು ನೀಡಿರುವ ಕಿಟ್‌ಗಳು ವಿಶೇಷ ಚೇತನ ಮಕ್ಕಳಿಗೆ ಬಹಳ ಅನುಕೂಲಕರವಾದ ಕಿಟ್ ಆಗಿದ್ದು ಈ ಕಿಟ್‌ನಲ್ಲಿರುವ ಸಾಮಗ್ರಿಗಳು ಚೇತನ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಿದ್ದು ಈ ಕಿಟ್ ಉಪಯೋಗಿಸುವುದರಿಂದ ಮುಂದಿನ ದಿನದಲ್ಲಿ ವಿಶೇಷ ಚೇತನ ಮಕ್ಕಳು ನಮ್ಮ ನಿಮಂತೆ ಆದರೂ ಆಗಬಹುದು ಇಂಥಹ ವಿಶೇಷ ಚೇತನ ಮಕ್ಕಳಿಗೆ ನಾವು ನೀಡುತ್ತಿರುವ ಕಿಟ್ ಅಲ್ಪ ಪ್ರಮಾಣದಾದ್ದರೂ ಮುಂದಿನ ದಿನದಲ್ಲಿ ಪ್ರತಿ ತಾಲ್ಲೂಕುಗಳಲ್ಲಿ ವಿಶೇಷ ಚೇತನ ಮಕ್ಕಳ ಆರೋಗ್ಯ ದೃಷ್ಠಿಯಿಂದ ತಪಾಸಣೆ ಶಿಬಿರವನ್ನು ಏರ್ಪಡಿಸುತ್ತೇವೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಯಾರು ಅನುಕಂಪ ತೋರಿಸುವುದು ಬೇಡ. ಅವಕಾಶ ನೀಡಿ ಈ ದೇಶದ ಪ್ರಜೆಯನ್ನಾಗಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಇಸಿಒ ಕರಿಬಸಪ್ಪ, ಸಮನ್ವಯಾಧಿಕಾರಿ ರಂಗನಾಥ್, ಡಿವೈಪಿಎಸ್ ನಾಗರತ್ನ, ಎ.ಪಿ.ಸಿ.ಶ್ರೀಮತಿ, ಸಿಆರ್‌ಪಿ ಅರುಣ್ ಎಸ್, ಚಂದ್ರಕಾಂತ್, ಸಂತೋಷ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times

Recent Posts

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

1 hour ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

1 hour ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

2 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

2 hours ago

ಬಟಾಣಿಜಡ್ಡು ಗ್ರಾಮದಲ್ಲಿ ಭತ್ತದ ಬೆಳೆ ನಾಶಗೊಳಿಸಿದ ಕಾಡಾನೆಗಳು, ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…

4 hours ago

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

8 hours ago