ವೀರಶೈವ ಪತ್ತಿನ ಸಹಕಾರ ಸಂಘ ರೈತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದೆ ; ಮೂಲೆಗದ್ದೆ ಶ್ರೀಗಳು


ಹೊಸನಗರ: ಸುಮಾರು 18 ವರ್ಷಗಳಿಂದ ರೈತರ ಬದುಕಿಗಾಗಿ ದುಡಿಯುತ್ತಿರುವ ವೀರ ಶೈವ ಪತ್ತಿನ ಸಹಕಾರ ಸಂಘ ಯಾವುದೇ ಜಾತಿ ಮತ ಪಂಥವಿಲ್ಲದೇ ಪ್ರತಿಯೊಬ್ಬರನ್ನು ಸಮನವಾಗಿ ಸದಸ್ಯರನ್ನು ಕಾಣುತ್ತಿರುವ ಈ ಸಂಘ ರೈತರ ಬಡವರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.


ಹೊಸನಗರದ ಜೆಸಿಎಂ ರಸ್ತೆಯಲ್ಲಿ ಸುಮಾರು 80ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ವೀರಶೈವ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವೀರಶೈವ ಪತ್ತಿನ ಸಹಕಾರಿ ಸಂಘ ಎಲ್ಲ ಸಂಘಗಳಿಗಿಂತ ಭಿನ್ನವಾಗಿದ್ದು ಈ ಸಂಘದಲ್ಲಿ ಯಾವುದೇ ಜಾತಿ ಇರಲಿ ಅವರನ್ನು ಷೇರುದಾರರನ್ನಾಗಿ ಮಾಡಿಕೊಂಡು ಅವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸದಸ್ಯರ ಕುಟುಂಬದ ಏಳಿಗೆಗಾಗಿ ಶ್ರಮಿಸುತ್ತಿರುವುದರಿಂದ 18 ವರ್ಷದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗಿದೆ ಇದರ ಜೊತೆಗೆ ವೀರಶೈವ ಲಿಂಗಾಯಿತರು ಇತ್ತಿಚೀನ ದಿನದಲ್ಲಿ ಒಡೆಯುತ್ತಿದ್ದು ಅವರನ್ನು ಒಗ್ಗೂಡುವುದಕ್ಕೂ ಒಂದು ಸಂಘವಾಗಿ ಮಾರ್ಪಡುವಂತೆ ಮಾಡಿರುವುದು ಸಂತೋಷದಾಯಕ ವಿಷಯವಾಗಿದೆ. ಹೊಸನಗರದಲ್ಲಿರುವ ಎಲ್ಲ ಶ್ರೀಮಂತ ವರ್ಗ ಈ ಸಂಘಕ್ಕೆ ಡಿಪಾಸಟ್ ಮಾಡುವ ಮೂಲಕ ಸಂಘವನ್ನು ಬೆಳೆಸಲಿ ಈ ಸಂಘ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಬಂಧವರಿಗೆ ಹಾಗೂ ಇತರೆ ಜನಾಂಗದ ಷೇರುದಾರರಿಗೂ ಅನುಕೂಲವಾಗುವಂತೆ ಮಾಡಲಿ ಎಂದು ಹಾರೈಸಿದರು.


ವೀರಶೈವ ಪತ್ತಿನ ಸಹಕಾರಿ ಸಮಘದ ಅಧ್ಯಕ್ಷರಾದ ಹೆಚ್.ಪಿ ನಂಜುಂಡಪ್ಪನವರು ಮಾತನಾಡಿ, ಸಹಕಾರಿ ಸಂಘಗಳು ಟೆಂಟ್ ಇದ್ದಾ ಹಾಗೇ ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಟೆಂಟ್ ಕಿತ್ತುಕೊಂಡು ಹೋಗಬಹುದು ಆದರೆ ಸಹಕಾರಿ ಸಂಘಗಳಿಗೆ ತನ್ನದೇ ನೆಲೆಬೇಕು ಷೇರುದಾರರಿಗೆ ಸದಸ್ಯರಿಗೆ ತಾವು ಡಿಪಾಸಿಟ್ ಇಡಲು ನಂಬಿಕೆ ಬೇಕು ಹಾಗೂ ಸ್ವಂತ ಕಟ್ಟಡದಲ್ಲಿ ಸಂಘಗಳು ಸ್ತಾಪನೆಯಾದರೇ ಇನ್ನೂ ಹೆಚ್ಚು ಹೆಚ್ಚು ಷೇರುದಾರರು ಮತ್ತು ಸದಸ್ಯರು ಸಂಘದ ಮೇಲಿನ ನಂಬಿಕೆಯಿಂದ ಡಿಪಾಸಿಟ್ ಮಾಡುತ್ತಾರೆ ಇದರಿಂದ ಸಂಘವೂ ಬೆಳೆಯುತ್ತದೆ ಜೊತೆಗೆ ಸದಸ್ಯರ ಷೇರುದಾರರಿಗೂ ಅನುಕೂಲವಾಗುತ್ತದೆ ಎಂಬ ಕಾರಣದಿಂದ ನೂತನ ಕಟ್ಟಡವನ್ನು ನಿರ್ಮಿಸಿದ್ದೇವೆ ಈ ಕಟ್ಟಡ ನಿರ್ಮಿಸಲು ಸಹಕಾರಿ ಸದಸ್ಯರ ಪಾತ್ರ ಹಿರಿದಾಗಿದ್ದು ಅವರನ್ನು ಎಂದಿಗೂ ಮರೆಯುವ ಹಾಗಿಲ್ಲ 2006ರಂದು ಪ್ರಾರಂಭವಾದಾಗ 545 ಜನ ಸದಸ್ಯರಿದ್ದು ಅವರೆಲ್ಲರೂ ಕಷ್ಟದ ಕಾಲದಲ್ಲಿ 1000ರೂಪಾಯಿ ನೀಡಿದ್ದರು ಇಂದಿನ ವರೆವಿಗೆ ಡಿಪಾಸಂಟ್ ಲಾಭಂಶ ಪಡೆಯದೇ ಸಂಸ್ಥೆಯ ಉದ್ದಾರಕ್ಕಾಗಿ ಶ್ರಮಿಸಿದ್ದಾರೆ ಅವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದಿಸಿದರು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಹೆಚ್.ಪಿ. ಷಡಾಕ್ಷರಿ, ಮಾಜಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್ ಸುಧೀರ್, ಮಾಜಿ ನಿರ್ದೆಶಕರಾದ ಹೆಚ್. ನಾಗರಾಜ್ ಜಿಲ್ಲಾ ಸಹಕಾರಿ ಸಂಘಗಳ ಉಪ ನಿರ್ಭಧಕರಾದ ವಾಸುದೇವ, ಸಂಘದ ನಿರ್ದೇಶಕರಾದ ಬಿ,ಹೆಚ್. ಬಸಪ್ಪ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಹೆಚ್. ಮಲ್ಲಿಕ್, ರಾಜಪ್ಪ ಗೌಡ ಸಿದ್ಧವೀರಪ್ಪ, ಎಂ.ಎನ್ ಶೇಖರಪ್ಪ, ಮಾವಿನಕಟ್ಟೆ ಶಿವಾನಂದ ಈಶ್ವರಪ್ಪ ಗೌಡ, ಯೋಗೇಶ್ ಕುಮಾರ್, ಜ್ಯೋತಿ ಪ್ರಶಾಂತ್, ಮಮತಾ ಚಂದ್ರಶೇಕರ್, ಮಂಜಪ್ಪ, ಕಲ್ಯಾಣಪ್ಪ ಗೌಡ, ಜಬಗೋಡು ಹಾಲಪ್ಪ ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ ಜಯರಾಮ್, ವೀರಶೈವ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹನಾಧಿಕಾರಿ ಗೀತಾ ಗಿರೀಶ್, ಲೋಕೇಶ್, ದರ್ಶನ್ ಗೌಡ, ಅರ್ಪಿತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago