ವೃದ್ಧೆಯನ್ನು ಕೊಲೆಗೈದು ಹುಂಚ ಮುತ್ತಿನಕೆರೆಗೆ ಶವ ಎಸೆದಿದ್ದ ಹಂತಕರು ಅಂದರ್ !

ರಿಪ್ಪನ್‌ಪೇಟೆ : ವೃದ್ಧೆಯನ್ನು ಕೊಲೆಗೈದು ಹುಂಚದ ಮುತ್ತಿನಕೆರೆಗೆ ಶವ ಎಸೆದಿದ್ದ ಹಂತಕರನ್ನು ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಜಯಮ್ಮ (62) ಎಂಬುವವರನ್ನು ಕೋಡೂರು ನಿವಾಸಿ ಮಯೂರ ಕೆ. (24) ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಆಕೆಯ ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ವಿವರ :ಮಾ.18 ರಂದು ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. … Continue reading ವೃದ್ಧೆಯನ್ನು ಕೊಲೆಗೈದು ಹುಂಚ ಮುತ್ತಿನಕೆರೆಗೆ ಶವ ಎಸೆದಿದ್ದ ಹಂತಕರು ಅಂದರ್ !