ಶರಾವತಿ ಯೋಜನೆಯಿಂದ ಸಂತ್ರಸ್ತ ಕುಟುಂಬಗಳಿಗೆ 9 ಸಾವಿರ ಎಕರೆ ಅರಣ್ಯ ಭೂಮಿ ಮೀಸಲಿಡುವ ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ಸರ್ಕಾರ !

0 31

ಶಿವಮೊಗ್ಗ : ಶರಾವತಿ ಕಣಿವೆ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯಿಂದ ಹಾನಿಗೊಳಗಾದ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 1958 ರಿಂದ 1969 ರವರೆಗೆ ನೀಡಲಾದ ಒಟ್ಟು 9,129 ಎಕರೆ ಅರಣ್ಯ ಭೂಮಿಯನ್ನು ಮೀಸಲಿಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಸಚಿವಾಲಯ ತಿರಸ್ಕರಿಸಿದೆ. ಈ ಅರಣ್ಯ ಭೂಮಿಯು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಬರುತ್ತವೆ.

ಈ ಅರಣ್ಯ ಭೂಮಿಯ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಮ್ ವರದಿಯಲ್ಲಿ, 2000 ಮತ್ತು 2004 ರಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಲಾಗಿದ್ದು, ಇದರಲ್ಲಿ ಸಚಿವಾಲಯವು ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು, “ಮುಂದಿನ ಆದೇಶಗಳು ಬಾಕಿ ಉಳಿದಿವೆ, ಅರಣ್ಯಗಳು, ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಮೀಸಲಾತಿಯನ್ನು ರದ್ದುಗೊಳಿಸಲಾಗುವುದಿಲ್ಲ” ಎಂದು ತಿಳಿಸಲಾಗಿದೆ.

ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ) ಕಚೇರಿಗೆ, ಅರಣ್ಯ ಸಹಾಯಕ ಮಹಾನಿರೀಕ್ಷಕರಿಗೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF ಮತ್ತು CC) ಡಾ. ಧೀರಜ್ ಮಿತ್ತಲ್ ಅವರು ಬರೆದ ಪತ್ರದಲ್ಲಿ “ಸುಪ್ರೀಂ ಕೋರ್ಟ್‌ನ ದೃಷ್ಟಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.” ಎಂದು ಸೂಚನೆಯನ್ನು ನೀಡಲಾಗಿದೆ.

ಮಾರ್ಚ್ 23 ರಂದು, ಕರ್ನಾಟಕ ಸರ್ಕಾರವು 9,129.00 ಎಕರೆ ಅರಣ್ಯ ಭೂಮಿಯನ್ನು ಕಾಯ್ದಿರಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿಯೊಂದನ್ನು ಮಾಡಿತ್ತು.
ಪುನರ್ವಸತಿಗಾಗಿ ಈ ಹಿಂದೆ ಜಮೀನುಗಳನ್ನು ಬಿಡುಗಡೆ ಮಾಡಲಾಗಿದೆಯಾದರೂ ಈ ಜಮೀನುಗಳ ಕಾನೂನು ಸ್ಥಾನಮಾನವು ಇನ್ನೂ ಮೂಡಾ ಮೀಸಲು ಅರಣ್ಯವಾಗಿಯೇ ಉಳಿದಿದೆ. ನಂತರ ಮೀಸಲಾತಿಯನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದಲೇ ಇಲ್ಲಿ ತಿಳಿಸಕಾಗಿರುವ ಭೂಮಿಯ ಕಾನೂನು ಸ್ಥಾನಮಾನವು ‘ರಿಸರ್ವ್ಡ್ ಫಾರೆಸ್ಟ್’ ಆಗಿ ಉಳಿಯಿತು. ಆದ್ದರಿಂದಲೇ ಅಂತಹ ಪ್ರದೇಶಗಳಲ್ಲಿ ಪುನರ್ವಸತಿ ಪಡೆದಿರುವ ಮತ್ತು ಅಲ್ಲಿ ನೆಲೆಸಿರುವ ಜನರು ವಿವಿಧ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.

ಮಾರ್ಚ್ 4, 2021 ರಂದು ಕೋರ್ಟ್ ತನ್ನ ಆದೇಶದಲ್ಲಿ ರಾಜ್ಯ ಸರ್ಕಾರವು ಡಿನೋಟಿಫಿಕೇಶನ್‌ ಗೆ ಕೇಂದ್ರದ ಅನುಮತಿಯನ್ನು ಕೇಳದ ಕಾರಣ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು. ಅದಾದ ನಂತರ ಸರ್ಕಾರವು ಮೀಸಲಾತಿ ರದ್ದು ಅಧಿಸೂಚನೆಗಳನ್ನು ರದ್ದುಗೊಳಿಸಿತ್ತು.

ನ್ಯಾಯಾಲಯದ ಆದೇಶದಲ್ಲಿ, 1963 ರ ಸದರಿ ಕಾಯಿದೆಯ (ಕರ್ನಾಟಕ ಅರಣ್ಯ ಕಾಯಿದೆ) ಸೆಕ್ಷನ್ 28 ರ ಅಡಿಯಲ್ಲಿ ಅಧಿಕಾರವನ್ನು 1963 ರ ಸದರಿ ಕಾಯಿದೆಯ ಸೆಕ್ಷನ್ 2 ರ ಪ್ರಕಾರ ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆಯದೆ ಚಲಾಯಿಸಲಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 1980 ರ ಸದರಿ ಕಾಯಿದೆಯ ಸೆಕ್ಷನ್ 2 ರ ಅನುಸಾರವಾಗಿ ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆಯದೆಯೇ 1963 ರ ಸದರಿ ಕಾಯಿದೆಯ ಸೆಕ್ಷನ್ 28 ರ ಅಡಿಯಲ್ಲಿ ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಲು ಉದ್ದೇಶಿಸಿದ್ದರೂ ಸಹಾ, ಅಂತಹ ಅಧಿಸೂಚನೆಯು ಅಕ್ರಮ ಎಂದು ಹೇಳಿದೆ.

ಶರಾವತಿ ಕಣಿವೆಯ ಜಲವಿದ್ಯುತ್ ಯೋಜನೆಯ ಬಗ್ಗೆ ಹೇಳುವುದಾದರೆ ಈ ಯೋಜನೆಯು 1964 ರಲ್ಲಿ ಕಾರ್ಯಾರಂಭ ಮಾಡಿತ್ತು ಮತ್ತು 1977 ರಲ್ಲಿ ಕೊನೆಗೊಂಡಿತು. ಈ ಯೋಜನೆಯು ಸಾವಿರಾರು ಕುಟುಂಬಗಳ ಸ್ಥಳಾಂತರಕ್ಕೆ ಕಾರಣವಾಯಿತು.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌

Leave A Reply

Your email address will not be published.

error: Content is protected !!