ಶಾಂತಿ, ನೆಮ್ಮದಿಗಾಗಿ ಆಯನೂರು ಮಂಜುನಾಥ್ ರವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿ

0 43

ಶಿವಮೊಗ್ಗ : ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜನ ನೆಮ್ಮದಿಯಿಂದ ಶಾಂತವಾಗಿರಲು, ಜನತೆ ಶಾಂತಿಯಿಂದ ಕರ್ತವ್ಯ ನಿರ್ವಹಿಸುವಂತಹ ಮನೋಭಾವನೆ ಮೂಡುವ ಉದ್ದೇಶದಿಂದ ಈ ಬಾರಿ ಆಯನೂರು ಮಂಜುನಾಥ್ ರವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಶಾಸಕಾಂಗ ವ್ಯವಸ್ಥೆಯ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಧಾನ ಪರಿಷತ್ ಶಾಸಕರಾಗಿರುವ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರದ ಜನತೆ ಮತ ನೀಡುವ ಮೂಲಕ ಶಾಂತಿಯ ಶಿವಮೊಗ್ಗ ನಗರ ನಿರ್ಮಿಸಬೇಕಾಗಿದೆ ಎಂದರು.

ನಗರದಲ್ಲಿ ನಡೆದ ಗಲಭೆಗಳಲ್ಲಿ ಅಲ್ಪಸಂಖ್ಯಾತರಿಗೆ ಅತಿ ಹೆಚ್ಚಾಗಿ ಅಭದ್ರತೆ ಕಾಡಿತ್ತು ಮತ್ತೆ ಅದೇ ಪರಿಸ್ಥಿತಿ ಮರುಕಳಿಸಬಾರದು ಎಂದರೇ ಅಲ್ಪಸಂಖ್ಯಾತರ ಮತಗಳು ಧ್ರುವೀಕರಣ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಆಯನೂರು ಮಂಜುನಾಥ್ ತನ್ನ ರಾಜಕೀಯ ಜೀವನದ ಆರಂಭದಿಂದಲೂ ಅಲ್ಪಸಂಖ್ಯಾತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಹಾಗೇಯೆ ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರವರು ಅಲ್ಪಸಂಖ್ಯಾತರ ಮೇಲೆ ವಿಶೇಷ ಕಾಳಜಿ ಹೊಂದಿದ್ದು ಅವರ ಕೈ ಬಲಪಡೆಇಸುವ ಕೆಲಸ ಮಾಡಬೇಕಾಗಿದೆ ಎಂದರು.

25 ವರ್ಷಗಳ ಹಿಂದೆ ಬಿಜೆಪಿ ಪಕ್ಷದಿಂದ ಹೊಸನಗರ ತಾಲೂಕಿನ ಶಾಸಕರಾಗಿದ್ದ ಆಯನೂರು ಮಂಜುನಾಥ್ ರಿಪ್ಪನ್‌ಪೇಟೆ ಪಟ್ಟಣದ ಅಲ್ಪಸಂಖ್ಯಾತ ಬಂಧಗಳಿಗೆ ಅಗತ್ಯವಾಗಿ ಬೇಕಾಗಿದ್ದ ಮದರಸ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿದ್ದ ಅನುದಾನ ನೀಡಿ ಮುಸ್ಲಿಂ ಮಕ್ಕಳ ಧಾರ್ಮಿಕ ಕಲಿಕೆಗೆ ನೆರವಾಗಿದ್ದರು.ತಮ್ಮ ಐದು ವರ್ಷಗಳ ಶಾಸಕ ಸ್ಥಾನದ ಅವಧಿಯಲ್ಲಿ ಹೊಸನಗರ ತಾಲೂಕಿನ ಅನೇಕ ಮಸೀದಿ ಮತ್ತು ಮದರಸಗಳಿಗೆ ನೆರವನ್ನು ನೀಡಿದ್ದರು.ಇದರಲ್ಲೇ ಅವರ ಜಾತ್ಯಾತೀತ ನಿಲುವು ಸ್ಪಷ್ಟವಾಗಿ ತಿಳಿಯುತ್ತದೆ.

ಈ ಬಾರಿ ಶಿವಮೊಗ್ಗ ನಗರದ ಅಲ್ಪಸಂಖ್ಯಾತ ಬಂಧುಗಳು ಮತಗಳನ್ನು ವಿಭಜನೆ ಮಾಡಿ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡದೇ ಏಕಪಕ್ಷೀಯವಾಗಿ ಆಯನೂರು ಮಂಜುನಾಥ್ ರವರಿಗೆ ಬೆಂಬಲಿಸಿ ಅವರನ್ನು ಅತಿ ಹೆಚ್ಚು ಬಹುಮತದಿಂದ ಆಯ್ಕೆ ಮಾಡುವ ಮೂಲಕ ಶಿವಮೊಗ್ಗ ವನ್ನು ಶಾಂತಿಯತ್ತ ಕೊಂಡೊಯ್ಯಬೇಕಾಗಿದೆ ಎಂದು ಅಲ್ಪಸಂಖ್ಯಾತರಿಗೆ ಕರೆ ನೀಡಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ವೈ ಹೆಚ್ ನಾಗರಾಜ್, ಎಸ್ ವಿ ರಾಜಮ್ಮ, ಆಯನೂರು ಶಿವನಾಯ್ಕ್, ಜಿ.ಎಸ್ ವರದರಾಜ್ ಹಾಗೂ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!