Categories: Shivamogga

ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್ FM ಟ್ರಾನ್ಸ್ ಮೀಟರ್ ; ಸಂಸದ ಬಿವೈಆರ್

ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ
ಪ್ರಸ್ತುತ 1 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ ಮೀಟರ್ ಬದಲಿಗೆ ಶಿವಮೊಗ್ಗಕ್ಕೆ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ ಮೀಟರ್ ಪ್ರಸಾರ ಭಾರತಿ ಮಂಜೂರು ಮಾಡಿ 10
ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಅವರು ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಜೂರಾದ 10 ಕಿಲೋ ವ್ಯಾಟ್ ಎಫ್ಎಂ ಟ್ರಾನ್ಸ್ಮೀಟರ್‌ನಿಂದ ಶಿವಮೊಗ್ಗ
ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆ, ರೈತಪರ ಯೋಜನೆ, ಹಾಗೂ ಇತರೆ ಕ್ಷೇತ್ರಗಳ ಅಭಿವೃದ್ಧಿಗಳು ಜಗತ್ತಿಗೆ ಪರಿಚಯವಾಗಲಿದೆ ಎಂದರು.


ಮಂಜೂರಾದ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಭದ್ರಾವತಿಯಿಂದ 20 ಕಿ,ಮೀ ದೂರದಲ್ಲಿರುವ ಶಿವಮೊಗ್ಗದಲ್ಲಿ ಈಗ ನಿಷ್ಕ್ರೀಯವಾಗಿರುವ ದೂರದರ್ಶನ ಹೈಪವರ್ ಟ್ರಾನ್ಸ್ಮೀಟರ್‌ನಲ್ಲಿರುವ 100 ಮೀಟರ್ ಬದಲಾಗಿ 150 ಮೀಟರ್ ಎತ್ತರದ ಗೋಪುರದ ಮೇಲೆ ಸ್ಥಾಪನೆಗೊಳ್ಳಲಿದೆ ಎಂದರು.


ಭದ್ರಾವತಿ ಆಕಾಶವಾಣಿ ಕೇಂದ್ರಕ್ಕಿಂತ‌ ಎತ್ತರವಾದ ಮತ್ತು ಎಲ್ಲಾ ಸೌಲಭ್ಯ ಹೊಂದಿರುವ ಶಿವಮೊಗ್ಗದ ದೂರದರ್ಶನ ಕೇಂದ್ರದಲ್ಲಿ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪಿಸುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಭದ್ರಾವತಿಯಲ್ಲಿರುವ ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಸ್ಟುಡಿಯೋಗಳನ್ನು ರೆಕಾರ್ಡಿಂಗ್ ಮತ್ತು ಪ್ರಸಾರ ಸೇರಿದಂತೆ ಎಂದಿನಂತೆ ಬಳಸಬಹುದು. ಮತ್ತು ಆಕಾಶವಾಣಿ ಭದ್ರಾವತಿ ಎಂದೇ ಪ್ರಸಾರ ಕಾರ್ಯಗಳನ್ನು
ಭದ್ರಾವತಿ ಆಕಾಶವಾಣಿ ಕೇಂದ್ರದಿಂದಲೇ ಪ್ರಸಾರ ನಡೆಸಲಾಗುವುದು. ಆದಾಗ್ಯೂ ವಿವಿಐಪಿ ರೆಕಾರ್ಡಿಂಗ್ ಮತ್ತು ತುರ್ತು ರೆಕಾರ್ಡಿಂಗ್‌ಗಳಿಗೆ ಅನುಕೂಲವಾಗುವಂತೆ
ಶಿವಮೊಗ್ಗದಲ್ಲಿ 10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಸ್ಥಾಪನೆಯ ಜೊತೆಗೆ ತಾತ್ಕಾಲಿಕ ಸ್ಟುಡಿಯೋ ಸ್ಥಾಪಿಸುವ ಅಗತ್ಯವಿದೆ ಎಂದರು.


10 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ
ಅನುರಾಗ್ ಠಾಕೂರ್, ಪ್ರಸಾರ ಭಾರತಿಯ ಸಿಇಒ ಅವರಿಗೆ ಅಭಿನಂದಿಸಿದರು.


ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್‌ಯೋಜನೆಯಡಿ ವಿಮಾನ ಯಾನ ಸೇವೆ ನೀಡಲು ಸ್ಪೈಸ್ ಜೆಟ್, ಸ್ಟಾರ್ ಏರ್‌ಲೈನ್ಸ್ ಮತ್ತು ಅಲಯನ್ಸ್ ಏರ್‌ಲೈನ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದರು.


ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ಏರ್‌ಲೈನ್ಸ್ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ದತೆ ನಡೆಸಿದ್ದು, ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಅವು ಕಾರ್ಯಾಚರಣೆ ನಡೆಸಲಿವೆ. ಆ.11ರಂದು ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆ.31ಕ್ಕೆ ಮುಂದೂಡಲ್ಪಟ್ಟಿದೆ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಸ್. ದತ್ತಾತ್ರಿ, ಬಿ.ಕೆ. ಶ್ರೀನಾಥ್, ಶಿವರಾಜ್, ಬಳ್ಳೇಕೆರೆ ಸಂತೋಷ್, ಚಂದ್ರಶೇಖರ್, ನವೀನ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

“ಭದ್ರಾವತಿಯ 100 ಮೀಟರ್ ಟವರ್‌ನಲ್ಲಿ ಪ್ರಸ್ತುತ ಇರುವ 1 ಕಿಲೋ ವ್ಯಾಟ್ ಎಫ್‌ಎಂ ಟ್ರಾನ್ಸ್ಮೀಟರ್ ಬದಲಿಗೆ ಶಿವಮೊಗ್ಗದ ದೂರದರ್ಶನ ಕೇಂದ್ರದ 150‌ ಮೀಟರ್ ಟವರ್‌ನಲ್ಲಿ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಸುವುದರಿಂದ ವಿಶಾಲವಾದ ವ್ಯಾಪ್ತಿಯ ಪ್ರದೇಶಕ್ಕೆ ಪ್ರಸಾರ ಮಾಡಲು ಅನುಕೂಲವಾಗುತ್ತದೆ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಲು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಟ್ರಾನ್ಸ್ಮೀಟರ್ ಅಳವಡಿಕೆಗೆ ಡಿಸೆಂಬರ್ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ.”
– ಬಿ.ವೈ.ರಾಘವೇಂದ್ರ, ಸಂಸದ

Malnad Times

Recent Posts

ಸೊರಬ ಮತಗಟ್ಟೆ ಸಂಖ್ಯೆ 159 ರಲ್ಲಿ ಕೈಕೊಟ್ಟ ಮತಯಂತ್ರ, ಸ್ಥಗಿತಗೊಂಡ ಮತದಾನ

ಸೊರಬ: ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ (ಪೂರ್ವ ಭಾಗ) ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು…

2 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಬೆಳಗ್ಗೆ 9 ಗಂಟೆಯವರೆಗೆ ಶೇ. 11.39 ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು ?

ಶಿವಮೊಗ್ಗ : ಉತ್ತರ ಮತ್ತು ಮಧ್ಯ ಕರ್ನಾಟಕ ಕ್ಷೇತ್ರಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ…

2 hours ago

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

5 hours ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

16 hours ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

17 hours ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

18 hours ago