ಶ್ರೀ ಕ್ರೋಧಿನಾಮ ಸಂವತ್ಸರ : ಪಂಚಾಂಗ ಶ್ರವಣ | ‘ಸತ್ಯ-ಧರ್ಮ ಪರಿಪಾಲನೆಯಿಂದ ಪ್ರಾಮಾಣಿಕ ಸೇವೆ ಅಗತ್ಯ’ಮಳೆ-ಬೆಳೆ ಸಮೃದ್ಧಿಯಾಗಲಿ’ ; ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಜೈನ ಮಠದಲ್ಲಿ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಸನ್ನಿಧಿಯಲ್ಲಿ ಪ್ರಾತಃಕಾಲ ಜಿನದೇವರ ಶ್ರೀಮುಖ ದರ್ಶನವನ್ನು ಭಕ್ತರು ಭಕ್ತಿಭಾವದಿಂದ ಪಡೆದರು. ಶ್ರೀ ಕ್ರೋಧಿನಾಮ ಸಂವತ್ಸರದ ಆರಂಭದ ಶುಭದಿನ ಯುಗಾದಿ ಪಾಡ್ಯವಾಗಿದ್ದು ವಿಶೇಷ ಅಲಂಕಾರ ಪೂಜೆ, ಅಷ್ಟವಿಧಾರ್ಚನೆ ವಿಧಿ-ವಿಧಾನಗಳು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಪರಂಪರಾಗತ ಪದ್ಧತಿಯಲ್ಲಿ ಪೂಜಾ ವಿಧಾನಗಳು ನೆರವೇರಿದವು. ಮಂಗಳವಾದ್ಯ, ಪುರೋಹಿತರಿಂದ ಮಂತ್ರಪಠಣ, ಭಕ್ತರಿಂದ ನಿತ್ಯ ಸ್ತೋತ್ರ ಪಠಣ ಸಾಂಗವಾಗಿ ನಡೆಯಿತು.

ಗೋಧೋಳಿ ಮುಹೂರ್ತದಲ್ಲಿ ಶ್ರೀ ಪಂಚಾಗ ಶ್ರವಣ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು ‘ಜೈನಧರ್ಮದನ್ವಯ ಜ್ಯೋತಿಷ್ಯ ಶಾಸ್ತçದ ಪಂಚಾಂಗವು ಸರ್ವರ ಜೀವನವನ್ನು ಸಂಕಷ್ಟದಿಂದ ದೂರವಿಡಲು ಸಕಾರಾತ್ಮಕ ಮಾರ್ಗದರ್ಶಕ’ ಎಂದು ವಿವರಿಸುತ್ತಾ ‘ನಿತ್ಯ ಜೀವನದಲ್ಲಿ ಸಾತ್ವಿಕ ಧರ್ಮ ಪಾಲನೆಯಿಂದ ಶಿಕ್ಷಣ, ಕೃಷಿ, ಉದ್ಯಮ, ವಾಣಿಜ್ಯ, ವೈದ್ಯಕೀಯ ತಂತ್ರಜ್ಞಾನದ ಸಂಶೋಧನೆಗೆ ಪಂಚಾಂಗವು ನಾಂದಿ’ ಎಂಬ ವಿಚಾರವನ್ನು ತಿಳಿಸಿದರು. ಸರ್ವರಿಗೂ ಶ್ರೀ ಕ್ರೋಧಿನಾಮ ಸಂವತ್ಸರ ಶಾಂತಿ-ನೆಮ್ಮದಿ ಆರೋಗ್ಯ ವರ್ಧಿಸಲಿ ಎಂದು ಹರಸಿದರು.

‘ಕ್ರೋಧವನ್ನು ತ್ಯಜಿಸಿ ಪೂಜೆ, ತಪ, ಸ್ವಾಧ್ಯಾಯಗಳಿಂದ ಸಂವತ್ಸರದಲ್ಲಿ ಶುಭ ಕಾರ್ಯಗಳು ನೆರವೇರಲಿ, ರಾಷ್ಟ್ರ ಸಮೃದ್ಧಿಯಾಗಲಿ’ ಎಂದು ಹರಸಿದರು.

ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ, ಭರತ ಇಂದ್ರ, ಹೊಂಬುಜ ಜೈನ ಸಮಾಜ, ಮಹಿಳಾ ಸಮಾಜ, ಆಗಮಿಸಿದ ಭಕ್ತರು ಶ್ರೀಗಳಿಂದ ಶ್ರೀ ಮಂತ್ರಾಕ್ಷತೆ ಸ್ವೀಕರಿಸಿದರು.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

7 days ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

1 week ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

1 week ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

1 week ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago