ಹೊಸನಗರದಲ್ಲಿ ಅ. 21 ಮತ್ತು 22 ರಂದು 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ

ಹೊಸನಗರ: ಪಟ್ಟಣದ ಕೆ.ಇ.ಬಿ ಇಲಾಖೆಯ ಎದುರಿನಲ್ಲಿರುವ ಕುವೆಂಪು ವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 21 ಶನಿವಾರ ಮತ್ತು 22 ಭಾನುವಾರ 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಮ್ಮ ರೇವಣ್ಣಪ್ಪ ಗೌಡ ಹಾಗೂ ಶರಣ ಸಾಹಿತ್ಯ ಪರಿಷತ್ ಸಂಚಾಲಕರಾದ ಹೆಚ್.ಆರ್. ಗಂಗಾಧರಯ್ಯ ಹೇಳಿದರು.

ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು ಹೊಸನಗರ ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ನಾಡಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ.ಮ. ನರಸಿಂಹರವರು ನೆರವೇರಿಸಲಿದ್ದು ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷರಾದ ಎಚ್.ಎನ್ ಮಹಾರುದ್ರರವರು ನೆರವೇರಿಸಲಿದ್ದಾರೆ.

ಹೊಸನಗರ ಗಣಪತಿ ದೇವಸ್ಥಾನದ ಆವರಣದಿಂದ ಕೆಳದಿ ಶಿವಪ್ಪನಾಯಕ ಜ್ಯೋತಿಯ ಸ್ವಾಗತವನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಎಂ.ವಿ. ಜಯರಾಮ್‌ರವರು ಸ್ವೀಕರಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗಣಪತಿ ದೇವಸ್ಥಾನದಿಂದ ಪ್ರಾರಂಭವಾಗಲಿದ್ದು ಮೆರವಣಿಗೆ ಉದ್ಘಾಟನೆಯನ್ನು ವರ್ತಕರಾದ ಶ್ರೀನಿವಾಸ್ ಕಾಮತ್‌ರವರು ಮಾಡಲಿದ್ದು ವಚನ ಪಟುಗಳಿಗೆ ಪುಷ್ಪಾರ್ಚನೆ ಎನ್.ಆರ್. ದೇವಾನಂದ್‌ರವರು ನೆರವರಿಸಲಿದ್ದಾರೆ. ಬಸವಣ್ಣನವರ ಭಾವಚಿತ್ರಕ್ಕೆ ಹೆಚ್.ಎನ್ ಶ್ರೀಪತಿರಾವ್ ಪುಷ್ಪಾರ್ಚನೆ ಮಾಡಲಿದ್ದಾರೆ.

ಸಭಾ ಉದ್ಘಾಟನೆ:
ನಂತರ ಉದ್ಯಾಟನೆ ಕಾರ್ಯಕ್ರಮ ಆರಂಭವಾಗಲಿದ್ದು ಈ ಸಮಾರಂಭಕ್ಕೆ ದಿವ್ಯ ಸಾನ್ನಿಧ್ಯವನ್ನು ಆನಂದಪುರ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಗಳು ವಹಿಸಲಿದ್ದು ನೇತೃತ್ವ ಅಭಿನವ ಚನ್ನಬಸವ ಸ್ವಾಮಿಗಳು ವಹಿಸಲಿದ್ದಾರೆ.

ಸಮ್ಮೇಳನದ ಉದ್ಘಾಟನೆಯನ್ನು ಮಾತಾ ಬಿ.ಮಂಜಮ್ಮ ಜೋಗತಿಯವರು ಉದ್ಘಾಟಿಸಲಿದ್ದು ವಿಶೇಷ ಆಹ್ವಾನಿತರಾಗಿ ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪನವರು ಆಗಮಿಸಲಿದ್ದಾರೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ|| ಸೊನಲೆ ಶ್ರೀನಿವಾಸ್‌ರವರು ವಹಿಸಲಿದ್ದು ಸಮ್ಮೇಳನಾಧ್ಯಕ್ಷರಾದ ನಗರ ಅಂಬ್ರಯ್ಯಮಠ, ಡಾ|| ಜೆ.ವಿ ಜಯ ರಾಜಶೇಖರ್ ಎಚ್.ಎನ್ ಮಹಾರುದ್ರ, ಪ್ರಾಸ್ತವಿಕ ನುಡಿ ಕಾರ್ಯಧ್ಯಕ್ಷರಾದ ಬಿ.ಜಿ. ಚಂದ್ರಮೌಳಿ ನುಡಿಯಲಿದ್ದಾರೆ.

ಮುಖ್ಯ ಅತಿಥಿಯಾಗಿ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ್, ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ, ಭೋಜೇಗೌಡ ಇನ್ನೂ ಮುಂತಾದವರು ಆಗಮಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಮಲೆನಾಡು-ಶರಣ ಪರಂಪರೆ ವಿಷಯ ಮಂಡಣೆ ಡಾ|| ಶ್ರೀಪತಿ ಹಳಗುಂದ, ಪ್ರಶಾಂತ್, ಸಂವಾದ ನಿರ್ವಹಣೆ ಶಿವಯೋಗಿ ಹಂಚಿನಮನೆ, ಉಪಸ್ಥಿತಿ ರುದ್ರಮುನಿ ಎನ್ ಸಜ್ಜನ್, ಹಾಲಾಡಿ ಉಮೇಶ್, ಕತ್ತಿಗೆ ಚನ್ನಪ್ಪ, ಜಯಶೀಲಪ್ಪ, ಬಿ.ಜಿ.ನಾಗರಾಜ್, ಶ್ರೀಮತಿ ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಸಮ್ಮೇಳನಾಧ್ಯಕ್ಷರ ಬದುಕು-ಬರಹ ವಸುದಾ ಚೈತನ್ಯರವರು ಮಾತನಾಡಲಿದ್ದು ಗುರುರಾಜ್, ಅಶ್ವಿನಿಕುಮಾರ್, ನಾಗಪ್ಪ, ಕೆ.ಆರ್ ಲಿಂಗಪ್ಪನವರು ಉಪಸ್ಥಿತರಿರುವರು.

ಅಕ್ಕಮಹಾದೇವಿ ಸಂದೇಶಸಾರವನ್ನು ಶರಣೆ ಜಯಂತಿ ಅಕ್ಕ ನವರು ಮಂಡಿಸಲಿದ್ದು ಮಲೆನಾಡಿನ ವೈಚಾರಿಕ ಸಾಹಿತ್ಯದಲ್ಲಿ ವಚನಗಳ ಪ್ರಭಾವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಶುಭಾ ಮರವಂತೆ ವಿಷಯ ಮಂಡಣೆ ಡಾ|| ಕೆ.ಎನ್ ಅಂಜಲಿ ಡಾ|| ಪವಿತ್ರ, ಡಾ|| ಅನಿತಾ ಹೆಗ್ಗೋಡು ಮಂಡಿಸಲಿದ್ದು ಸಂವಾದ ನಿರ್ವಹಣೆ ಎನ್.ಡಿ ಹೆಗಡೆಯವರು ನಿರ್ವಹಿಸಲಿದ್ದಾರೆ.

ಸಮಾರೋಪ ಸಮಾರಂಭ:
ಭಾನುವಾರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಮಾರೋಪದಲ್ಲಿ ಜಡೆ ಮಠದ ಮಹಾಂತ ಸ್ವಾಮಿಗಳ ದಿವ್ಯ ಸಾನಿಧ್ಯಲ್ಲಿ ನಡೆಯಲಿದ್ದು ಸಮ್ಮೇಳನಾಧ್ಯಕ್ಷರಾದ ಅಂಬ್ರಯ್ಯಮಠ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರರವರು ಆಗಮಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್.ಎನ್. ಮಹಾರುದ್ರರವರು ವಹಿಸಲಿದ್ದು ನಿರ್ಣಯಗಳ ಮಂಡಣೆ ಚನ್ನಬಸಪ್ಪ ಗೌಡರವರು ಮಂಡಿಸಲಿದ್ದಾರೆ. ವಿಧಾನಸಭಾ ಸದಸ್ಯರಾದ ಬಿ.ಕೆ.ಸಂಗಮೇಶ್ವರ, ಶಾರದ ಪೂರ‍್ಯನಾಯ್ಕ್, ಎಸ್.ಎನ್ ಚನ್ನಬಸಪ್ಪ, ಡಿ.ಎಸ್ ಅರುಣ್, ಇಂದೂಧರ ಗೌಡ, ಹೆಚ್.ಬಿ. ಕಲ್ಯಾಣಪ್ಪ ಗೌಡ, ಮಲ್ಲಿಕಾರ್ಜುನ ಹಕ್ರೆ, ಯುವರಾಜ್ ಗೌಡ, ಡಿ.ಆರ್. ವಿನಯ್‌ಕುಮಾರ್, ಕೆ.ಎನ್ ನಂಜುಂಡಪ್ಪ, ಗಾಯಿತ್ರಿ ಪಟೇಲ್, ಎಂ ಬಸವಣ್ಯಪ್ಪ, ಜಗದೀಶ್ ಕಾಗಿನಲ್ಲಿಯವರು ಆಗಮಿಸಲಿದ್ದಾರೆ.

ಶನಿವಾರ ಸಂಜೆ 5;30ಕ್ಕೆ ಹೊಸನಗರದ ಆಸ್ಪತ್ರೆ ಪಕ್ಕದ ಮೈದಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರಗತಿ ಸಂಯುಕ್ತ ಪ್ರೌಢಶಾಲೆ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ರಿಪ್ಪನ್‌ಪೇಟೆ ಹಾಗೂ ಹೊಸನಗರ ತಂಡಗಳ ನಡುವೆ ಸೌಹಾರ್ದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಈ ಎರಡು ದಿನಗಳ ಕಾಲ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ತಾಲ್ಲೂಕುಗಳಿಂದ ಶರಣ ಸಾಹಿತ್ಯ ಪರಿಷತ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

6 days ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

7 days ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

7 days ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

7 days ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago