ಹೊಸನಗರದಲ್ಲಿ ಫೆ. 25 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ; ಗುಬ್ಬಿಗ ಅನಂತರಾವ್

ಹೊಸನಗರ: ಪಟ್ಟಣದ ಸ್ಫೋಟ್ಸ್ ಅಸೋಸಿಯೇಷನ್‌ ಕ್ಲಬ್ ಆವರಣದಲ್ಲಿ ಫೆ. 25ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸ್ಫೋಟ್ಸ್ ಅಸೋಸಿಯೇಷನ್‌ ಕ್ಲಬ್ ಅಧ್ಯಕ್ಷ ಗುಬ್ಬಿಗ ಅನಂತರಾವ್‌ ಹೇಳಿದರು.

ಇಲ್ಲಿನ ಸ್ಫೋಟ್ಸ್ ಕ್ಲಬ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ತಪಾಸಣೆ ಕಾರ್ಯಕ್ರಮ ಆರೈಕೆ ಆಸ್ಪತ್ರೆ ಶಿವಮೊಗ್ಗ ಸ್ಫೋಟ್ಸ್ ಅಸೋಸಿಯೇಷನ್‌ ಕ್ಲಬ್ ಹೊಸನಗರ, ಜೆಎಸಿ ಮತ್ತು ಜೇಸಿಐ ಮತ್ತು ಕೊಡಚಾದ್ರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ ಎಂದರು.

ಹೊಸನಗರ ಇತಿಹಾಸದಲ್ಲಿಯೇ ಇಂಥಹ ಶಿಬಿರ ಏರ್ಪಸುತ್ತಿರುವುದು ಪ್ರಪ್ರಥಮವಾಗಿದ್ದು ಈ ಶಿಬಿರದಲ್ಲಿ ರಕ್ತ ಪರೀಕ್ಷೆ, ಬಿ.ಪಿ, ಶುಗರ್ ಪರೀಕ್ಷೆ, ಇ.ಸಿ.ಜಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದ್ದು ಅರ್ಹರಿಗೆ ಉಚಿತ ಔಷಧ, ಮಾತ್ರೆಗಳನ್ನು ನೀಡಲಾಗುವುದು ಎಂದರು.

ಈ ತಪಾಸಣಾ ಶಿಬಿರದಲ್ಲಿ ಎಂಬಿ.ಬಿ.ಎಸ್ ಜನರಲ್ ಸರ್ಜನ್ ಡಾ. ಜಿ.ಡಿ ನಾರಾಯಣಪ್ಪ, ಅರವಳಿಕೆ ತಜ್ಞರಾದ ಡಾ. ಸುರೇಶ ಕೆ.ಎಂ ಚರ್ಮರೋಗ ತಜ್ಞರಾದ ಡಾ. ಆಶಾ, ಪ್ರಸೂತಿ ಮತ್ತು ಸ್ತ್ರಿ ರೋಗ ತಜ್ಞರಾದ ಡಾ. ಅಮೃತಾಂಶು, ಕೀಲು ಮತ್ತು ಮೂಳೆ ರೋಗ ತಜ್ಞರಾದ ಡಾ. ವಿನಯ್ ಕೆ.ವೈ ಹಾಗೂ ಫ್ಯಾಮಿಲಿ ಮೆಡಿಸಿನ್ ಡಾ. ಮಂಜುನಾಥ್ ಹಾಗೂ ದಂತ ವೈದ್ಯೆ ಡಾ. ಅನಿತಾ ಇನ್ನೂ ಮುಂತಾದವರು ಉಪಸ್ಥಿತರಿರುವರು.

ಸ್ಫೋಟ್ಸ್ ಅಸೋಸಿಯೇಷನ್‌ ಇವರ ಅತಿಥ್ಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ರೋಗಿಗಳು ಕಾಯಿಲೆಯ ಲಕ್ಷಣ ಇರುವವರು ಉಚಿತವಾಗಿ ಎಲ್ಲಾ ತಪಾಸಣೆಗಳನ್ನು ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ಹೆಸರನ್ನು 9448189375, 94484474912, 9448446382, 8105796167 ಈ ಮೊಬೈಲ್ ನಂಬರ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬೇಕೆಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಪರಮೇಶ್ವರರಾವ್, ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಬ್ಯಾಂಕ್ ಶ್ರೀಧರ, ಬಿ.ಎಸ್ ಸುರೇಶ, ಎಂ.ಪಿ ಸುರೇಶ, ಎಂ.ವಿ ಸುರೇಶ, ಕಲ್ಯಾಣಪ್ಪ ಗೌಡ, ಸತ್ಯನಾರಾಯಣ, ಕೆ.ಬಿ ಸತೀಶ, ಮಹೇಂದ್ರ, ಮಳಲಿ ಶ್ರೀಕಾಂತ, ವ್ಯವಸ್ಥಾಪಕರಾದ ಕಟ್ಟೆ ಸುರೇಶ, ಕೃಷ್ಣಮೂರ್ತಿ ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

Malnad Times

Recent Posts

Rain Alert | ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿರುಗಾಳಿ…

7 days ago

Shivamogga Loksabha Constituency | ಮತದಾನಕ್ಕೆ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಮತಯಂತ್ರಗಳು

ಶಿವಮೊಗ್ಗ : ಮಂಗಳವಾರ ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಗಳು ನಡೆದಿದ್ದು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಇಂದು ಮತಗಟ್ಟೆಗಳಿಗೆ ಅಗತ್ಯವಾದ…

1 week ago

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು !

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು ! ಎನ್.ಆರ್.ಪುರ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

1 week ago

ಮತದಾನಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳಿಗೆ ಮತಯಂತ್ರ ಇತರ ಪರಿಕರಗಳೊಂದಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

ಶಿವಮೊಗ್ಗ :ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ…

1 week ago

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

1 week ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

1 week ago