ಹೊಸನಗರದ ನವೀಕೃತ ಜುಮ್ಮ ಮಸೀದಿ ಉದ್ಘಾಟನಾ ಸಮಾರಂಭ | ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮಗಳ ಸಂಗಮ ಸಹಬಾಳ್ವೆಯಿಂದ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ‌ ; ಅಬೂಬಕರ್ ಹಮ್ಮಿದ್ ಮದನಿ

ಹೊಸನಗರ: ಪ್ರಪಂಚದಲ್ಲಿ ಇರುವ ಜನರು ಸಹಬಾಳ್ವೆಯಿಂದ ಶಾಂತಿಯುತವಾಗಿ ಜೀವನ ಸಾಗಿಸಿದರೇ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದು ಅಬೂಬಕರ್ ಹಮ್ಮಿದ್ ಮದನಿಯವರು ಹೇಳಿದರು.

ಪಟ್ಟಣದ ಜುಮ್ಮ ಮಸೀದಿಯ ಆವರಣದಲ್ಲಿ ನವೀಕೃತ ಮಸೀದಿಯಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಸರ್ವಧರ್ಮಗಳ ಶಾಂತಿಯ ತೋಟ ಎಂಬುವುದಕ್ಕೆ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚರ್ಚ್ ಗುರುಗಳಾದ ಫಾದರ್ ಸೈಮನ್ ಹರ್ಟ್ ಹಾಗೂ ಬಾಳೆಹೊನ್ನೂರು ಮಸೀದಿಯ ಗುರುಗಳಾದ ಹಮ್ಮಿಮ್ ತಂಗಲ್ ಇವರ ಸಾನಿಧ್ಯದಲ್ಲಿ ನಾವೆಲ್ಲ ಇಂದು ಈ ಕಾರ್ಯಕ್ರಮಕ್ಕೆ ಭೈಗಿಯಾಗಿದ್ದೇವೆ. ಸರ್ವ ಧರ್ಮಗಳ ಶಾಂತಿಯ ತೋಟ ಎಂಬುವುದಕ್ಕೆ ನಮ್ಮ ಮಸೀದಿ ಕಾರ್ಯಕ್ರಮ ಸಾಕ್ಷಿಯಾಗಬೇಕು ಎಂದು ಮೂರು ಧರ್ಮಗಳ ದಿವ್ಯ ಸಾನಿಧ್ಯದಲ್ಲಿ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ. ಎಲ್ಲ ಧರ್ಮದಲ್ಲೂ ಧರ್ಮಸ್ಥಾಪನೆ ಮಾಡಿದವರು ಶಾಂತಿ ಸೌಹಾರ್ದತೆಗೆ ಕರೆ ಕೊಟ್ಟಿದ್ದಾರೆ. ಅಹಿಂಸೆ ಅರಾಜಕತೆಗೆ ಯಾವುದೇ ಧರ್ಮದಲ್ಲೂ ಸಹಮತವಿಲ್ಲ ಇನ್ನೊಬ್ಬರಿಗೆ ನೋಯಿಸಿ ಬದುಕಲು ಯಾವ ಧರ್ಮವು ಸಹ ಪ್ರೇರಣೆ ಕೊಡುವುದಿಲ್ಲ ಎಂಬ ನುಡಿಗಳೊಂದಿಗೆ ಆಶೀರ್ವಚನ ನೀಡಿದರು.

ಸರ್ವ ಜನರು ಸೇರುವ ಸ್ಥಳವಾಗಬೇಕು: ಮೂಲೆಗದ್ದೆ ಶ್ರೀಗಳು
ನವೀಕೃತ ಮಸೀದಿ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಿದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮಂದಿರ ಮಸೀದಿ ಹಾಗೂ ಚರ್ಚ್‌ಗಳು ಸರ್ವ ಜನಾಂಗದವರು ಸೇರಿ ಆಶೀರ್ವಚನ ಪಡೆಯುವ ಸ್ಥಳವಾಗಬೇಕು. ಅದನ್ನು ಬಿಟ್ಟು ದ್ವೇಷ ಬೆಳೆಸುವ ಸ್ಥಳವಾಗಬಾರದು. ನಾವು ನೀಡುವ ಆಶೀರ್ವಚನದಿಂದ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಜನರು ಬದುಕುವ ದಾರಿ ತೋರಿಸುವಂತಿರಬೇಕು. ನಮ್ಮ ಮೂಲೆಗದ್ದೆ ಮಠದಲ್ಲಿ ಎಲ್ಲ ಧರ್ಮದವರು ಎಲ್ಲ ಜಾತಿ ಪಂಗಡಗಳು ಎಲ್ಲ ಧರ್ಮದ ಗುರುಗಳು ಭೇಟಿ ನೀಡುತ್ತಾರೆ. ನಮ್ಮ ಮಠ ಯಾರಿಗೂ ಯಾವ ಧರ್ಮದವರಿಗೂ ಎಲ್ಲ ಜಾತಿ ಪಂಗಡಗಳನ್ನು ನಮ್ಮ ಮಠದ ಭಕ್ತರಂತೆ ಆಶೀರ್ವಚನ ನೀಡುತ್ತೇವೆ. ಆದ್ದರಿಂದ ಹೊಸನಗರ ತಾಲ್ಲೂಕಿನಲ್ಲಿ ಸಾಮರಸ್ಯದ ಊರಾಗಿದೆ. ನಮ್ಮ ತಾಲ್ಲೂಕಿನಲ್ಲಿ ಎಲ್ಲ ಜಾತಿ ಧರ್ಮ ಪಂಗಡಗಳು ಶಾಂತಿಯಿಂದ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಯಾರೇ ಹುಳಿ ಹಿಂಡಿದರೂ ಅದಕ್ಕೆ ಕಿವಿಗೊಡಬಾರದೆಂದರು.

ಶಾಂತಿ ನೆಮ್ಮದಿಯ ತಾವರೂರಾಗಿದೆ: ಫಾದರ್ ಸೈಮನ್ ಹರ್ಟ್
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹೊಸನಗರದ ಚರ್ಚ್ ಗುರುಗಳಾದ ಫಾದರ್ ಸೈಮನ್ ಹರ್ಟ್ರವರು, ಯೇಸುಕ್ರಿಸ್ತರು ಶಾಂತಿಯ ಸಾಮರಸ್ಯದ ಬದುಕಿಗೆ ಮಹತ್ವ ನೀಡಿರುವ ಬಗ್ಗೆ ವಿವರಿಸಿ, ಹೊಸನಗರ ಊರು ಎಲ್ಲ ಧರ್ಮ ಭಾಂದವರ ಸುಂದರನಾಡು. ಹೊಸನಗರದಲ್ಲಿ ಎಲ್ಲ ಧರ್ಮದವರು ಹೊಂದಾಣಿಕೆಯಿಂದ ಜೀವನ ಸಾಗಿಸುತ್ತಿದ್ದು ಇದರಿಂದ ನಮ್ಮ ಊರು ಶಾಂತಿಯಿಂದಿದ್ದೆ ಎಂದರು.

ಮಸೀದಿ ಉದ್ಘಾಟಿಸಿ ಮಾತನಾಡಿದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾದರೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಈ ದಿಕ್ಕಿನಲ್ಲಿ ಪ್ರಯತ್ನಿಸಿ ಸಮಾಜದ ಏಳಿಗೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಮೂರು ದಿನದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಎನ್.ಆರ್ ದೇವಾನಂದ್, ಬಿ.ಜಿ.ನಾಗರಾಜ್, ನ್ಯಾಶನಲ್ ಗ್ರೂಪ್ ಮಾಲೀಕರಾದ ಅಬ್ದುಲ್ ರೆಹಮಾನ್ ಬದುರುದ್ದೀನ್ ಝುರಿ, ಕೆ.ಎ.ಮೊಹಮದ್ ಯಾಸೀರ್, ಜಿ. ಮೊಹಮದ್ ಹಾಜಿ, ಯೂಸುಫ್ ಹಾಜಿ, ಸಿದ್ಧಿ ಹಬ್ಬ, ಎನ್ ರಜತ್ ಶೌ ಕತ್ ಆಲಿ, ಮೋಹಿದೀನ್ ಎಂ.ಎಸ್, ಅಬೂಬಕರ್ ಶಿವಮೊಗ್ಗ ಜಿಲ್ಲಾ ವಕ್ಸ್ ಅಧಿಕಾರಿಯಾದ ಸೈಯದ್ ಮೆಹತಾಬ್ ಜಾಮೀಯ ಮಸೀದಿಯ ಗುರುಗಳಾದ ಮುಕ್ತಿ ಮೊಹಮದ್ ಇಂತಿಯಾಜ್, ಸಾಧಿಕ್ ಆಲಿ, ನಿಟ್ಟೂರು ಖಾದರ್, ಮಸೀದಿಯ ಅಧ್ಯಕ್ಷರಾದ ಕೆ.ಎ.ಅಮಾನುಲ್ಲಾ, ಹೆಚ್ ಅಹಮಾದ್‌ಸಾಬ್ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭ ಬರಿ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗದೇ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮವಾಗಬೇಕು ಎನ್ನುವ ಉದ್ಧೇಶದಿಂದ ರಕ್ತದಾನ ಶಿಬಿರ ಹಾಗೂ ಸೌಹಾರ್ದ ಸಮಾರಂಭ ಪ್ರವಚನವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಧರ್ಮದವರನ್ನು ಯಾಸೀರ್‌ರವರು ಅಭಿನಂದಿಸಿದ್ದಾರೆ.

Malnad Times

Recent Posts

ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನಾ ಸ್ಥಳಕ್ಕೆ ಶಾಸಕದ್ವಯರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿಂದು ದರಗೆಲೆ ತರಲೆಂದು ಕಾಡಿಗೆ ತೆರಳಿದ್ದ ಕೂಲಿ ಕೆಲಸಗಾರ ತಿಮ್ಮಪ್ಪ…

3 hours ago

BIG BREAKING NEWS ; ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ರಿಪ್ಪನ್‌ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ತಿಮ್ಮಪ್ಪ ಬಿನ್…

7 hours ago

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

19 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

22 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

23 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

1 day ago