03 ತಂಡಳಿಂದ ಪ್ರತ್ಯೇಕ ದಾಳಿ ; ಮರಳು ಮತ್ತು ಕಲ್ಲು ತುಂಬಿದ್ದ 13 ವಾಹನಗಳು ವಶಕ್ಕೆ !

0 108

ಶಿವಮೊಗ್ಗ : ಡಿಸಿ ಡಾ. ಸೆಲ್ಬಮಣಿ ಆರ್ ಮತ್ತು ಎಸ್ಪಿ ಮಿಥುನ್ ಕುಮಾರ್ ಜಿ.ಕೆ‌ ಇವರ ಸೂಚನೆಯ ಮೇರೆಗೆ, ಗಜಾನನ ವಾಮನ ಸುತರ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ ಮತ್ತು ಅಮೃತ್ ಅತ್ರೇಶ್, ತಹಸಿಲ್ದಾರ್, ತೀರ್ಥಹಳ್ಳಿ, ತಾಲ್ಲೂಕು ರವರ ಮಾರ್ಗದರ್ಶನದಲ್ಲಿ 03 ತಂಡಗಳು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 11 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 13 ವಾಹನಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ತಂಡ-1: ಪ್ರವೀಣ್ ನೀಲಮ್ಮ ನವರ್, ಪೊಲೀಸ್ ವೃತ್ತ ನಿರೀಕ್ಷಕರು, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶಿವಕುಮಾರ್, ಪೊಲೀಸ್ ಉಪ ನಿರೀಕ್ಷಕರು, ಆಗುಂಬೆ ಪೊಲೀಸ್ ಠಾಣೆ, ಯಶವಂತ್, ಆರ್.ಐ ಮೇಘರವಳ್ಳಿ, ಕುಮಾರ್, ಪಿಡಿಓ ಹೊನ್ನೆತಾಳು ರವರ ನೇತೃತ್ವದ ತಂಡವು, ಅರೇಹಳ್ಳಿ, ಮಳಲೂರು, ಬಗ್ಗೋಡಿಗೆ ಮತ್ತು ಆಗುಂಬೆಯಲ್ಲಿ ಜಂಟಿ ದಾಳಿ ನಡೆಸಿ 03 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 05 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ‌.

ತಂಡ-2: ಪ್ರವೀಣ್ ನೀಲಮ್ಮನವತ್ ವೃತ್ತ ನಿರೀಕ್ಷಕರು, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ, ನವೀನ್ ಮಠಪತಿ ಮತ್ತು ಶಿವಾನಂದ್ ಡಿ, ಪೊಲೀಸ್ ಉಪ ನಿರೀಕ್ಷಕರು, ಮಾಳೂರು ಪೊಲೀಸ್ ಠಾಣೆ, ಸುಗುಣೇಶ್, ಆರ್.ಐ ಮತ್ತೂರು, ಸುರೇಶ್, ಪಿಡಿಓ ಕನ್ನಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಮುಡುಬಾದ ಬಳಿ 07 ಮರಳು ತುಂಬಿದ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.

ತಂಡ-3: ಅಶ್ವತ್ ಗೌಡ, ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ, ಸಾಗರ್ ಅತರವಾಲ, ಪೊಲೀಸ್ ಉಪ ನಿರೀಕ್ಷಕರು, ತೀರ್ಥಹಳ್ಳಿ, ಮೌನೀಶ್, ವಿಎ, ಕುರುವಳ್ಳಿ ವೃತ್ತ, ಸಿದ್ದಾರೂಡ, ವಿಎ, ಆರಗ ವೃತ್ತ ಮತ್ತು ರೇಣುಕಾರಾಧ್ಯ, ಪಿಡಿಓ, ದೇವಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಬುಕ್ಲಾಪುರದ ಹತ್ತಿರ ಮರಳು ತುಂಬಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!